For Quick Alerts
ALLOW NOTIFICATIONS  
For Daily Alerts

ಚಿನ್ನದ ದರವು 4 ದಿನದಲ್ಲಿ 3ನೇ ಬಾರಿ ಇಳಿಕೆ; ಮುಂದಿನ ದಾರಿ ಬಗ್ಗೆ ತಜ್ಞರು ಏನಂತಾರೆ?

By ಅನಿಲ್ ಆಚಾರ್
|

ಚಿನ್ನ ಹಾಗೂ ಬೆಳ್ಳಿ ದರವು ಗುರುವಾರ (ಅಕ್ಟೋಬರ್ 1, 2020) ಇಳಿಕೆ ಆಗಿದೆ. ಚಿನ್ನದ ಫ್ಯೂಚರ್ಸ್ ಡಿಸೆಂಬರ್ ತಿಂಗಳ ದರವು ಎಂಸಿಎಕ್ಸ್ ನಲ್ಲಿ 0.6% ಇಳಿಕೆಯಾಗಿ, ಪ್ರತಿ 10 ಗ್ರಾಮ್ ಗೆ 50,305 ರುಪಾಯಿಗೆ ವಹಿವಾಟು ನಡೆಸಿತು. ಬೆಳ್ಳಿ ಫ್ಯೂಚರ್ಸ್ 0.25% ಹೆಚ್ಚಳವಾಗಿ, ಪ್ರತಿ ಕೇಜಿಗೆ 60,055 ರುಪಾಯಿಯಂತೆ ವ್ಯವಹಾರ ನಡೆಸಿತು.

ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ದರ 0.6% ಇಳಿಕೆ ಕಂಡಿದ್ದರೆ, ಬೆಳ್ಳಿ ಬೆಲೆಯಲ್ಲಿ 4% ಅಥವಾ 2500 ರುಪಾಯಿಯ ಭಾರೀ ಕುಸಿತ ಆಗಿತ್ತು. ಆಗಸ್ಟ್ 7ನೇ ತಾರೀಕಿನಂದು ಪ್ರತಿ 10 ಗ್ರಾಮ್ ಗೆ ಚಿನ್ನದ ದರವು ದಾಖಲೆಯ 56,200 ರುಪಾಯಿ ಮುಟ್ಟಿದ ನಂತರ ಸ್ವಲ್ಪ ಮಟ್ಟಿಗೆ ಬೆಲೆ ಇಳಿಯಿತು. ಈಚಿನ ದಿನಗಳಲ್ಲಿ ನಿರಂತರವಾಗಿ ಏರಿಳಿತ ಕಾಣುತ್ತಾ ಸಾಗಿದೆ. ಬೆಳ್ಳಿಯ ಬೆಲೆಯಂತೂ ಆಗಸ್ಟ್ ತಿಂಗಳಲ್ಲಿ ಕೇಜಿಗೆ 80 ಸಾವಿರ ರುಪಾಯಿಯ ಹತ್ತಿರ ಬಂದಿತ್ತು.

 

ಸರ್ಕಾರಿ ಸ್ವಾಮ್ಯದ MMTCಯಿಂದ ಚಿನ್ನದ ಬೈಬ್ಯಾಕ್ ಹಾಗೂ ವಿನಿಮಯ ಸ್ಕೀಮ್

ಎಂಸಿಎಕ್ಸ್ ಚಿನ್ನಕ್ಕೆ 49,200 ರುಪಾಯಿ ಮಟ್ಟದಲ್ಲಿ ಸಪೋರ್ಟ್ ಹಾಗೂ 51,120ರ ಮಟ್ಟದಲ್ಲಿ ರೆಸಿಸ್ಟೆನ್ಸ್ ಸಿಗುತ್ತದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಹೇಳಿದೆ.

