For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ರಫ್ತು ವಿಮಾ ಖಾತೆಗೆ 1,650 ಕೋಟಿ ರೂ. ಧನ ಸಹಾಯಕ್ಕೆ ಕೇಂದ್ರ ಅಸ್ತು

|

ರಫ್ತು ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದಿಂದ ಸರಣಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆ ಐದು ವರ್ಷಗಳ ಅವಧಿಯಲ್ಲಿ ಅಂದರೆ 2021-2022ರಿಂದ 2022-2026ರ ಹಣಕಾಸು ವರ್ಷದವರೆಗೆ ರಾಷ್ಟ್ರೀಯ ರಫ್ತು ವಿಮಾ ಖಾತೆಗೆ (ಎನ್.ಇ.ಐ.ಎ.) 1,650 ಕೋಟಿ ರೂ. ಧನ ಸಹಾಯ (ಕಾಪು) ಕೊಡುಗೆಯನ್ನು ನೀಡಲು ಸರ್ಕಾರ ಇಂದು ಅನುಮೋದನೆ ನೀಡಿದೆ.

 

ಭಾರತದಿಂದ ವ್ಯೂಹಾತ್ಮಕ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆ ರಫ್ತು ಉತ್ತೇಜಿಸಲು ಎನ್.ಇ.ಐ.ಎ. ಟ್ರಸ್ಟ್ ಅನ್ನು 2006ರಲ್ಲಿ ಸ್ಥಾಪಿಸಲಾಗಿದೆ. ಇಸಿಜಿಸಿ (ಇಸಿಜಿಸಿ ಲಿಮಿಟೆಡ್, ಈ ಹಿಂದೆ ಭಾರತೀಯ ರಫ್ತು ಸಾಲ ಖಾತ್ರಿ ನಿಗಮ ನಿಯಮಿತ ಎಂದು ಕರೆಯಲಾಗುತ್ತಿತ್ತು) ನೀಡಿರುವ ವ್ಯಾಪ್ತಿಗೆ ಬೆಂಬಲ ನೀಡಲು ಎನ್.ಇ.ಐ.ಎ. ಟ್ರಸ್ಟ್ ಮಧ್ಯಮ ಮತ್ತು ದೀರ್ಘಾವಧಿ (ಎಂ.ಎಲ್.ಟಿ.) /ಯೋಜನೆ ರಫ್ತುಗಳನ್ನು (ಭಾಗಶಃ/ಪೂರ್ಣ) ವಿಸ್ತರಿಸುವ ಮೂಲಕ ಉತ್ತೇಜಿಸುತ್ತದೆ ಇದ್ಕಕಾಗಿ ಎಂಎಲ್.ಟಿ / ಯೋಜಿತ ರಫ್ತು ಮತ್ತು ಖರೀದಿದಾರರ ಸಾಲಕ್ಕಾಗಿ ಎಕ್ಸಿಮ್ ಬ್ಯಾಂಕ್ (ಬಿಸಿ-ಎನ್.ಇ.ಐ.ಎ) ಅನ್ನು ಭಾರತದಿಂದಾಗುವ ಯೋಜಿತ ರಫ್ತಿಗೆ ಜೋಡಿಸಲಾಗಿದೆ.

 ರಫ್ತು ವಿಮಾ ಖಾತೆಗೆ 1,650 ಕೋಟಿ ರೂ. ಧನ ಸಹಾಯಕ್ಕೆ ಕೇಂದ್ರ ಅಸ್ತು

ಎನ್.ಇ.ಐ.ಎ. ಟ್ರಸ್ಟ್ ನಲ್ಲಿ ಬಂಡವಾಳ ಪೂರಣವು ಭಾರತೀಯ ಯೋಜನೆ ರಫ್ತುದಾರರಿಗೆ (ಐಪಿಇ) ಫೋಕಸ್ ಮಾರುಕಟ್ಟೆಯಲ್ಲಿ ಯೋಜನಾ ರಫ್ತಿನ ಬೃಹತ್ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಹಾಯ ಮಾಡಲಿದೆ. ದೇಶಾದ್ಯಂತದಿಂದ ಪಡೆದ ಭಾರತೀಯ ವಸ್ತುವಿಷಯದೊಂದಿಗೆ ಯೋಜನಾ ರಫ್ತಿಗೆ ಬೆಂಬಲವು ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ. 1,650 ಕೋಟಿ ರೂ. ಕಾಪು ಕೊಡುಗೆಯು ಟ್ರಸ್ಟ್ ನ ಅಂಡರ್ ರೈಟಿಂಗ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಎನ್.ಇ.ಐ.ಎ.ಗೆ 33,000 ಕೋಟಿ ರೂ. ಮೌಲ್ಯದ ಯೋಜನಾ ರಫ್ತುಗಳನ್ನು ಪೂರ್ಣ ಸಾಮರ್ಥ್ಯದ ಬಳಕೆಯಲ್ಲಿ ಬೆಂಬಲಿಸಲು ಅನುವು ಮಾಡಿಕೊಡುತ್ತದೆ, ಇದು ದೇಶೀಯವಾಗಿ ತಯಾರಿಸಿದ ಸರಕುಗಳ ಅಂದಾಜು ಉತ್ಪಾದನೆಯಾಗಿ ಅಂದಾಜು 25,000 ಕೋಟಿ ರೂ.ಗೆ ಪರಿವರ್ತಿಸುತ್ತದೆ. ಇದಲ್ಲದೆ, ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ 'ಉದ್ಯೋಗಗಳಿಗೆ ರಫ್ತು' ವರದಿಯ ಪ್ರಕಾರ, ಯೋಜನೆಗಳಲ್ಲಿ ಸರಾಸರಿ ಶೇ.75 ಭಾರತೀಯ ವಸ್ತುವಿಷಯವನ್ನು ಊಹಿಸಿ, ಸುಮಾರು 12000 ಕಾರ್ಮಿಕರು ಔಪಚಾರಿಕ ವಲಯಕ್ಕೆ ತೆರಳುತ್ತಾರೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ವರದಿಯ ಆಧಾರದ ಮೇಲೆ ಅಂದಾಜುಗಳ ಪ್ರಕಾರ ಒಟ್ಟು ಕಾರ್ಮಿಕರ (ಔಪಚಾರಿಕ ಮತ್ತು ಅನೌಪಚಾರಿಕ ಎರಡೂ ಸಂಖ್ಯೆ) ಸಂಬಂಧಿತ ವಲಯಗಳಲ್ಲಿ 2.6 ಲಕ್ಷ ದಷ್ಟು ಹೆಚ್ಚಾಗುತ್ತದೆ.

 

ಗಮನಿಸಿ: ಅಂಚೆ ಕಚೇರಿ ಎಟಿಎಂ ಕಾರ್ಡ್ ನಿಯಮ ಅ. 1 ರಿಂದ ಬದಲಾವಣೆ, ಹೊಸದೇನು?

ಎನ್.ಇ.ಐ.ಎ- ಕಾರ್ಯಕ್ಷಮತೆ ಮುಖ್ಯಾಂಶಗಳು

1. ಸಾಲ ಮತ್ತು ರಾಜಕೀಯ ವಿಮೆಯನ್ನು ಸಕ್ರಿಯಗೊಳಿಸುವ ಮೂಲಕ ಮಧ್ಯಮ ಮತ್ತು ದೀರ್ಘಕಾಲೀನ (ಎಂ.ಎಲ್.ಟಿ) / ಯೋಜನಾ ರಫ್ತುಗಳನ್ನು ಉತ್ತೇಜಿಸಲು ಎನ್.ಇ.ಐ.ಎ. ಟ್ರಸ್ಟ್ ಅನ್ನು 2006 ರಲ್ಲಿ ಸ್ಥಾಪಿಸಲಾಯಿತು.

2. ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಮತ್ತು ವ್ಯೂಹಾತ್ಮಕವಾಗಿ ಮಹತ್ವವಾದ ಯೋಜನೆಗಳನ್ನು ಎನ್.ಇ.ಐ.ಎ ಬೆಂಬಲಿಸುತ್ತದೆ

3. ಭಾರತ ಸರ್ಕಾರದ ಕಾಪು ಬದ್ಧತೆ 4000 ಕೋಟಿ ರೂ. ಮತ್ತು ಗರಿಷ್ಠ ಋಣವು ವಾಸ್ತವ ಕಾಪುವಿನ 20 ಪಟ್ಟು ಅನುಮತಿಸಲಾಗಿದೆ.

4. 2021 ರ ಮಾರ್ಚ್ 31ರವರೆಗೆ ಹಲವು ವರ್ಷಗಳಲ್ಲಿ ಭಾರತ ಸರ್ಕಾರದಿಂದ ಪಡೆದ ಕೊಡುಗೆ 3,091 ಕೋಟಿ ರೂ.

