For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆದಾರರಿಗೆ ಮುಖ್ಯ ಮಾಹಿತಿ: ಐಟಿಆರ್ ಫೈಲಿಂಗ್ ಅವಧಿ ವಿಸ್ತರಣೆ

|

2018- 19ನೇ ಸಾಲಿನ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಗಡುವನ್ನು ಒಂದು ತಿಂಗಳು, ಅಂದರೆ ಜುಲೈ 31, 2020ರ ತನಕ ಕೇಂದ್ರ ಸರ್ಕಾರವು ವಿಸ್ತರಣೆ ಮಾಡಿದೆ. ಇದರ ಜತೆಗೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆಗೆ ಮಾರ್ಚ್ 31, 2021ರ ವರೆಗೆ ಗಡುವು ಮುಂದಕ್ಕೆ ಹಾಕಲಾಗಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ವರ್ಷ 2019- 20ರ ಐಟಿಆರ್ ಅನ್ನು ನವೆಂಬರ್ 30, 2020ರ ತನಕ ವಿಸ್ತರಿಸಿತ್ತು.

ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಅಧಿಸೂಚನೆ ಹೊರಡಿಸುವ ಮೂಲಕ ವಿವಿಧ ಹೂಡಿಕೆಗಳನ್ನು ಮಾಡಲು ಸಮಯ ವಿಸ್ತರಿಸಿದೆ. ಇದು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಬರುವ ವಿವಿಧ ವಿನಾಯಿತಿಗಳಿಗೆ ಅನ್ವಯ ಆಗುತ್ತದೆ. 2019- 20ನೇ ಸಾಲಿಗೆ ಒಂದು ತಿಂಗಳು, ಅಂದರೆ ಜುಲೈ 31, 2020ರ ತನಕ ಅವಧಿ ಮುಂದಕ್ಕೆ ಹಾಕಲಾಗಿದೆ.

 

ಈಗ ಹೊಸದಾಗಿ ನೀಡಿರುವ ಗಡುವಿನ ಮಾಹಿತಿ ಹೀಗಿದೆ:

ಎಲ್ಲಕ್ಕೂ ಕಾಲಾವಕಾಶ ನೀಡಲಾಗಿದೆ

ಎಲ್ಲಕ್ಕೂ ಕಾಲಾವಕಾಶ ನೀಡಲಾಗಿದೆ

ಆರ್ಥಿಕ ವರ್ಷ 2018- 19ಕ್ಕೆ (ಅಸೆಸ್ ಮೆಂಟ್ ವರ್ಷ 2019- 20) ಮೂಲ ಹಾಗೂ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಜುಲೈ 31, 2020ರ ತನಕ ಗಡುವು ನೀಡಲಾಗಿದೆ. ಇನ್ನು ಆರ್ಥಿಕ ವರ್ಷ 2019- 20ರ ಆದಾಯ ತೆರಿಗೆ ರಿಟರ್ನ್ಸ್ (ಅಸೆಸ್ ಮೆಂಟ್ ವರ್ಷ 2020- 21) ಫೈಲಿಂಗ್ ಗೆ ನವೆಂಬರ್ 30, 2020ರ ತನಕ ಅವಧಿ ವಿಸ್ತರಣೆ ಆಗಿದೆ. ಈಗ ಜುಲೈ 31 ಹಾಗೂ ಅಕ್ಟೋಬರ್ 31 ಇದ್ದ ಫೈಲಿಂಗ್ ಅವಕಾಶ ನವೆಂಬರ್ 30ರ ತನಕ ಸಿಕ್ಕಿದೆ. ಅದೇ ರೀತಿ ತೆರಿಗೆ ಆಡಿಟ್ ವರದಿ ಸಲ್ಲಿಕೆಗೆ ಅಕ್ಟೋಬರ್ 31, 2020ರ ವರೆಗೆ ಕಾಲಾವಕಾಶ ನೀಡಲಾಗಿದೆ.

