For Quick Alerts
ALLOW NOTIFICATIONS  
For Daily Alerts

FY21ರಲ್ಲಿ ಕೇಂದ್ರಕ್ಕೆ ರು. 5.2 ಲಕ್ಷ ಕೋಟಿ ತೆರಿಗೆ ಸಂಗ್ರಹದಲ್ಲಿ ಕೊರತೆ

By ಅನಿಲ್ ಆಚಾರ್
|

ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹವು 2020- 21ನೇ ಸಾಲಿನಲ್ಲಿ ರು. 5.2 ಲಕ್ಷ ಕೋಟಿ ಕಡಿಮೆ ಆಗಿದ್ದು, 19 ಲಕ್ಷ ಕೋಟಿ ರುಪಾಯಿ ಆಗಿದೆ. ಬಜೆಟ್ 2020- 21ರಲ್ಲಿ ಸಗಟು ತೆರಿಗೆ ಸಂಗ್ರಹದ ಅಂದಾಜು ರು. 24.2 ಕೋಟಿ ಎಂದು ಲೆಕ್ಕ ಇರಿಸಿಕೊಳ್ಳಲಾಗಿತ್ತು.

 

ಐಟಿಆರ್ ಫೈಲ್ ಮಾಡಿಲ್ಲವೆ? ಹೆಚ್ಚಿನ TDS- TCS ಕಡಿತಕ್ಕೆ ಸಿದ್ಧರಾಗಿ

ಈಗಿನ ತೆರಿಗೆ ಸಂಗ್ರಹವು ಹಿಂದಿನ ವರ್ಷ ಆಗಿದ್ದ ರು. 20 ಲಕ್ಷ ಕೋಟಿಗಿಂತ ಕಡಿಮೆ ಇದೆ. ಕಾರ್ಪೊರೇಟ್ ತೆರಿಗೆಯಲ್ಲಿ ಈ ಬಾರಿ ರು. 2.34 ಲಕ್ಷ ಕೋಟಿ ಕೊರತೆ ಆಗಿರುವುದು ಅತಿ ದೊಡ್ಡ ಪ್ರಮಾಣದ ಇಳಿಕೆಗೆ ಕಾರಣ ಆಗಿದೆ. 2020- 21 ಬಜೆಟ್ ನಲ್ಲಿ 6.8 ಲಕ್ಷ ಕೋಟಿ ರುಪಾಯಿ ಅಂದಾಜಿಸಲಾಗಿತ್ತು. ಆ ನಂತರ ಅಂದಾಜು ಪರಿಷ್ಕರಣೆ ರು. 4.46 ಲಕ್ಷ ಕೋಟಿಗೆ ಮಾಡಲಾಯಿತು.

FY21ರಲ್ಲಿ ಕೇಂದ್ರಕ್ಕೆ ರು. 5.2 ಲಕ್ಷ ಕೋಟಿ ತೆರಿಗೆ ಸಂಗ್ರಹ ಕೊರತೆ

ಆದಾಯ ತೆರಿಗೆ ಸಂಗ್ರಹದಲ್ಲಿ ರು. 1.8 ಲಕ್ಷ ಕೋಟಿ ಕೊರತೆ ಆಗಿದೆ. ಮೊದಲಿಗೆ ಅಂದಾಜು ಮಾಡಿದ್ದು ರು. 6.38 ಲಕ್ಷ ಕೋಟಿಯ ಆದಾಯ. ಪರಿಷ್ಕೃತ ಅಂದಾಜಿನಂತೆ ತೆರಿಗೆ ಸಂಗ್ರಹ ರು. 4.59 ಲಕ್ಷ ಕೋಟಿ ಆಗಿದೆ. ಕೇಂದ್ರದ ಜಿಎಸ್ ಟಿ ಸಂಗ್ರಹ ರು. 5.15 ಲಕ್ಷ ಕೋಟಿ ಆಗುವ ಸಾಧ್ಯತೆ ಇದೆ. ಬಜೆಟ್ ಗುರಿ ರು. 6.9 ಲಕ್ಷ ಕೋಟಿ ಇತ್ತು.

English summary

Budget 2021 : Government Sees Rs 5 Lakh Crore Shortfall Of Tax Revenue In FY 21

Union government sees Rs 5 lakh crore shortfall of tax revenue in financial year 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X