ಚಿನ್ನದ ದರ $ 1900 ದಾಟಬೇಕು

ಚಿನ್ನದ ದರ $ 1900 ದಾಟಬೇಕು

ಜಾಗತಿಕ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆ ಕಂಡಿತು. ಯುಎಸ್ ಡಾಲರ್ ಮೌಲ್ಯದಲ್ಲಿ ಸ್ವಲ್ಪ ಇಳಿಕೆ ಹಾಗೂ ಯುಎಸ್ ನಲ್ಲಿ ಕೊರೊನಾ ವೈರಸ್ ಪರಿಹಾರ ಪ್ಯಾಕೇಜ್ ಘೋಷಣೆಯ ಭರವಸೆ ಕಾರಣಕ್ಕೆ ಚಿನ್ನದ ದರದಲ್ಲಿ ಬದಲಾವಣೆ ಆಯಿತು. ಇನ್ನು ಯುಎಸ್ ಖಾಸಗಿ ನಿರುದ್ಯೋಗ ಪ್ರಮಾಣದಲ್ಲಿ ಚೇತರಿಕೆ ಕಂಡ ಮೇಲೆ ಜಾಗತಿಕ ಮಟ್ಟದಲ್ಲಿ ಭರವಸೆ ಮೂಡುತ್ತಿದೆ. ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1,884.67 ಇದ್ದು, ಸ್ಥಿರವಾಗಿದೆ. "ಎಲ್ಲಿಯ ತನಕ ಚಿನ್ನದ ದರವು $ 1840ರ ಮೇಲಿರುತ್ತದೋ ದಿನದಲ್ಲಿ ಮೇಲ್ಮುಖವಾಗಿ ಚೇತರಿಕೆ ಕಾಣುವ ನಿರೀಕ್ಷೆ ಇರಿಸಿಕೊಳ್ಳಬಹುದು. ಆದರೂ $ 1900 ದಾಟಬೇಕು. ಆಗ ದೊಡ್ಡ ಏರಿಕೆ ಕಾಣಬಹುದು. ಅನಿರೀಕ್ಷಿತವಾಗಿ $ 1840ರ ಕೆಳಗೆ ಇಳಿದರೆ ಅದು ದುರ್ಬಲತೆಯ ಸಂಕೇತ," ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಹೇಳಿದೆ.

ಯುಎಸ್ ನಲ್ಲಿ ಕೊರೊನಾ ವೈರಸ್ ಪ್ಯಾಕೇಜ್
 

ಯುಎಸ್ ನಲ್ಲಿ ಕೊರೊನಾ ವೈರಸ್ ಪ್ಯಾಕೇಜ್

ಯುಎಸ್ ನಲ್ಲಿ ಕೊರೊನಾ ವೈರಸ್ ಪ್ಯಾಕೇಜ್ ಘೋಷಣೆ ಆಗಬಹುದು ಎಂಬ ಭರವಸೆ ಹೆಚ್ಚುತ್ತಿದೆ. ವಿಶ್ವದ ಶ್ರೇಷ್ಠ ಆರ್ಥಿಕತೆಯ ಯುಎಸ್ ನಲ್ಲಿ ಈ ವಿಚಾರವಾಗಿ ಇನ್ನೂ ಚರ್ಚೆ ನಡೆದಿದೆ. ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಹಾಗೂ ಖಜಾನೆ ಕಾರ್ಯದರ್ಶಿ ಈ ವಾರ ನಿರಂತರವಾಗಿ ಮಾತುಕತೆ ನಡೆಸಿದ್ದಾರೆ. ಇದರ ಫಲಿತಾಂಶ "ಭರವಸೆದಾಯಕ" ಎಂದು ಮೂಲಗಳು ತಿಳಿಸಿವೆ. ಇನ್ನು ಇತರ ಬೆಲೆಬಾಳುವ ಲೋಹದ ವಿಚಾರಕ್ಕೆ ಬಂದಲ್ಲಿ ಬೆಳ್ಳಿಯ ಬೆಲೆಯಲ್ಲಿ 0.2% ಹೆಚ್ಚಳವಾಗಿ, ಪ್ರತಿ ಔನ್ಸ್ ಗೆ $ 23.25 ತಲುಪಿದೆ. ಪ್ಲಾಟಿನಂ 0.4% ಏರಿಕೆಯಾಗಿ $ 891.95ರಲ್ಲಿ ಹಾಗೂ ಪಲಾಡಿಯಂ 0.2% ಮೇಲೇರಿ, $ 2,309.07ರಲ್ಲಿ ಇದೆ.