ತೆರಿಗೆ ಮೊತ್ತ ಒಂದು ಲಕ್ಷ ದಾಟಿದರೆ ವಿನಾಯಿತಿ ಇಲ್ಲ

ತೆರಿಗೆ ಮೊತ್ತ ಒಂದು ಲಕ್ಷ ದಾಟಿದರೆ ವಿನಾಯಿತಿ ಇಲ್ಲ

ಸಣ್ಣ ಹಾಗೂ ಮಧ್ಯಮ ವರ್ಗದ ತೆರಿಗೆದಾರರಿಗೆ ವಿನಾಯಿತಿ ನೀಡಲಾಗಿದೆ. ಸೆಲ್ಫ್ ಅಸೆಸ್ ಮೆಂಟ್ ತೆರಿಗೆ ಪಾವತಿದಾರರಾಗಿದ್ದು, ಅವರ ತೆರಿಗೆ ಜವಾಬ್ದಾರಿ ಒಂದು ಲಕ್ಷ ರುಪಾಯಿಯೊಳಗೆ ಇದ್ದಲ್ಲಿ ನವೆಂಬರ್ 30, 2020ರ ತನಕ ಅವಧಿ ವಿಸ್ತರಣೆ ಆಗಿದೆ. ಯಾರಿಗೆ ಸೆಲ್ಫ್ ಅಸೆಸ್ ಮೆಂಟ್ ಅಡಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ತೆರಿಗೆ ಜವಾಬ್ದಾರಿ ಇರುತ್ತದೋ ಅಂಥವರಿಗೆ ಈ ವಿನಾಯಿತಿ ಸಿಗಲ್ಲ. ಅಂಥವರು ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ನಿಗದಿ ಮಾಡಿದ ದಿನಾಂಕದಂದೇ ಪಾವತಿ ಮಾಡಬೇಕು. ಒಂದು ವೇಳೆ ತಡ ಮಾಡಿದರೆ ಸೆಕ್ಷನ್ 234A ಅಡಿಯಲ್ಲಿ ಬಡ್ಡಿ ಬೀಳುತ್ತದೆ.

ಹೂಡಿಕೆ- ದೇಣಿಗೆಗೂ ಅವಧಿ ವಿಸ್ತರಣೆ
 

ಹೂಡಿಕೆ- ದೇಣಿಗೆಗೂ ಅವಧಿ ವಿಸ್ತರಣೆ

80C (ಎಲ್ ಐಸಿ, ಪಿಪಿಎಫ್, ಎನ್ ಎಸ್ ಸಿ ಮುಂತಾದವು), 80D (ಮೆಡಿಕ್ಲೇಮ್), 80G (ದೇಣಿಗೆ) ಮುಂತಾದವುಗಳ ಹೂಡಿಕೆ ಅಥವಾ ಪಾವತಿ ಮಾಡಲು ಜುಲೈ 31, 2020ರ ತನಕ ಅವಧಿ ವಿಸ್ತರಿಸಲಾಗಿದೆ. ಆದ್ದರಿಂದ ಆರ್ಥಿಕ ವರ್ಷ 2019- 20ಕ್ಕೆ ಈ ಸೆಕ್ಷನ್ ಗಳ ಅಡಿಯಲ್ಲಿ ವಿನಾಯಿತಿ ಪಡೆಯುವುದಕ್ಕೆ ಹೂಡಿಕೆ/ಪಾವತಿ ಜುಲೈ 31, 2020ರ ತನಕ ಮಾಡಬಹುದು. ಆದಾಯ ತೆರಿಗೆ ಕಾಯ್ದೆ 54ರಿಂದ 54GB ತನಕ ಹೂಡಿಕೆ/ನಿರ್ಮಾಣ/ ಖರೀದಿಯ ಅನುಕೂಲ/ ಕ್ಯಾಪಿಟಲ್ ಗೇಯ್ನ್ಸ್ ವಿನಾಯಿತಿ ಪಡೆಯುವುದಕ್ಕೆ ಸೆಪ್ಟೆಂಬರ್ 30, 2020ರ ತನಕ ಅವಧಿ ವಿಸ್ತರಣೆ ಆಗಿದೆ. ಆದ್ದರಿಂದ ಹೂಡಿಕೆ/ ನಿರ್ಮಾಣ/ ಖರೀದಿಯನ್ನು ಸೆಪ್ಟೆಂಬರ್ 30, 2020ರ ತನಕ ಮಾಡಲು ಕಾಲಾವಕಾಶ ಇದೆ. ಆದರೆ ಅದಕ್ಕೆ ಅಗತ್ಯ ಇರುವ ಅನುಮತಿಯನ್ನು ಮಾರ್ಚ್ 31, 2020ರೊಳಗೆ ಪಡೆದಿರಬೇಕು.

