For Quick Alerts
ALLOW NOTIFICATIONS  
For Daily Alerts

ಓಲಾ- ಉಬರ್ ನಂಥ ಕ್ಯಾಬ್ ಸೇವೆ ದರಗಳಿಗೆ ಸರ್ಕಾರದ ಮೂಗುದಾರ

By ಅನಿಲ್ ಆಚಾರ್
|

ಓಲಾ- ಉಬರ್ ನಂಥ ಕ್ಯಾಬ್ ಅಗ್ರಿಗೇಟರ್ ಗಳು ಮೂಲ ದರಕ್ಕಿಂತ 1.5 ಪಟ್ಟು ಮಾತ್ರ ಹೆಚ್ಚು ದರ ವಿಧಿಸಬಹುದು ಎಂಬ ನಿಯಮವನ್ನು ಶುಕ್ರವಾರದಂದು ಸರ್ಕಾರದಿಂದ ಪ್ರಸ್ತಾವ ಮಾಡಲಾಗಿದೆ. ಬಹಳ ಕಾಲದಿಂದ ದರದ ಮೇಲೆ ಮಿತಿ ವಿಧಿಸಬೇಕು ಎಂಬ ಬೇಡಿಕೆಯನ್ನು ಇಡಲಾಗುತ್ತಿತ್ತು. ಆ ಹಿನ್ನೆಲೆಯಲ್ಲಿ ಸರ್ಕಾರದ ಈ ಪ್ರಸ್ತಾವ ಮಹತ್ತರವಾಗಿದೆ.

"ಅಗ್ರಿಗೇಟರ್ ಗಳಿಗೆ ಮೂಲ ದರಕ್ಕಿಂತ ಐವತ್ತು ಪರ್ಸೆಂಟ್ ಕಡಿಮೆ ಮತ್ತು ಗರಿಷ್ಠ ಒಂದೂವರೆ ಪಟ್ಟು ಹೆಚ್ಚು ದರ ವಿಧಿಸಲು ಅನುಮತಿ ನೀಡಬಹುದು," ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.

ಉಬರ್ ಕಾರು ಚಾಲಕರು ಇನ್ಮುಂದೆ ಹೆಚ್ಚು ಹಣ ಮಾಡಬಹುದು

 

ಪ್ರತಿ ರೈಡ್ ನಲ್ಲಿ ಅಂತಿಮವಾಗಿ ದೊರೆಯುವ ದರದಲ್ಲಿ ವಾಹನದ ಚಾಲಕರಿಗೆ ಶೇಕಡಾ ಎಂಬತ್ತರಷ್ಟು ಸಿಗಲಿದೆ. ಇನ್ನು ಬಾಕಿ ಮೊತ್ತವು ಅಗ್ರಿಗೇಟರ್ ಗೆ ದೊರೆಯುತ್ತದೆ. ಯಾವ ರಾಜ್ಯದಲ್ಲಿ ಸರ್ಕಾರವು ಸಿಟಿ ಟ್ಯಾಕ್ಸಿ ಪ್ರಯಾಣ ದರವನ್ನು ನಿರ್ಧಾರ ಆಗುವುದಿಲ್ಲವೋ ಅಂಥಲ್ಲಿ 25/30 ರುಪಾಯಿಯನ್ನು ದರ ನಿಗದಿ ಮಾಡಬಹುದು ಎಂದು ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.

ಓಲಾ- ಉಬರ್ ನಂಥ ಕ್ಯಾಬ್ ಸೇವೆ ದರಗಳಿಗೆ ಸರ್ಕಾರದ ಮೂಗುದಾರ

ಇದೇ ರೀತಿಯಲ್ಲಿ ಅಗ್ರಿಗೇಟರ್ ಗಳೊಂದಿಗೆ ಇರುವ ಇತರ ವಾಹನಗಳಿಗೂ ರಾಜ್ಯ ಸರ್ಕಾರದಿಂದಲೇ ದರ ನಿಗದಿ ಮಾಡಬಹುದು ಎಂದು ಸಚಿವಾಲಯದಿಂದ ಹೇಳಲಾಗಿದೆ.

English summary

Govt proposes capping surge pricing by cab aggregators at 1.5 times of base fare

Central government on Friday proposes to cap on cab aggregators fare.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X