For Quick Alerts
ALLOW NOTIFICATIONS  
For Daily Alerts

Gold Rate: ಸತತ 4 ದಿನ ಬೆಲೆ ಕುಸಿತ, ವಾರದಲ್ಲಿ 10 ಗ್ರಾಮ್ ಗೆ 2500 ರು. ಇಳಿಕೆ

By ಅನಿಲ್ ಆಚಾರ್
|

ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಗುರುವಾರ (ಸೆಪ್ಟೆಂಬರ್ 24, 2020) ಕೂಡ ಭಾರತದಲ್ಲಿ ಸತತ ನಾಲ್ಕನೇ ದಿನ ನಷ್ಟ ವಿಸ್ತರಣೆ ಆಗಿದೆ. MCXನಲ್ಲಿ ಅಕ್ಟೋಬರ್ ಚಿನ್ನದ ಫ್ಯೂಚರ್ಸ್ ನಲ್ಲಿ 0.45% ಇಳಿಕೆ ಕಂಡು, 10 ಗ್ರಾಮ್ ಗೆ 49,293 ರುಪಾಯಿ ತಲುಪಿತು. ಇನ್ನು ಬೆಳ್ಳಿ ದರದಲ್ಲಿ 3% ಕುಸಿತವಾಗಿ ಪ್ರತಿ ಕೇಜಿಗೆ 56,710 ರುಪಾಯಿ ಮುಟ್ಟಿತು.

ಚಿನ್ನವು 10 ಗ್ರಾಮ್ ಗೆ 65ರಿಂದ 68 ಸಾವಿರ ರುಪಾಯಿ ತಲುಪಬಹುದು

ಕಳೆದ ನಾಲ್ಕು ದಿನದಲ್ಲಿ 10 ಗ್ರಾಮ್ ಚಿನ್ನದ ದರದಲ್ಲಿ 2500 ರುಪಾಯಿಯಷ್ಟು ಇಳಿಕೆ ಆಗಿದೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನವು 1.9% ಅಥವಾ 950 ರುಪಾಯಿ ಹಾಗೂ ಬೆಳ್ಳಿ ಬೆಲೆಯಲ್ಲಿ ಪ್ರತಿ ಕೇಜಿಗೆ 4.5% ಅಥವಾ 2700 ರುಪಾಯಿ ಇಳಿಕೆ ಕಂಡಿತ್ತು. ಜಾಗತಿಕ ಮಾರ್ಕೆಟ್ ನಲ್ಲಿ ಚಿನ್ನದ ದರದಲ್ಲಿ ಇಳಿಜಾರಿನ ಹಾದಿಯಲ್ಲಿ ಮುಂದುವರಿದಿದ್ದು, ಎರಡು ತಿಂಗಳಿಗೂ ಹೆಚ್ಚು ಸಮಯದ ಕನಿಷ್ಠ ಮಟ್ಟಕ್ಕೆ ಕುಸಿಯಿತು.

ಬೆಳ್ಳಿ ದರದಲ್ಲಿ 2.3% ಕುಸಿತ
 

ಬೆಳ್ಳಿ ದರದಲ್ಲಿ 2.3% ಕುಸಿತ

ಯುಎಸ್ ನಿರುದ್ಯೋಗ ಡೇಟಾ ಬರಬೇಕಾದ ಕಾರಣಕ್ಕೆ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ಇದ್ದಾರೆ. ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್ ಗೆ (28.3495 ಗ್ರಾಮ್) 0.3% ಕುಸಿದು, $ 1858.08 ತಲುಪಿತು. ಡಾಲರ್ ಸೂಚ್ಯಂಕವು ಎಂಟು ವಾರಗಳ ಗರಿಷ್ಠ ಮಟ್ಟದ ನಂತರ ಡಾಲರ್ ಬೆಲೆಯು ಇತರ ಪ್ರತಿಸ್ಪರ್ಧಿ ಕರೆನ್ಸಿಗಳಿಗಿಂತ ಸ್ಥಿರವಾಗಿದೆ. ಪ್ರಬಲ ಯುಎಸ್ ಡಾಲರ್ ಕಾರಣಕ್ಕೆ ಇತರ ಕರೆನ್ಸಿಗಳಿಗಿಂತ ಬುಲಿಯನ್ ಅನ್ನು ಇನ್ನಷ್ಟು ದುಬಾರಿ ಮಾಡುತ್ತದೆ. ಕೊರೊನಾ ಮತ್ತೆ ಹಬ್ಬುತ್ತಿದ್ದು, ಯುರೋ ವಲಯದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಮತ್ತೆ ನಿರ್ಬಂಧ ಬಿದ್ದಿದೆ. ಇತರ ಬೆಲೆ ಬಾಳುವ ಲೋಹದ ಪೈಕಿ ಬೆಳ್ಳಿ 2.3% ಕುಸಿದು, ಪ್ರತಿ ಔನ್ಸ್ ಗೆ $ 22.23ನಂತೆ ವಹಿವಾಟು ನಡೆಸಿದೆ.

