For Quick Alerts
ALLOW NOTIFICATIONS  
For Daily Alerts

ಕೇಂದ್ರದಿಂದ ರಾಜ್ಯಗಳಿಗೆ 44,000 ಕೋಟಿ ರೂ. ಜಿಎಸ್‌ಟಿ ಬಾಕಿ ಮೊತ್ತವನ್ನು ಬಿಡುಗಡೆ

|

ನವದೆಹಲಿ, ಅಕ್ಟೋಬರ್ 28: ಹಣಕಾಸು ಸಚಿವಾಲಯವು ಜಿಎಸ್‌ಟಿ ಪರಿಹಾರಕ್ಕೆ ಬದಲಾಗಿ ʻಸಮಾನಾಂತರ ಸಾಲʼ (ಬ್ಯಾಕ್-ಟು-ಬ್ಯಾಕ್) ಸೌಲಭ್ಯದಡಿಯಲ್ಲಿ ಶಾಸಕಾಂಗ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು 44,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆ ಮಾಡಲಾದ 1,15,000 ಕೋಟಿ ರೂ. ಒಳಗೊಂಡಂತೆ ಜಿಎಸ್‌ಟಿ ಪರಿಹಾರಕ್ಕೆ ಬದಲಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಮಾನಾಂತರ ಸಾಲ ಸೌಲಭ್ಯದ ಅಡಿಯಲ್ಲಿ ಒಟ್ಟು ಒಟ್ಟು 1,59,000 ಕೋಟಿ ರೂ. ಬಿಡುಗಡೆ ಮಾಡಿದಂತಾಗಿದೆ.

 

2021ರ ಜುಲೈ 15ರಂದು ₹ 75,000 ಕೋಟಿರು ಮತ್ತು 2021ರ ಅಕ್ಟೋಬರ್ 07ರಂದು ₹ 40,000 ಕೋಟಿ ರು ಬಿಡುಗಡೆಯಾದರು. ಈ ಮೊತ್ತವು ನೈಜ ಉಪಕರ (ಸೆಸ್) ಸಂಗ್ರಹದಿಂದ ಪ್ರತಿ 2 ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುವ ಸಾಮಾನ್ಯ ಜಿಎಸ್‌ಟಿ ಪರಿಹಾರದೊಂದಿಗೆ ಪಾವತಿಸಿದ ಹೆಚ್ಚುವರಿ ಮೊತ್ತವಾಗಿದೆ.

ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಆದಾಯ 1,17,010 ಕೋಟಿ ರೂಪಾಯಿಗೆ ಏರಿಕೆ

ಪರಿಹಾರ ನಿಧಿಯಲ್ಲಿ ಖೋತಾ ಕಾರಣದಿಂದಾಗಿ ರಾಜ್ಯಗಳಿಗೆ ಕಡಿಮೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ, ಸಂಪನ್ಮೂಲದ ಅಂತರವನ್ನು ಸರಿದೂಗಿಸಲು ಕೇಂದ್ರ ಸರಕಾರವು ₹1.59 ಲಕ್ಷ ಕೋಟಿ ರೂ.ಸಾಲ ಪಡೆದು ಶಾಸಕಾಂಗ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮಾನಾಂತರ ಸಾಲ ಸೌಲಭ್ಯದ ಆಧಾರದ ಮೇಲೆ ಅದನ್ನು ಬಿಡುಗಡೆ ಮಾಡಲು 28.05.2021ರಂದು ನಡೆದ 43ನೇ ಜಿಎಸ್‌ಟಿ ಮಂಡಳಿ ಸಭೆಯ ನಂತರ ನಿರ್ಧರಿಸಲಾಯಿತು.

2020-21ನೇ ಹಣಕಾಸು ವರ್ಷದಲ್ಲಿ ಇದೇ ರೀತಿಯ ಸೌಲಭ್ಯಕ್ಕಾಗಿ ಅಳವಡಿಸಿಕೊಳ್ಳಲಾದ ತತ್ವಗಳ ಅನುಸಾರವೇ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಆಗಲೂ ಇದೇ ರೀತಿಯ ವ್ಯವಸ್ಥೆಯ ಅಡಿಯಲ್ಲಿ ರಾಜ್ಯಗಳಿಗೆ 1.10 ಲಕ್ಷ ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಈ 1.59 ಲಕ್ಷ ಕೋಟಿ ರೂ. ಮೊತ್ತವು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶಾಸಕಾಂಗ ಹೊಂದಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಬಹುದೇಂದು ಅಂದಾಜಿಸಲಾದ 1 ಲಕ್ಷ ಕೋಟಿ ರೂ.ಗಿಂತಲೂ (ಸೆಸ್ ಸಂಗ್ರಹದ ಆಧಾರದ ಮೇಲೆ) ಅಧಿಕ ಪರಿಹಾರ ಮೊತ್ತಕ್ಕೆ ಹೆಚ್ಚುವರಿಯಾಗಿ ಮಾಡಿದ ಪಾವತಿಯಾಗಿದೆ. 2021-22ನೇ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಪರಿಹಾರದ ಮೊತ್ತವು ಒಟ್ಟು ₹2.59 ಲಕ್ಷ ಕೋಟಿ ರೂ. ಮೀರುವ ನಿರೀಕ್ಷೆಯಿದೆ.

 
ಕೇಂದ್ರದಿಂದ ರಾಜ್ಯಗಳಿಗೆ 44,000 ಕೋಟಿ ಜಿಎಸ್‌ಟಿ ಬಾಕಿ ರಿಲೀಸ್

ಎಲ್ಲಾ ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು(ಶಾಸಕಾಂಗ ಹೊಂದಿರುವ) ಸಮಾನಾಂತರ ಸಾಲ ಸೌಲಭ್ಯದ ಅಡಿಯಲ್ಲಿ ಪರಿಹಾರ ಕೊರತೆಯ ಧನಸಹಾಯದ ವ್ಯವಸ್ಥೆಗಳಿಗೆ ಸಮ್ಮತಿಸಿವೆ. ಕೋವಿಡ್-19 ಸಾಂಕ್ರಾಮಿಕದ ಪರಿಣಾಮಕಾರಿ ನಿರ್ವಹಣೆಗಾಗಿ ಹಾಗೂ ಬಂಡವಾಳ ವೆಚ್ಚದ ಏರಿಕೆಯನ್ನು ನಿರ್ವಹಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಹಳ ಪ್ರಮುಖ ಪಾತ್ರವಹಿಸಬೇಕಾಗಿದೆ. ಈ ಪ್ರಯತ್ನದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ನೀಡಲು ಹಣಕಾಸು ಸಚಿವಾಲಯವು 2021-22ನೇ ಹಣಕಾಸು ವರ್ಷದಲ್ಲಿ ಸಮಾನಾಂತರ ಸಾಲ ಸೌಲಭ್ಯದಡಿ 1,59,000 ಕೋಟಿ ರೂ. ನೆರವು ಬಿಡುಗಡೆಯನ್ನು ಅನುಮೋದಿಸಿದೆ.

ಈಗ ಬಿಡುಗಡೆ ಮಾಡಲಾಗುತ್ತಿರುವ 44,000 ಕೋಟಿ ರೂ. ಮೊತ್ತವನ್ನು ಭಾರತ ಸರಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಪಡೆದ 5.69% ಬಡ್ಡಿ ದರದ 5 ವರ್ಷಗಳ ಭದ್ರತಾ ಪತ್ರ ಆಧರಿತ ಸಾಲದಿಂದ ಎತ್ತುವಳಿ ಮಾಡಲಾಗಿದೆ. ಈ ಬಿಡುಗಡೆಯ ಕಾರಣದಿಂದಾಗಿ ಕೇಂದ್ರ ಸರಕಾರವು ಯಾವುದೇ ಹೆಚ್ಚುವರಿ ಮಾರುಕಟ್ಟೆ ಸಾಲವನ್ನು ಪಡೆಯುವ ಅಗತ್ಯ ಇರುವುದಿಲ್ಲ.

ಈ ಹಣದ ಬಿಡುಗಡೆಯಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಸಾರ್ವಜನಿಕ ವೆಚ್ಚವನ್ನು ನಿಭಾಯಿಸಲು, ಆರೋಗ್ಯ ಮೂಲಸೌಕರ್ಯ ಸುಧಾರಿಸಲು ಹಾಗೂ ಇತರೆ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಜಿಎಸ್‌ಟಿ ಪರಿಹಾರ ಕೊರತೆಗೆ ಬದಲಾಗಿ ಸಮಾನಾಂತರ ಸಾಲದ ಅಡಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ 28.10.2021 ರಂದು ಬಿಡುಗಡೆ ಮಾಡಲಾದ ಮೊತ್ತ (ಕೋಟಿ ರೂ.)

ಕ್ರಮ ಸಂಖ್ಯೆರಾಜ್ಯದ ಹೆಸರು/ಕೇಂದ್ರಾಡಳಿತ ಪ್ರದೇಶಮೊತ್ತ
01ಆಂಧ್ರಪ್ರದೇಶ905.59
02ಅಸ್ಸಾಂ490.76
03ಬಿಹಾರ1885.69
04ಛತ್ತೀಸ್‌ಗಢ1374.02
05ಗೋವಾ234.28
06ಗುಜರಾತ್3608.53
07ಹರಿಯಾಣ2045.79
08ಹಿಮಾಚಲ ಪ್ರದೇಶ745.95
09ಜಾರ್ಖಂಡ್687.76
10ಕರ್ನಾಟಕ5010.90
11ಕೇರಳ2418.49
12ಮಧ್ಯ ಪ್ರದೇಶ1940.20
13ಮಹಾರಾಷ್ಟ್ರ3814.00
14ಮೇಘಾಲಯ39.18
15ಒಡಿಶಾ1779.45
16ಪಂಜಾಬ್3357.48
17ರಾಜಸ್ಥಾನ2011.42
18ತಮಿಳುನಾಡು2240.22
19ತೆಲಂಗಾಣ1264.78
20ತ್ರಿಪುರಾ111.34
21ಉತ್ತರ ಪ್ರದೇಶ2252.37
22ಉತ್ತರಾಖಂಡ922.30
23ಪಶ್ಚಿಮ ಬಂಗಾಳ1778.16
24ದೆಹಲಿ ಕೇಂದ್ರಾಡಳಿತ ಪ್ರದೇಶ1713.34
25ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ1064.44
26ಪುದುಚೇರಿ ಕೇಂದ್ರಾಡಳಿತ ಪ್ರದೇಶ303.56
---ಒಟ್ಟು44,000.00

(ಹಣಕಾಸು ಸಚಿವಾಲಯ ಪ್ರಕಟಣೆ)

English summary

Government of India releases GST compensation balance amount of ₹ 44,000 crore to States and UTs

The Ministry of Finance has released ₹44,000 crore today to the States and UTs with Legislature under the back-to-back loan facility in lieu of GST Compensation.
Story first published: Thursday, October 28, 2021, 22:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X