5. ಪ್ರಾರಂಭವಾದ ದಿನದಿಂದಲೂ, ಎನ್.ಇ.ಐ.ಎ. 213 ವ್ಯಾಪ್ತಿಗಳನ್ನು ವಿಸ್ತರಿಸಿದೆ, 53,000 ಕೋಟಿ ರೂ. ಕ್ರೋಢೀಕೃತ ಯೋಜನಾ ಮೌಲ್ಯವನ್ನು 2021 ರ ಆಗಸ್ಟ್ 31 ರವರೆಗೆ 52 ದೇಶಗಳಿಗೆ ವಿಸ್ತರಿಸಿದೆ

6. ಯೋಜನೆ ರಫ್ತನ್ನು ಸಕ್ರಿಯಗೊಳಿಸುವಲ್ಲಿ ಅದರ ಪರಿಣಾಮವು ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಮಹತ್ವದ್ದಾಗಿದೆ.

 ರಫ್ತು ವಿಮಾ ಖಾತೆಗೆ 1,650 ಕೋಟಿ ರೂ. ಧನ ಸಹಾಯಕ್ಕೆ ಕೇಂದ್ರ ಅಸ್ತು

ಕೇಂದ್ರ ಸರ್ಕಾರ ಕೈಗೊಂಡ ವಿವಿಧ ರಫ್ತು ಸಂಬಂಧಿತ ಯೋಜನೆಗಳು

1. ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ವಿದೇಶ ವ್ಯಾಪಾರ ನೀತಿ (2015-20)ಯನ್ನು 30-09-2021 ರವರೆಗೆ ವಿಸ್ತರಿಸಲಾಗಿದೆ

2. ಕೋವಿಡ್-19 ಸಮಯದಲ್ಲಿ ನಗದು ಒದಗಿಸಲು ಎಲ್ಲಾ ಸ್ಕ್ರಿಪ್ಟ್ ಬೇಸ್ ಯೋಜನೆಗಳ ಅಡಿಯಲ್ಲಿ ಉಳಿದಿರುವ ಎಲ್ಲಾ ಬಾಕಿಗಳನ್ನು ಚುಕ್ತಾ ಮಾಡಲು ಸೆಪ್ಟೆಂಬರ್ 2021 ರಲ್ಲಿ 56,027 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಸತತ ಕುಸಿಯತೊಡಗಿದೆ ಬಿಟ್‌ಕಾಯಿನ್‌: ಪ್ರಮುಖ ಕ್ರಿಪ್ಟೋಕರೆನ್ಸಿಗಳ ಸೆ. 29ರ ಬೆಲೆ ಇಲ್ಲಿದೆ

3. ಸುಂಕ ಮತ್ತು ತೆರಿಗೆಗಳ ಕಡಿತ ಮತ್ತು ರಫ್ತು ಉತ್ಪನ್ನಗಳ (ಆರ್.ಒ.ಡಿ.ಟಿ.ಇ.ಪಿ) ಹೊಸ ಯೋಜನೆಯ ಜಾರಿ. 2021-22ನೇ ಹಣಕಾಸು ವರ್ಷದಲ್ಲಿ ಯೋಜನೆಗೆ 12,454 ಕೋಟಿ ರೂ. ಮಂಜೂರು. ಇದು ತೆರಿಗೆಗಳು / ಸುಂಕಗಳು / ಸುಂಕಗಳ ಮರುಪಾವತಿಗೆ ಡಬ್ಲ್ಯುಟಿಓ ಹೊಂದಾಣಿಕೆಯ ವ್ಯವಸ್ಥೆಯಾಗಿದೆ, ಪ್ರಸ್ತುತ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಯಾವುದೇ ಇತರ ಕಾರ್ಯವಿಧಾನದ ಅಡಿಯಲ್ಲಿ ಮರುಪಾವತಿ ಮಾಡಲಾಗುತ್ತಿಲ್ಲ

4. ಆರ್.ಒ.ಎಸ್. ಸಿ.ಟಿ.ಎಲ್ ಯೋಜನೆಯ ಮೂಲಕ ಕೇಂದ್ರ/ ರಾಜ್ಯ ತೆರಿಗೆಗಳ ಪರಿಹಾರದಿಂದ ಜವಳಿ ವಲಯಕ್ಕೆ ಬೆಂಬಲವನ್ನು ಹೆಚ್ಚಿಸಲಾಗಿದ್ದು, ಇದನ್ನು ಈಗ ಮಾರ್ಚ್ 2024 ರವರೆಗೆ ವಿಸ್ತರಿಸಲಾಗಿದೆ

