For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತೆ ಜಿಗಿತ: ಬೆಳ್ಳಿ ದರ ಹೆಚ್ಚಳ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸೋಮವಾರ (ಮೇ 17) ಏರಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.7ರಷ್ಟು ಏರಿಕೆಗೊಂಡು 48,003 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಶೇಕಡಾ 1.2ರಷ್ಟು ಜಿಗಿದು ಪ್ರತಿ ಕೆಜಿಗೆ 71,940 ರೂಪಾಯಿ ಮುಟ್ಟಿದೆ.

 

ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಮೇ 17ರ ದರ ಇಲ್ಲಿದೆ

ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.5ರಷ್ಟು ಮತ್ತು ಬೆಳ್ಳಿ ಶೇಕಡಾ 0.9ರಷ್ಟು ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಕಳೆದ 3 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಸ್ಪಾಟ್‌ ಚಿನ್ನವು ಔನ್ಸ್‌ಗೆ ಶೇಕಡಾ 0.6ರಷ್ಟು ಏರಿಕೆಗೊಂಡು 1,852.39 ಡಾಲರ್ ತಲುಪಿದೆ.

ಚಿನ್ನದ ಬೆಲೆ ಮತ್ತೆ ಜಿಗಿತ: ಬೆಳ್ಳಿ ದರ ಹೆಚ್ಚಳ

ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಶೇಕಡಾ 0.9ರಷ್ಟು ಏರಿಕೆಯಾಗಿ, ಔನ್ಸ್‌ಗೆ 27.66 ಡಾಲರ್‌ನಷ್ಟಿದ್ದರೆ, ಪ್ಲಾಟಿನಂ ಶೇಕಡಾ 0.3ರಷ್ಟು ಏರಿಕೆ ಕಂಡು 1,228.50 ಡಾಲರ್‌ಗೆ ತಲುಪಿದೆ.

ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಶುಕ್ರವಾರದಂದು 73.29 ರ ಮುಕ್ತಾಯದ ವಿರುದ್ಧ ಭಾರತೀಯ ರೂಪಾಯಿ ಸೋಮವಾರ ಪ್ರತಿ ಡಾಲರ್‌ಗೆ 73.27 ಕ್ಕೆ ತಲುಪಿದೆ.

English summary

Gold Prices Today Jump Again: Silver Rates Surge

Gold and silver prices in India moved higher today, in tandem with uptick in global precious metal rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X