For Quick Alerts
ALLOW NOTIFICATIONS  
For Daily Alerts

ಸತತ ಎರಡನೇ ದಿನ ಚಿನ್ನದ ದರ ಕುಸಿತ; ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ

|

ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಸೋಮವಾರ (ಅಕ್ಟೋಬರ್ 19, 2020) ಭಾರತದಲ್ಲಿ ಇಳಿಕೆ ಆಗಿದೆ. ಜಾಗತಿಕ ದರವನ್ನು ಅನುಸರಿಸಿ, ದೇಶೀಯವಾಗಿಯೂ ಬೆಲೆ ಇಳಿದಿದೆ. MCXನಲ್ಲಿ ಡಿಸೆಂಬರ್ ಚಿನ್ನದ ಫ್ಯೂಚರ್ಸ್ ಸತತ ಎರಡನೇ ದಿನ ಕುಸಿತ ಕಂಡಿತು. 0.22% ಇಳಿಕೆ ಕಂಡು, ಪ್ರತಿ 10 ಗ್ರಾಮ್ ಗೆ 50,437 ರುಪಾಯಿಯಂತೆ ವಹಿವಾಟು ನಡೆಸಿತು.

ಹಬ್ಬದ ಸೀಸನ್ ನಲ್ಲಿ ಸತತ ಎರಡನೇ ವಾರ ಪ್ರೀಮಿಯಂ ಬೆಲೆಗೆ ಚಿನ್ನದ ಮಾರಾಟ

ಇನ್ನು ಬೆಳ್ಳಿ ಫ್ಯೂಚರ್ಸ್ 0.7% ಇಳಿಕೆ ಕಂಡು, ಪ್ರತಿ ಕೇಜಿಗೆ 61,250ರಂತೆ ವ್ಯವಹಾರ ನಡೆಸಿತು. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ಬೆಲೆ 0.3% ಇಳಿಕೆಯಾದರೆ, ಬೆಳ್ಳಿ ಬೆಲೆಯು 0.2% ಹೆಚ್ಚಳ ಆಗಿತ್ತು. ಭಾರತದಲ್ಲಿ ಚಿನ್ನದ ಬೆಲೆ ಕಳೆದ ಆಗಸೃ ನಲ್ಲಿ ಗರಿಷ್ಠ ಮಟ್ಟವಾದ 56,200 ರುಪಾಯಿ ತಲುಪಿದ ಮೇಲೆ ಚಲನೆ ಕಳೆದುಕೊಂಡಿದೆ. ಜಾಗತಿಕ ಮಾರ್ಕೆಟ್ ನಲ್ಲೂ ಇದೇ ಸ್ಥಿತಿ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಸ್ಥಿರ
 

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಸ್ಥಿರ

ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಚಿನ್ನದ ದರ ಸ್ಥಿರವಾಗಿದೆ. ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1900ರ ಮೇಲೆ ವಹಿವಾಟು ನಡೆಸುತ್ತಿದೆ. ಭಾವನಾತ್ಮಕವಾಗಿ ಹೂಡಿಕೆದಾರರ ಪಾಲಿಗೆ ಇದು ಅತ್ಯಂತ ಪ್ರಮುಖ ಮಟ್ಟವಾಗಿದೆ. ಯುಎಸ್ ಜನಪ್ರತಿನಿಧಿಗಳು ಅಲ್ಲಿನ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಆರ್ಥಿಕ ಪ್ಯಾಕೇಜ್ ಗೆ ಒಪ್ಪಿಗೆ ನೀಡಬಹುದು ಎಂಬ ಎಂಬ ಭರವಸೆಯಲ್ಲಿ ದರವು ಮೇಲ್ಮಟ್ಟದಲ್ಲಿದೆ. ಇನ್ನು ಸ್ಮಾಟ್ ಗೋಲ್ಡ್ ದರದಲ್ಲಿ ಸ್ವಲ್ಪ ಮಟ್ಟಿಗಿನ ಬದಲಾವಣೆ ಆಗಿದ್ದು, ಪ್ರತಿ ಔನ್ಸ್ ಗೆ $ 1900.21 ಇದ್ದರೆ, ಬೆಳ್ಳಿ 0.1% ಏರಿಕೆ ಕಂಡು, ಪ್ರತಿ ಔನ್ಸ್ ಗೆ $ 24.20 ಇದೆ.

ದೊಡ್ಡ ಮೊತ್ತಕ್ಕೆ ಡೆಮಾಕ್ರಟ್ ಗಳ ಒತ್ತಾಯ

ದೊಡ್ಡ ಮೊತ್ತಕ್ಕೆ ಡೆಮಾಕ್ರಟ್ ಗಳ ಒತ್ತಾಯ

ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಭಾನುವಾರ ಮಾತನಾಡಿ, ಟ್ರಂಪ್ ಆಡಳಿತದ ಜತೆಗೆ ಏನೇ ಅಭಿಪ್ರಾಯ ಭೇದ ಇದ್ದರೂ ಅಧ್ಯಕ್ಷೀಯ ಚುನಾವಣೆ ದಿನಕ್ಕೂ ಮುನ್ನ ಕೊರೊನಾ ಪರಿಹಾರ ಪ್ಯಾಕೇಜ್ ಘೋಷಣೆ ಆಗಬಹುದು ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಪ್ರಸ್ತಾವ ಮಾಡಿರುವ ಪ್ಯಾಕೇಜ್ ಗಿಂತ ಇನ್ನೂ ದೊಡ್ಡ ಮೊತ್ತ ಬೇಕು ಎಂಬುದು ಡೆಮಾಕ್ರಟ್ ಗಳ ಒತ್ತಾಯವಾಗಿದೆ. ಯುಎಸ್ ಡಾಲರ್ ಮೌಲ್ಯ ಹೆಚ್ಚು ಬಲವಾಗುತ್ತಿದ್ದಲ್ಲಿ ಚಿನ್ನದ ದರದ ಮೇಲೆ ಒತ್ತಡ ಆಗುತ್ತದೆ. ಪ್ರಮುಖ ಆರು ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಅತ್ಯಂತ ಸುರಕ್ಷಿತ ಹೂಡಿಕೆ ಎಂಬ ಭಾವ ಮೂಡಿದ್ದು, 93.735 ತಲುಪಿತ್ತು.

ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಉತ್ಸುಕ

ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಉತ್ಸುಕ

ಈ ವರ್ಷ ಇಲ್ಲಿಯ ತನಕ ಚಿನ್ನದ ದರವು ಶೇಕಡಾ 25ರಷ್ಟು ಏರಿಕೆ ದಾಖಲಿಸಿದೆ. ಜಾಗತಿಕ ಆರ್ಥಿಕ ಚೇತರಿಕೆ ಬಗೆಗಿನ ಆತಂಕ ಹಾಗೂ ಕೇಂದ್ರ ಬ್ಯಾಂಕ್ ಗಳು ಮತ್ತು ಸರ್ಕಾರಗಳ ಆರ್ಥಿಕ ಪ್ಯಾಕೇಜ್ ಗಳ ಘೋಷಣೆಯ ಕಾರಣಕ್ಕೆ ಈ ಹಂತವನ್ನು ತಲುಪಿದೆ. ಇನ್ನು ಬ್ರೆಕ್ಸಿಟ್ ವಿಚಾರಕ್ಕೆ ಬಂದರೆ, ಈ ವಾರ ಯುರೋಪಿಯನ್ ಒಕ್ಕೂಟ ಹಾಗೂ ಬ್ರಿಟನ್ ಮಧ್ಯೆ ಹೊಸದಾಗಿ ಮಾತುಕತೆ ಶುರುವಾಗುತ್ತದೆ. ಬ್ರೆಕ್ಸಿಟ್ ನಂತರದ ವ್ಯವಹಾರ ಒಪ್ಪಂದಕ್ಕೆ ಬರಲು ಈಗಲೂ ಬ್ರಿಟನ್ ಉತ್ಸುಕವಾಗಿದೆ ಎಂದು ಸರ್ಕಾರದ ಹಿರಿಯ ಸಚಿವರು ತಿಳಿಸಿದ್ದಾರೆ. ಇಟಿಎಫ್ ಹೂಡಿಕೆದಾರರು ಈಗಲೂ ಹೂಡಿಕೆಯಿಂದ ದೂರ ನಿಂತು, ಚಿನ್ನದ ದರ ಯಾವ ದಿಕ್ಕಿಗೆ ಸಾಗಬಹುದು ಎಂಬ ಕಡೆಗೆ ಕುತೂಹಲದಿಂದ ನೋಡುತ್ತಿದ್ದಾರೆ.

ಹಬ್ಬದ ಸೀಸನ್ ಗೆ ಚಿನ್ನದ ಸಂಗ್ರಹ ಹೆಚ್ಚಳ
 

ಹಬ್ಬದ ಸೀಸನ್ ಗೆ ಚಿನ್ನದ ಸಂಗ್ರಹ ಹೆಚ್ಚಳ

ವಿಶ್ವದ ಅತಿ ದೊಡ್ಡ ಚಿನ್ನದ ಇಟಿಎಫ್ ಫಂಡ್ ಎಸ್ ಡಿಪಿಆರ್ ಗೋಲ್ಡ್ ಟ್ರಸ್ಟ್ ಶುಕ್ರವಾರದಂದು 0.27% ಇಳಿದು, 1,276.56 ಟನ್ ತಲುಪಿತು. "ಚಿನ್ನದ ದರದಲ್ಲಿ ಏರಿಳಿತ ಕಾಣಿಸಿಕೊಳ್ಳಬಹುದು. ಯುಎಸ್ ಆರ್ಥಿಕ ಪ್ಯಾಕೇಜ್ ಘೋಷಣೆ, ಬ್ರೆಕ್ಸಿಟ್ ಹಾಗೂ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಪ್ರಭಾವ ಇರುತ್ತದೆ. ಯುಎಸ್ ಡಾಲರ್ ಮೌಲ್ಯದಲ್ಲಿ ಇನ್ನು ಹೆಚ್ಚಿನ ಏರಿಕೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಹಾಗೂ ಚಿನ್ನದ ತಳ ಮಟ್ಟದ ಬೆಲೆಯಲ್ಲಿ ಖರೀದಿ ಆಸಕ್ತಿ ಕಂಡುಬರಬಹುದು," ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ಇತ್ತ ಭಾರತದಲ್ಲಿ ಚಿನ್ನದ ಡೀಲರ್ ಗಳು ಹಬ್ಬದ ಸೀಸನ್ ಗಾಗಿ ಹಳದಿ ಲೋಹದ ಸಂಗ್ರಹ ಹೆಚ್ಚಿಸುತ್ತಿದ್ದಾರೆ.

English summary

Gold Rate Fall Consecutive Second Day; Sharp Fall In Silver Price

Gold rate fall consecutive second day on Monday (October 19, 2020). Silver price also drop sharply.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X