5. ವ್ಯಾಪಾರವನ್ನು ಸುಗಮಗೊಳಿಸಲು ಮತ್ತು ರಫ್ತುದಾರರಿಂದ ಎಫ್.ಟಿ.ಎ. ಬಳಕೆಯನ್ನು ಹೆಚ್ಚಿಸಲು ಮೂಲ ನಿವಾಸಿ ಪ್ರಮಾಣಪತ್ರಕ್ಕಾಗಿ ಸಾಮಾನ್ಯ ಡಿಜಿಟಲ್ ವೇದಿಕೆಯನ್ನು ಪ್ರಾರಂಭಿಸಲಾಗಿದೆ.

6. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ವಲಯಗಳಿಗೆ ಸಂಬಂಧಿಸಿದ ಕೃಷಿ ರಫ್ತುಗಳಿಗೆ ಉತ್ತೇಜನ ನೀಡಲು ಸಮಗ್ರ "ಕೃಷಿ ರಫ್ತು ನೀತಿ" ಅನುಷ್ಠಾನ.

7. 12 ಚಾಂಪಿಯನ್ ಸೇವೆಗಳ ವಲಯಗಳಿಗೆ ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಅನುಸರಿಸುವ ಮೂಲಕ ಸೇವೆಗಳ ರಫ್ತುಗಳನ್ನು ಉತ್ತೇಜಿಸುವುದು ಮತ್ತು ವೈವಿಧ್ಯಗೊಳಿಸುವುದು

8. ಪ್ರತಿ ಜಿಲ್ಲೆಯಲ್ಲಿ ರಫ್ತು ಸಾಮರ್ಥ್ಯವಿರುವ ಉತ್ಪನ್ನಗಳನ್ನು ಗುರುತಿಸುವ ಮೂಲಕ ಜಿಲ್ಲೆಗಳನ್ನು ರಫ್ತು ಕೇಂದ್ರಗಳಾಗಿ ಉತ್ತೇಜಿಸುವುದು, ಈ ಉತ್ಪನ್ನಗಳನ್ನು ರಫ್ತು ಮಾಡುವ ಅಡಚಣೆಗಳನ್ನು ನಿವಾರಿಸುವುದು ಮತ್ತು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಸ್ಥಳೀಯ ರಫ್ತುದಾರರು/ತಯಾರಕರಿಗೆ ಬೆಂಬಲ ನೀಡುವುದು

9. ಭಾರತದ ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ಹೂಡಿಕೆ ಗುರಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳ ಸಕ್ರಿಯ ಪಾತ್ರವನ್ನು ಹೆಚ್ಚಿಸಲಾಗಿದೆ

10. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿವಿಧ ದೇಶೀಯ ಉದ್ಯಮವನ್ನು ವಿಶೇಷವಾಗಿ ರಫ್ತುಗಳಲ್ಲಿ ಪ್ರಮುಖ ಪಾಲು ಹೊಂದಿರುವ ಎಂಎಸ್ ಎಂಇಗಳನ್ನು ಬೆಂಬಲಿಸಲು ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಪರಿಹಾರ ಕ್ರಮಗಳ ಮೂಲಕ ಪ್ಯಾಕೇಜ್ ಘೋಷಿಸಲಾಗಿದೆ.

11. ವ್ಯಾಪಾರ ಮೂಲಸೌಕರ್ಯ ಮತ್ತು ಮಾರುಕಟ್ಟೆ ಉತ್ತೇಜನಕ್ಕಾಗಿ ರಫ್ತು ಯೋಜನೆ (ಟಿಐಇಎಸ್), ಮಾರುಕಟ್ಟೆ ಪ್ರವೇಶ ಉಪಕ್ರಮಗಳು (ಎಂಎಐ) ಯೋಜನೆ ಮತ್ತು ಸಾರಿಗೆ ಮತ್ತು ಮಾರುಕಟ್ಟೆ ನೆರವು (ಟಿಎಂಎ) ಯೋಜನೆಗಳು.

English summary

Government approves infusion of Rs. 1,650 crore Grant-in-Aid over 5 years to NEIA

Government approves continuation of the National Export Insurance Account (NEIA) scheme and infusion of Rs. 1,650 crore Grant-in-Aid over 5 years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X