ಯುರೋಪಿಯನ್ ಆರ್ಥಿಕತೆಯ ಬಗೆಗಿನ ಅತಂಕ

ಯುರೋಪಿಯನ್ ಆರ್ಥಿಕತೆಯ ಬಗೆಗಿನ ಅತಂಕ

ಈ ಹಿಂದೆ ಕಂಡರಿಯದ ರೀತಿಯಲ್ಲಿನ ಆರ್ಥಿಕ ಉತ್ತೇಜನ ಕ್ರಮಗಳು, ನೆಗೆಟಿವ್ ರಿಯಲ್ ರೇಟ್ ಗಳು ಮತ್ತು ದುರ್ಬಲ ಡಾಲರ್ ಕಾರಣಕ್ಕೆ ಆಗಸ್ಟ್ ಆರಂಭದಲ್ಲಿ ಚಿನ್ನದ ಬೆಲೆಯು ದಾಖಲೆಯ $ 2075ಕ್ಕ್ ತಲುಪಿತ್ತು. "ಚಿನ್ನದ ಬೆಲೆಯನ್ನು ಅಳೆಯುವುದಾದರೆ ಯುಎಸ್ ಡಾಲರ್ ಸೂಚ್ಯಂಕವು ಜುಲೈ ಕೊನೆಯಿಂದಲೂ ಇಳಿಕೆ ಕಾಣುತ್ತಿದೆ. ಯುರೋಪಿಯನ್ ಆರ್ಥಿಕತೆಯ ಬಗೆಗಿನ ಅತಂಕ ಹಾಗೂ ಕೊರೊನಾ ಪ್ರಕರಣಗಳಲ್ಲಿನ ಹೆಚ್ಚಳ, ಆರ್ಥಿಕ ದತ್ತಾಂಶಗಳ ಬಗ್ಗೆ ಮಿಶ್ರ ಅಭಿಪ್ರಾಯ ಹಾಗೂ ಬ್ರೆಕ್ಸಿಟ್ ಅನಿಶ್ಚಿತತೆಯಿಂದಾಗಿ ಡಾಲರ್ ಮೌಲ್ಯದಲ್ಲಿ ಹೆಚ್ಚಾಗಿದೆ," ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ಆರ್ಥಿಕ ಉತ್ತೇಜನದ ಬಗ್ಗೆ ಫೆಡ್ ಒತ್ತಿ ಹೇಳಿರುವುದು ಕೂಡ ಯುಎಸ್ ಡಾಲರ್ ಏರಿಕೆ ಕಾಣುವುದಕ್ಕೆ ಕಾರಣವಾಗಿದೆ.

ಸಕಾರಾತ್ಮಕ ಅಂಶಗಳ ಬೆಂಬಲ ಸಿಕ್ಕಲ್ಲಿ ಏರಿಕೆ ಮುಂದುವರಿಕೆ
 

ಸಕಾರಾತ್ಮಕ ಅಂಶಗಳ ಬೆಂಬಲ ಸಿಕ್ಕಲ್ಲಿ ಏರಿಕೆ ಮುಂದುವರಿಕೆ

ಬೆಲೆಯಲ್ಲಿ ಭಾರೀ ಇಳಿಕೆ ಆಗಿರುವುದರಿಂದ ಚಿನ್ನದ ಇಟಿಎಫ್ ಹೂಡಿಕೆದಾರರು ಕೂಡ ಪಕ್ಕಕ್ಕೆ ಸರಿದಿದ್ದಾರೆ. ಎಸ್ ಡಿಪಿಆರ್ ಗೋಲ್ಡ್ ಟ್ರಸ್ಟ್ ನ ವಿಶ್ವದ ಅತಿ ದೊಡ್ಡ ಚಿನ್ನದ ಇಟಿಎಫ್ ಫಂಡ್ 0.87% ಇಳಿಕೆಯಾಗಿ, ಬುಧವಾರದಂದು ಪ್ರತಿ ಟನ್ ಗೆ 1267.14ರಲ್ಲಿ ವಹಿವಾಟು ನಡೆಸಿತು. ಯುಎಸ್ ಡಾಲರ್ ಮೌಲ್ಯ ಸ್ಥಿರವಾಗುತ್ತಿದ್ದಂತೆ ಚಿನ್ನದ ಬೆಲೆಯ ಮೇಲೆ ಒತ್ತಡ ಹೆಚ್ಚಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಜಾಗತಿಕ ಆರ್ಥಿಕತೆ ಬಗೆಗಿನ ಆತಂಕವು ಹೂಡಿಕೆಗೆ ಚಿನ್ನವು ಸುರಕ್ಷಿತ ಎಂಬ ಭಾವವನ್ನು ಉಳಿಸಿದೆ. ಈ ವಾರ ಚಿನ್ನದ ದರದಲ್ಲಿ ಭಾರೀ ಇಳಿಕೆ ಆಗಿದ್ದರಿಂದ ಮಾರ್ಕೆಟ್ ಭಾವನೆಗಳಿಗೆ ಪೆಟ್ಟು ಬಿದ್ದಿದೆ. ಒಂದು ವೇಳೆ ಸಕಾರಾತ್ಮಕ ಅಂಶಗಳ ಬೆಂಬಲ ಸಿಕ್ಕಲ್ಲಿ ಏರಿಕೆ ಮುಂದುವರಿಯಬಹುದು. ಆದರೆ ಯುಎಸ್ ಡಾಲರ್ ಮೌಲ್ಯದಲ್ಲಿ ಪ್ರಮುಖ ಇಳಿಕೆ ಕಾಣುವ ತನಕ ಹೆಚ್ಚಳವನ್ನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ.

English summary

Gold Rate Fall For 4th Day, Price Decrease By 2500 Rupees For 10 Gram In One Week

Gold rate in India MCX fell on September 24, 2020. Silver rate also down. Here is the complete details about gold and silver price.
Company Search
COVID-19