For Quick Alerts
ALLOW NOTIFICATIONS  
For Daily Alerts

ಎರಡು ದಿನದಲ್ಲಿ 1,100 ರೂ. ಏರಿಕೆಗೊಂಡಿದ್ದ ಚಿನ್ನದ ಬೆಲೆ ಕುಸಿತ

|

ಭಾರತೀಯ ಮಾರುಕಟ್ಟೆಯಲ್ಲಿ ಸತತ ಏರಿಕೆಗೊಂಡು ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಚಿನ್ನದ ಬೆಲೆ ಇಂದು ಕುಸಿತಗೊಂಡಿದೆ. ಎಂಸಿಎಕ್ಸ್‌ನಲ್ಲಿ, ಹಿಂದಿನ ಎರಡು ವಹಿವಾಟುಗಳಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.08ರಷ್ಟು ಕುಸಿದು 48,437 ರೂಪಾಯಿಗೆ ತಲುಪಿದೆ.

 

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಎತ್ತರಕ್ಕೆ ಜಿಗಿತ: ಮೇ 18ರ ದರ ಹೀಗಿದ

ಬೆಳ್ಳಿ ಭವಿಷ್ಯವು ಪ್ರತಿ ಕೆ.ಜಿ.ಗೆ ಶೇಕಡಾ 0.9ರಷ್ಟು ಏರಿಕೆಯಾಗಿ, 73,960 ರೂಪಾಯಿಗೆ ತಲುಪಿದೆ. ಕಳೆದ ಎರಡು ವಹಿವಾಟಿನಲ್ಲಿ, ಚಿನ್ನವು 800 ರೂಪಾಯಿ ಅಥವಾ ಶೇಕಡಾ 1.6ರಷ್ಟು ಹೆಚ್ಚಾಗಿದ್ದರೆ, ಬೆಳ್ಳಿ 2,300 ರೂಪಾಯಿ ಅಥವಾ ಶೇಕಡಾ 3.2ರಷ್ಟು ಏರಿಕೆಗೊಂಡಿದೆ.

ಎರಡು ದಿನದಲ್ಲಿ 1,100 ರೂ. ಏರಿಕೆಗೊಂಡಿದ್ದ ಚಿನ್ನದ ಬೆಲೆ ಕುಸಿತ

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.2ರಷ್ಟು ಏರಿಕೆಯಾಗಿ 1,868.89 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಶೇಕಡಾ 0.2ರಷ್ಟು ಏರಿಕೆಯಾಗಿ 28.23 ಡಾಲರ್‌ಗೆ ತಲುಪಿದೆ. ಪ್ಲ್ಯಾಟಿನಂ ಶೇಕಡಾ 0.2ರಷ್ಟು ಹೆಚ್ಚಳದಿಂದ 1,242.27 ಡಾಲರ್‌ಗೆ ತಲುಪಿದೆ.

ಕಳೆದ ವಹಿವಾಟಿನಲ್ಲಿ 73.20ಕ್ಕೆ ಮುಕ್ತಾಯಗೊಂಡಿದ್ದ ಭಾರತೀಯ ರೂಪಾಯಿ, ಮೇ 18ರಂದು ಅಮೆರಿಕಾ ಡಾಲರ್ ಎದುರು 73.21 ಕ್ಕೆ ತಲುಪಿತು.

English summary

Gold Prices Today Down After Surging Rs 1100 In 2 Days

Gold prices in India dipped today after the recent surge pushed rates to over 3-month highs.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X