For Quick Alerts
ALLOW NOTIFICATIONS  
For Daily Alerts

ವೊಡಾಫೋನ್ ಐಡಿಯಾ ಪಾಲಿನ ಮೇಲೆ ಗೂಗಲ್ ಕಣ್ಣು

|

ಸರ್ಚಿಂಗ್ ದೈತ್ಯ ಗೂಗಲ್, ಬ್ರಿಟಿಷ್ ಟೆಲಿಕಾಂ ಗ್ರೂಪ್ ವೊಡಾಫೋನ್ ಐಡಿಯಾ ವ್ಯವಹಾರದಲ್ಲಿ ಅಲ್ಪ ಪಾಲನ್ನು ತೆಗೆದುಕೊಳ್ಳಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಫೇಸ್​ಬುಕ್,​ ರಿಲಯನ್ಸ್​ ಜಿಯೋ ಕಂಪನಿಯ ಶೇ.9.99 ಷೇರನ್ನು 5.7 ಬಿಲಿಯನ್​ ಡಾಲರ್​ (43,574 ಕೋಟಿ ರೂ.) ನೀಡಿ ಖರೀದಿ ಮಾಡಿತ್ತು. ಇದೀಗ ಸರ್ಚಿಂಗ್​ ದೈತ್ಯ ಗೂಗಲ್​ ಕೂಡ ಅದೇ ನಿಟ್ಟಿನಲ್ಲಿ ಸಾಗುವ ಬಗ್ಗೆ ಯೋಚನೆ ಮಾಡುತ್ತಿದೆ.

ಜಾಗತಿಕ ತಂತ್ರಜ್ಞಾನದ ದೈತ್ಯನೆನಿಸಿಕೊಂಡಿರುವ ಗೂಗಲ್​ ವೊಡಾಫೋನ್​ ಐಡಿಯಾ ಟೆಲಿಕಾಂ ಕಂಪನಿಯ 5 ಪರ್ಸೆಂಟ್‌ರಷ್ಟು ಷೇರನ್ನು ಖರೀದಿ ಮಾಡಲು ನಿರ್ಧರಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ವೊಡಾಫೋನ್ ಐಡಿಯಾ ಪಾಲಿನ ಮೇಲೆ ಗೂಗಲ್ ಕಣ್ಣು

 

ವೊಡಾಫೋನ್​ ಐಡಿಯಾದ ಮಾರುಕಟ್ಟೆ ಮೌಲ್ಯ ಇಂದು (ಗುರುವಾರ) 16,724 ಕೋಟಿ ರುಪಾಯಿ ದಾಖಲಾಗಿದೆ. ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ವೊಡಾಫೋನ್​ ಐಡಿಯಾ ಮತ್ತು ಭಾರ್ತಿ ಏರ್​ಟೆಲ್​ಗೆ ಪ್ರತಿಸ್ಫರ್ಧಿಯಾಗಿ ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಲಗ್ಗೆ ಇಟ್ಟಿತ್ತು. ಕಡಿಮೆ ಬೆಲೆಯಲ್ಲಿ ಡೇಟಾ ಸೌಲಭ್ಯ ನೀಡಿ ಸಂಚಲನ ಮೂಡಿಸಿತ್ತು. ಈಗ ಜಿಯೋದಲ್ಲಿ ಫೇಸ್​ಬುಕ್​ ಹೂಡಿಕೆ ಮಾಡಿದ ಬೆನ್ನಲ್ಲೇ, ಗೂಗಲ್ ಕೂಡ ಅದೇ ನಿಟ್ಟಿನಲ್ಲಿ ಹೆಜ್ಜೆ ಇಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಗೂಗಲ್​ ವಲಯದಲ್ಲಿಯೇ ಕೆಲಸ ಮಾಡುವವರೇ ಈ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಯುಕೆಯ ಟೆಲಿಕಾಂ ಕಂಪನಿ ಮತ್ತು ಭಾರತದ ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯ ಪಾಲುದಾರಿಕೆಯಲ್ಲಿ ಇರುವ ವೊಡಾಫೋನ್​ ಐಡಿಯಾ ಸದ್ಯ ತೀವ್ರವಾದ ಆರ್ಥಿಕ ಕುಸಿತ ಅನುಭವಿಸುತ್ತಿದೆ. ಇದೇ ಬೆನ್ನಲ್ಲೇ ಗೂಗಲ್ 5 ಪರ್ಸೆಂಟ್ ಷೇರು ಖರೀದಿಗೆ ಮುಂದಾಗಿದೆ. ಇದರ ಪ್ರಕ್ರಿಯೆಗಳು ಇನ್ನೂ ಪ್ರಾರಂಭಿಕ ಹಂತದಲ್ಲಿ ಇವೆ. ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರ ಪ್ರಕಟಗೊಳ್ಳಬಹುದು ಎಂದು ಹೇಳಲಾಗಿದೆ.

ಈ ಕುರಿತು ಎರಡೂ ಕಂಪನಿಗಳು ಪ್ರತಿಕ್ರಿಯಿಸಲು ನಿರಾಕರಿಸಿದವು ಎನ್ನಲಾಗಿದೆ.

English summary

Google eyes stake in Vodafone Idea

Tech titan Google is said to be exploring taking a minority stake in British telecom group Vodafone's struggling India business.
Story first published: Thursday, May 28, 2020, 20:23 [IST]
Company Search
COVID-19