For Quick Alerts
ALLOW NOTIFICATIONS  
For Daily Alerts

48 ಸಾವಿರ ರುಪಾಯಿ ದಾಟಿದ ಚಿನ್ನದ ದರ

By ಅನಿಲ್ ಆಚಾರ್
|

ಭಾರತದ ಎಂಸಿಎಕ್ಸ್ ನಲ್ಲಿ ಮಂಗಳವಾರ (ಡಿಸೆಂಬರ್ 1, 2020) ಪ್ರತಿ 10 ಗ್ರಾಮ್ ಗೆ 48,194 ರುಪಾಯಿಗೆ ವಹಿವಾಟು ಶುರು ಮಾಡಿದೆ. ಐದು ತಿಂಗಳ ಕನಿಷ್ಠ ಹಂತದಿಂದ ಅಂತರರಾಷ್ಟ್ರೀಯ ಬೆಲೆಯಲ್ಲಿ ಚೇತರಿಕೆ ಹಾಗೂ ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಮೂರು ಕಂಪೆನಿಗಳಿಂದ ಬೆಳವಣಿಗೆ ಸುದ್ದಿ ಬಂದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ.

ಈ ಹಿಂದಿನ ಎರಡು ಸೆಷನ್ ನಲ್ಲಿ ತೀಕ್ಷ್ಣ ನಷ್ಟವನ್ನು ಕಂಡಿದ್ದ ಸ್ಪಾಟ್ ಗೋಲ್ಡ್, ಪ್ರತಿ ಔನ್ಸ್ ಗೆ (28.3495 ಗ್ರಾಮ್) 0.4% ಏರಿಕೆ ಕಂಡು, $ 1784.37ರಲ್ಲಿ ವಹಿವಾಟು ನಡೆಸಿತು. ಜಾಗತಿಕ ಮಾರುಕಟ್ಟೆಯಲ್ಲಿ ಸೋಮವಾರ ಪ್ರತಿ ಔನ್ಸ್ ಗೆ 1764.29 ಯುಎಸ್ ಡಿ ತಲುಪಿ, ಜುಲೈ 2ನೇ ತಾರೀಕಿನ ಸ್ಥಿತಿಗೆ ತಲುಪಿತು. ಇನ್ನು ಇಳಿಕೆಯಲ್ಲಿ ನಾಲ್ಕು ವರ್ಷದಲ್ಲೇ ಅತ್ಯಂತ ಕೆಟ್ಟ ತಿಂಗಳಿಗೆ (ನವೆಂಬರ್) ಸಾಕ್ಷಿಯಾಯಿತು.

 

ಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ ಈ 5 ಅಂಶ ಗಮನದಲ್ಲಿರಲಿ

ಭಾರತದಲ್ಲಿ ಕಮಾಡಿಟಿ ಮಾರ್ಕೆಟ್ ಸೋಮವಾರ ಬೆಳಗ್ಗೆ ವಹಿವಾಟು ಗುರುನಾನಕ್ ಜಯಂತಿ ಪ್ರಯುಕ್ತ ನಡೆಯಲಿಲ್ಲ. ಸಂಜೆಯ ಟ್ರೇಡಿಂಗ್ ಸೆಷನ್ ನಲ್ಲಿ ಗೋಲ್ಡ್ ಫ್ಯೂಚರ್ಸ್ ಪ್ರತಿ 10 ಗ್ರಾಮ್ ಗೆ 47,763 ರುಪಾಯಿಗೆ ವಹಿವಾಟು ಮುಗಿಸಿತು.

48 ಸಾವಿರ ರುಪಾಯಿ ದಾಟಿದ ಚಿನ್ನದ ದರ

ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವುದು ಹಾಗೂ ಯುಎಸ್ ನಲ್ಲಿನ ಇತರ ಆರ್ಥಿಕ ದೌರ್ಬಲ್ಯದ ಕಾರಣಕ್ಕೆ ಹೂಡಿಕೆದಾರರು ಚಿನ್ನಕ್ಕೆ ಆಕರ್ಷಿತರಾಗಿದ್ದರು. ಕಳೆದ ವಾರ ಯುಎಸ್ ನಲ್ಲಿ ಹನ್ನೊಂದು ಲಕ್ಷ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.

ಮಂಗಳವಾರದಂದು ಫೆಡರಲ್ ರಿಸರ್ವ್ ಸಭೆಯ ಫಲಿತಾಂಶಕ್ಕಾಗಿ ಹೂಡಿಕೆದಾರರು ಈಗ ಎದುರು ನೋಡುತ್ತಿದ್ದಾರೆ. ಹಲವು ಅಂಶಗಳು ಸೇರಿ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣಲು ಕಾರಣವಾಗಿದೆ. ಈ ಮಧ್ಯೆ ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಗಳಿಕೆ ಕಂಡಿದ್ದು, 73.95 ಇದೆ. ಶುಕ್ರವಾರದಂದು 74.05 ಇತ್ತು.

English summary

Gold Rate Per 10 Gm Climbs Rs 48000

Gold future price climbs 48000 on Tuesday, December 1, 2020. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X