ಭಾರತದಲ್ಲಿ ಮಂಗಳವಾರ ಆರಂಭದ ವಹಿವಾಟಿನಲ್ಲಿ ಚಿನ್ನದ ದರ ಏರಿಕೆ
ಭಾರತದಲ್ಲಿ ಮಂಗಳವಾರ (ನವೆಂಬರ್ 17, 2020) ಚಿನ್ನದ ಬೆಲೆ ಏರಿಕೆ ಕಂಡಿತು. ಡಿಸೆಂಬರ್ ಫ್ಯೂಚರ್ಸ್ ಡೆಲಿವರಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು, 50,870 ರುಪಾಯಿಯಲ್ಲಿ ವಹಿವಾಟು ನಡೆಸಿತು. ಇದಕ್ಕೂ ಮುನ್ನ ಪ್ರತಿ ಹತ್ತು ಗ್ರಾಮ್ ಗೆ 50,829ರಂತೆ ಚಿನ್ನದ ದರ ಮುಕ್ತಾಯ ಆಗಿತ್ತು.
ಏಪ್ರಿಲ್ ನಿಂದ ಅಕ್ಟೋಬರ್ ಮಧ್ಯೆ ಭಾರತದ ಚಿನ್ನ ಆಮದು 47% ಇಳಿಕೆ
ಮುಂಬೈನಲ್ಲಿ ಸ್ಪಾಟ್ ಗೋಲ್ಡ್ ದರ 50,000 ರುಪಾಯಿ ಸಮೀಪದಲ್ಲಿತ್ತು. ಮಾಡೆರ್ನಾದಿಂದ ಕೊರೊನಾಗೆ ಲಸಿಕೆ ಅಭಿವೃದ್ಧಿ ಪಡಿಸಿರುವ ಸಕಾರಾತ್ಮಕ ಬೆಳವಣಿಗೆಯಾದರೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಅಂಥ ಚಲನೆ ಕಂಡಿಲ್ಲ. ಸ್ಪಾಟ್ ಗೋಲ್ಡ್ ಅಲ್ಪ ಪ್ರಮಾಣದಲ್ಲಿ ಬದಲಾಗಿ, ಔನ್ಸ್ ಗೆ $ 1887 ಇತ್ತು. ಇನ್ನು ಯುಎಸ್ ಗೋಲ್ಡ್ ಫ್ಯೂಚರ್ಸ್ 0.1% ಏರಿಕೆ ಕಂಡು, $ 1888ರಲ್ಲಿತ್ತು.
ಕೊರೊನಾ ಲಸಿಕೆ ಶೇಕಡಾ ತೊಂಬತ್ನಾಲ್ಕರಷ್ಟು ಪರಿಣಾಮಕಾರಿಯಾಗಿದೆ ಎಂದು ಮಾಡೆರ್ನಾ ತಿಳಿಸಿದ ನಂತರ ಸೋಮವಾರದಂದು ಚಿನ್ನದ ಬೆಲೆಯಲ್ಲಿ ತೀಕ್ಷ್ಣ ಚಲನೆ ಕಂಡುಬಂತು. ಮುಂದಿನ ಕೆಲ ದಿನಗಳು ಚಿನ್ನದ ಬೆಲೆ ಇಂತಿಷ್ಟು ಗಡಿಯಲ್ಲಿ ಸರಿದಾಡುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ಷೇರು ಮಾರುಕಟ್ಟೆಗಳಲ್ಲಿ ಭಾರೀ ಏರಿಕೆ ಆಗಿರುವ ಹೊರತಾಗಿಯೂ ಚಿನ್ನದ ಮೇಲೆ ಪರಿಣಾಮ ಆಗಿಲ್ಲ.