ಬಡ್ಡಿಯಲ್ಲೂ ಇಳಿಕೆ ಮಾಡಲಾಗಿದೆ

ಬಡ್ಡಿಯಲ್ಲೂ ಇಳಿಕೆ ಮಾಡಲಾಗಿದೆ

ಆರ್ಥಿಕ ವರ್ಷ 2019- 20ಕ್ಕೆ ಟಿಡಿಎಸ್/ಟಿಸಿಎಸ್ ಸ್ಟೇಟ್ ಮೆಂಟ್ ಮತ್ತು ಟಿಡಿಎಸ್/ಟಿಸಿಎಸ್ ಇಶ್ಯೂಯೆನ್ಸ್ ಪ್ರಮಾಣ ಪತ್ರ ನೀಡುವುದು ಅಗತ್ಯ. ಈ ಎರಡಕ್ಕೂ ಕ್ರಮವಾಗಿ ಜುಲೈ ಹಾಗೂ ಆಗಸ್ಟ್ ಕೊನೆ ತನಕ ಅವಕಾಶ ನೀಡಲಾಗಿದೆ. ವಿವಿಧ ಕಾನೂನು ಅಡಿಯಲ್ಲಿ ನೇರ ತೆರಿಗೆಗೆ ಸಂಬಂಧಿಸಿದ ನೋಟಿಸ್ ನೀಡಲು ಡಿಸೆಂಬರ್ 31, 2020ರ ಬದಲಿಗೆ ಮಾರ್ಚ್ 31, 2021ರ ತನಕ ಅವಕಾಶ ನೀಡಲಾಗಿದೆ. ಇದೇ ದಿನಾಂಕದ ತನಕ ಆಧಾರ್ ಜತೆಗೆ ಪ್ಯಾನ್ ಕಾರ್ಡ್ ಜೋಡಣೆಗೆ ಸಹ ಕಾಲಾವಕಾಶ ಇದೆ. ತೆರಿಗೆ, ಶುಲ್ಕ ಮುಂತಾದವು ಪಾವತಿ ತಡವಾದಲ್ಲಿ ಅದಕ್ಕೆ ಕಟ್ಟಬೇಕಾದ ಬಡ್ಡಿಯನ್ನು 9%ಗೆ ಇಳಿಸಲಾಗಿದೆ. ಸುಗ್ರೀವಾಜ್ಞೆಯಲ್ಲಿ ನಿರ್ದಿಷ್ಟವಾಗಿ ತಿಳಿಸಿರುವ ಇದು ಜೂನ್ 30, 2020ರ ನಂತರದ ಪಾವತಿಗೆ ಅನ್ವಯಿಸಲ್ಲ. ಕೇಂದ್ರ ಸರ್ಕಾರ ಈ ಹಿಂದೆ ವೇತನೇತರ ಪಾವತಿಗೆ ಟಿಡಿಎಸ್/ಟಿಸಿಎಸ್ ಅನ್ನು ಆರ್ಥಿಕ ವರ್ಷದ ಉಳಿದ ಅವಧಿಗೆ 25 ಪರ್ಸೆಂಟ್ ಇಳಿಸಿತ್ತು. ಇನ್ನು 2019- 20ನೇ ಸಾಲಿಗೆ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಗೆ ನವೆಂಬರ್ 30, 2020ರ ತನಕ ಅವಧಿ ವಿಸ್ತರಿಸಿತ್ತು.

English summary

Government Extends ITR Filing Deadlines Due To Corona Lock Down

Central government extended ITR Filing deadline. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X