ಬೆಳ್ಳಿ ಬೆಲೆಯಲ್ಲಿ ಚೇತರಿಕೆ

ಬೆಳ್ಳಿ ಬೆಲೆಯಲ್ಲಿ ಚೇತರಿಕೆ

ಚಿನ್ನದ ದರವು ಅದರ ಮುಖ್ಯ ಬೆಂಬಲ ದರವಾದ ಔನ್ಸ್ ಗೆ $ 1900ರ ಸಮೀಪದಲ್ಲಿದೆ. ಒಟ್ಟಾರೆ ಟ್ರೆಂಡ್ ಸಕಾರಾತ್ಮಕವಾಗಿದೆ. ಯುಎಸ್ ಆರ್ಥಿಕ ಉತ್ತೇಜನಾ ಯೋಜನೆ, EU- UK ಬ್ರೆಕ್ಸಿಟ್ ಮಾತುಕತೆ ಮತ್ತು ಪ್ರಮುಖ ಆರ್ಥಿಕತೆಗಳಲ್ಲಿನ ಸ್ಥಿತಿ- ಗತಿ ಮತ್ತಿತರ ಅಂಶಗಳು ಚಿನ್ನದ ದರದಲ್ಲಿ ಏರಿಳಿತಕ್ಕೆ ಕಾರಣ ಆಗಬಹುದು. ಬೆಳ್ಳಿ ದರವು ಈಚಿನ ಕನಿಷ್ಠ ಮಟ್ಟದಿಂದ ಮೇಲೆದ್ದಿದೆ. ಈಚೆಗೆ ಚೀನಾದಲ್ಲಿ ಹಾಗೂ ಜಾಗತಿಕವಾಗಿ ಕೈಗಾರಿಕೆ ಚಟುವಟಿಕೆಗಳ ಬೇಡಿಕೆ ಹೆಚ್ಚಾದ ಕಾರಣಕ್ಕೆ ಬೆಳ್ಳಿ ಬೆಲೆಯಲ್ಲಿ ಚೇತರಿಕೆ ಕಂಡಿದೆ ಎಂದು ಕೊಟಕ್ ಸೆಕ್ಯೂರಿಟೀಸ್ ಅಭಿಪ್ರಾಯ ಪಟ್ಟಿದೆ.

ಈ ವರ್ಷ 24% ಗಳಿಕೆ ಕಂಡಿದೆ ಚಿನ್ನ

ಈ ವರ್ಷ 24% ಗಳಿಕೆ ಕಂಡಿದೆ ಚಿನ್ನ

ಭಾರತದ ಮಾರುಕಟ್ಟೆಯಲ್ಲಿ ಈ ವಾರದ ಆರಂಭದಲ್ಲಿ ಚಿನ್ನದ ದರವು ಪ್ರತಿ 10 ಗ್ರಾಮ್ ಗೆ 49,500 ರುಪಾಯಿಗಿಂತ ಕೆಳಗೆ ಇಳಿದಿತ್ತು. ಆ ನಂತರ ಯುಎಸ್ ಡಾಲರ್ ಸೂಚ್ಯಂಕದಲ್ಲಿ ಇಳಿಕೆ ಕಂಡಂತೆ ಚಿನ್ನದ ದರಕ್ಕೆ ತಳ ಮಟ್ಟದಲ್ಲಿ ಬೆಂಬಲ ಸಿಕ್ಕಿತು. ಮಾರ್ಕೆಟ್ ಗಮನ ಯುಎಸ್ ಅಧ್ಯಕ್ಷೀಯ ಚುನಾವಣೆಯ ಮೊದಲ ಸಂವಾದದ ಕಡೆಗೆ ತಿರುಗುತ್ತಿದ್ದಂತೆ ಯುಎಸ್ ಡಾಲರ್ ಸ್ವಲ್ಪ ಕೆಳಗೆ ಇಳಿಯಿತು. ಇದರ ಜತೆಗೆ ಹೊಸದಾಗಿ ಆರ್ಥಿಕ ಉತ್ತೇಜನ ಘೋಷಣೆ, ಇತರ ಆರ್ಥಿಕ ಮಾನದಂಡಗಳು ಸಹ ಕೆಲಸ ಮಾಡಿವೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಈಚೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿರಬಹುದು. ಆದರೂ ಈ ವರ್ಷ ಇಲ್ಲಿಯ ತನಕ 24% ಗಳಿಕೆ ಕಂಡಿದೆ ಚಿನ್ನ. ಪ್ರಮುಖ ಕೇಂದ್ರ ಬ್ಯಾಂಕ್ ಗಳು ಮತ್ತು ಸರ್ಕಾರಗಳ ಆರ್ಥಿಕ ಉತ್ತೇಜನದ ಬಲ ಸಿಕ್ಕಿದೆ.

English summary

Gold Rate Fall Today 3rd Time In 4 Days In MCX On October 1

Gold rate fall today 3rd time in 4 days in India MCX on October 1, 2020. Here is the analysis of gold, silver and other precious metals.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X