ಕ್ಯೂಆರ್ ಕೋಡ್ ಗೆ ಮಾರ್ಚ್ ತನಕ ಸಮಯ ನೀಡಿದ ಸರ್ಕಾರ
ಹಲವು ಕಂಪೆನಿಗಳಿಗೆ ನಿರಾಳವಾಗುವ ಸುದ್ದಿಯೊಂದನ್ನು ಸರ್ಕಾರ ನೀಡಿದೆ. ಜಿಎಸ್ ಟಿ ಅಡಿಯಲ್ಲಿ ಕ್ಯೂಆರ್ ಕೋಡ್ ಇರಬೇಕು ಎಂಬ ಅಗತ್ಯವನ್ನು ಮುಂದೂಡಿದೆ. ಸರ್ಕಾರವು ಈ ಬಗ್ಗೆ ಭಾನುವಾರ ಹೇಳಿದ್ದು, ವ್ಯಾಪಾರದಿಂದ ಗ್ರಾಹಕರಿಗೆ (B2C) ಇರುವ ಎಲ್ಲ ವ್ಯವಹಾರದಲ್ಲಿ ಕ್ಯೂಆರ್ ಕೋಡ್ ಇರಬೇಕು ಎಂಬ ನಿಯಮವನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ.
ಆಧಾರ್ ಇಲ್ಲದ ಜಿಎಸ್ ಟಿ ನೋಂದಣಿಗೆ ಹೊಸ ನಿಯಮ
ಮುಂದಿನ ವರ್ಷದ ಮಾರ್ಚ್ ಕೊನೆ ಹೊತ್ತಿಗೆ ಕ್ಯೂಆರ್ ಕೋಡ್ ಜತೆಗೆ ಸಿದ್ಧವಾಗಬೇಕಿದೆ. ಹಲವು ಕೈಗಾರಿಕೆ ಒಕ್ಕೂಟಗಳು ಸರ್ಕಾರದ ಬಳಿ ಮಾತನಾಡಿ, ಹಲವು ಕಂಪೆನಿಗಳು ಇದಕ್ಕೆ ಇನ್ನೂ ಸಿದ್ಧವಾಗಿಲ್ಲ ಎಂದು ತಿಳಿಸಿವೆ. ಇದಕ್ಕಾಗಿ ಇಪ್ಪತ್ತು ಸಾವಿರ ಕೋಟಿ ಬಂಡವಾಳಕ್ಕೆ ಸಮಸ್ಯೆ ಆಗಬಹುದು ಎಂದು ತಿಳಿಸಿದ್ದಾರೆ.
ಸರ್ಕಾರದ ಈಗಿನ ನಿರ್ಧಾರದಿಂದಾಗಿ ಕಂಪೆನಿಗಳಿಗೆ ಕ್ಯೂಆರ್ ವ್ಯವಸ್ಥೆ ಪರಿಚಯಿಸುವುದಕ್ಕೆ ಹೆಚ್ಚಿನ ಸಮಯ ಸಿಕ್ಕಂತೆ ಆಗುತ್ತದೆ. ಉತ್ಪನ್ನಗಳ ಮೇಲೆ ಕ್ಯೂಆರ್ ಕೋಡ್ ಹಾಕಿದ್ದಲ್ಲಿ ಅದರ ಮೇಲೆ ಮೊಬೈಲ್ ಅಥವಾ ಬೇರೆ ಡಿವೈಸ್ ನಿಂದ ಸ್ಕ್ಯಾನ್ ಮಾಡಿದಾಗ ಆ ಉತ್ಪನ್ನದ ಬಗ್ಗೆ ಮಾಹಿತಿ ದೊರೆಯುತ್ತದೆ. ಇದು ಈಗಾಗಲೇ ಹಲವು ಕಂಪೆನಿಗಳು ಅಳವಡಿಸಿಕೊಂಡಿವೆ. ಆದರೆ ಈಗ ಅದನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ.