For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಇಳಿಕೆಯತ್ತಲೇ ಸಾಗಿದ್ದು, ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.4ರಷ್ಟು ಇಳಿದು 10 ತಿಂಗಳ ಕನಿಷ್ಠ 44,768 ರೂಪಾಯಿಗೆ ತಲುಪಿದೆ.

ಚಿನ್ನದ ಜೊತೆಗೆ ಬೆಳ್ಳಿ ಬೆಲೆಯು ಶೇಕಡಾ 0.8ರಷ್ಟು ಇಳಿದು, ಕೆಜಿಗೆ 67,473 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು 10 ಗ್ರಾಂಗೆ ಶೇಕಡಾ 1.2ರಷ್ಟು ಅಥವಾ 600 ರೂಪಾಯಿನಷ್ಟು ಕುಸಿದಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ ಶೇ. 1.6ರಷ್ಟು ಅಥವಾ 1150 ರೂ. ಕುಸಿದಿದೆ. ಒಟ್ಟಾರೆಯಾಗಿ ಚಿನ್ನವು ಆಗಸ್ಟ್ ಗರಿಷ್ಠ 56,200 ರೂಪಾಯಿನಿಂದ 11,500 ರೂಪಾಯಿ ಕಡಿಮೆಯಾಗಿದೆ.

ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ

 

ಜಾಗತಿಕ ಮಾರುಕಟ್ಟೆಗಳಲ್ಲಿ, ಹಿಂದಿನ ವಹಿವಾಟಿನಲ್ಲಿ ಒಂಬತ್ತು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದ ನಂತರ ಚಿನ್ನದ ಬೆಲೆ ಇಂದು ಔನ್ಸ್‌ಗೆ 1,711 ಯುಎಸ್ ಡಾಲರ್‌ನಷ್ಟಿದೆ.

ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇಕಡಾ 0.4ರಷ್ಟು ಏರಿಕೆಯಾಗಿ 26.18 ಡಾಲರ್‌ಗೆ ತಲುಪಿದ್ದರೆ, ಪಲ್ಲಾಡಿಯಮ್ ಶೇಕಡಾ 0.3 ರಷ್ಟು ಇಳಿಕೆಯಾಗಿ 2,347.52 ಡಾಲರ್‌ಗೆ ತಲುಪಿದೆ. ಪ್ಲಾಟಿನಂ ಶೇಕಡಾ 0.5ರಷ್ಟು 1,161.50 ಡಾಲರ್‌ವರೆಗೆ ತಲುಪಿದೆ.

English summary

Gold Prices Slides Today: Down Rs 11,500 From Record Highs

Gold today extended fall in Indian markets amid rising US bond yields. gold futures fell 0.4% to 10-month low of Rs 44,768 per 10 gram
Story first published: Thursday, March 4, 2021, 10:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X