For Quick Alerts
ALLOW NOTIFICATIONS  
For Daily Alerts

3 ದಿನಗಳ ಕುಸಿತದ ಬಳಿಕ ಚಿನ್ನದ ಬೆಲೆ ಏರಿಕೆ: ದಾಖಲೆಯ ಗರಿಷ್ಠ ಮಟ್ಟಕ್ಕಿಂತ 9,000 ರೂಪಾಯಿ ಕಡಿಮೆ

|

ಭಾರತೀಯ ಮಾರುಕಟ್ಟೆಯಲ್ಲಿ ಸತತ ಮೂರು ದಿನಗಳ ಕುಸಿತದ ನಂತರ ಚಿನ್ನದ ಬೆಲೆಗಳು ಇಂದು ಏರಿಕೆ ದಾಖಲಿಸಿದೆ. ಜಾಗತಿಕ ದರಗಳ ಮಧ್ಯೆ ಗಮನಾರ್ಹ ಏರಿಕೆ ಕಂಡಿದ್ದು, ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.3ರಷ್ಟು ಏರಿಕೆ ಕಂಡು 47,389 ರೂಪಾಯಿಗೆ ತಲುಪಿದೆ.

ಇನ್ನು ಚಿನ್ನದ ಜೊತೆ ಬೆಳ್ಳಿ ದರವು ಶೇಕಡಾ 0.7ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 70,621 ರೂಪಾಯಿಗೆ ತಲುಪಿದೆ. ಹಿಂದಿನ ಮೂರು ವಹಿವಾಟುಗಳಲ್ಲಿ ಜಾಗತಿಕ ಮಟ್ಟದಲ್ಲಿ ಏರಿಳಿತಗಳ ನಡುವೆ ಚಿನ್ನವು 800 ರೂಪಾಯಿ ಕುಸಿದಿತ್ತು.

3 ದಿನಗಳ ಕುಸಿತದ ಬಳಿಕ ಚಿನ್ನದ ಬೆಲೆ ಏರಿಕೆ

 

3 ದಿನಗಳ ಕುಸಿತದ ನಂತರ ಚಿನ್ನದ ಬೆಲೆಗಳು ಇಂದು ಹೆಚ್ಚಿನ ಮಟ್ಟದಲ್ಲಿವೆ. ದುರ್ಬಲಗೊಂಡ ಯುಎಸ್ ಡಾಲರ್ ಅಮೂಲ್ಯವಾದ ಲೋಹದ ಮೇಲೆ ಪರಿಣಾಮ ಬೀರಿದೆ. ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.1ರಷ್ಟು ಏರಿಕೆಯಾಗಿ 1,820.71 ಡಾಲರ್‌ಗೆ ತಲುಪಿದೆ.

''ಚಿನ್ನದ ಬೆಲೆಗಳು ಅಲ್ಪಾವಧಿಗೆ ವಹಿವಾಟು ನಡೆಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಔನ್ಸ್‌ಗೆ 1,860 ಡಾಲರ್‌ ಸಮೀಪದಲ್ಲಿದ್ದು, ಔನ್ಸ್‌ಗೆ 1,760 ಡಾಲರ್‌ನಂತೆ ಬೆಂಬಲವಿದೆ "ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಫೆಬ್ರವರಿ 15 ರಂದು ತಿಳಿಸಿದೆ.

ಇದರ ನಡುವೆ ಪ್ಲ್ಯಾಟಿನಂ ಬೆಲೆಗಳು ಆರೂವರೆ ವರ್ಷದ ಗರಿಷ್ಠ ಮಟ್ಟವನ್ನು ತಲುಪಿದವು. ಪ್ಲಾಟಿನಂ ಶೇಕಡಾ 1ರಷ್ಟು ಏರಿಕೆಯಾಗಿ 1,315.32 ಡಾಲರ್‌ಗೆ ತಲುಪಿದೆ.

English summary

Gold Prices Today Rise After 3 Day Fall: Down Rs 9000 From Record Highs

Gold prices today edged higher after a 3-day fall but struggled to push significantly higher amid flat global rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X