For Quick Alerts
ALLOW NOTIFICATIONS  
For Daily Alerts

BPCL, SCI ಷೇರುಗಳ ಮಾರಾಟಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

|

ಸರ್ಕಾರದ ಅತಿ ದೊಡ್ಡ ಆಸ್ತಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (BPCL) ಮತ್ತು ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (SCI ) ಷೇರುಗಳ ಮಾರಾಟಕ್ಕೆ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ(CCEA) ಅನುಮೋದನೆ ನೀಡಿದೆ.

 

ಬಿಪಿಸಿಎಲ್ ಹಾಗೂ ಎಸ್‌ಸಿಐ ಸೇರಿದಂತೆ ಸಾರ್ವಜನಿಕ ವಲಯದ ಐದು ಕಂಪನಿಗಳ ಷೇರು ಮಾರಾಟ ಮಾಡಲು ಕೇಂದ್ರ ಸರ್ಕಾರ ಬುಧವಾರ ತೀರ್ಮಾನಿಸಿದೆ.

BPCL, SCI ಷೇರುಗಳ ಮಾರಾಟಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ಬಿಪಿಸಿಎಲ್‌ನಲ್ಲಿ ಹೊಂದಿರುವ ಶೇಕಡಾ 53.29 ರಷ್ಟು ಷೇರುಗಳನ್ನು ಮಾರಾಟ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಷೇರು ಮಾರಾಟದ ಮೂಲಕ ಸರ್ಕಾರಿ ಸ್ವಾಮ್ಯದ ಈ ಎರಡು ಕಂಪನಿಗಳಿಂದ ನಿರ್ಗಮಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ 95,700 ಕೋಟಿ ವಂಚನೆ

ಜೊತೆಗೆ ಟಿಹೆಚ್‌ಡಿಸಿ ಇಂಡಿಯಾ ಮತ್ತು ಈಸ್ಟ್‌ ಎಲೆಕ್ಟ್ರಿಕ್ ಕಾರ್ಪೋರೇಷನ್ ಪಾಲನ್ನು ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿಗೆ ನೀಡಲಿದೆ. ಸರ್ಕಾರದ ನಿರ್ವಹಣಾ ನಿಯಂತ್ರಣ ಉಳಿಸಿಕೊಂಡು ಆಯ್ದ ಕಂಪನಿಗಳ ಷೇರುಗಳ ಪಾಲನ್ನು ಶೇಕಡಾ 51ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸದ್ಯ ಬಿಪಿಸಿಎಲ್‌ನಲ್ಲಿ ಶೇಕಡಾ 53.29 ರಷ್ಟು ಮತ್ತು ಎಸ್‌ಸಿಐನಲ್ಲಿ ಶೇಕಡಾ 63.75 ರಷ್ಟು ಷೇರುಗಳನ್ನು ಸರ್ಕಾರ ಹೊಂದಿದೆ. ಈ ಎಲ್ಲಾ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಬೃಹತ್ ಖಾಸಗೀಕರಣಕ್ಕೆ ಒಪ್ಪಿಗೆ ನೀಡಿದೆ.

English summary

Government To Sell BPCL For Privatization

The cabinet committee of economic affairs on wednesday cleared one of the govt largest asset sale excerses involving five companies, include BPCL, CSI
Story first published: Thursday, November 21, 2019, 10:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X