ಹೊಸ ಹೂಡಿಕೆದಾರರನ್ನು ಉತ್ತೇಜಿಸಲು ಎಸ್ಟಿಟಿ ರದ್ದು ಅತ್ಯಗತ್ಯ: ತಜ್ಞರು
ಫೆಬ್ರವರಿ 1 ರಂದು ಹಣಕಾಸು ಸಚಿವರು ಮಂಡಿಸಲಿರುವ ಕೇಂದ್ರ ಬಜೆಟ್ನಲ್ಲಿ ಈಕ್ವಿಟಿ ವ್ಯಾಪಾರದ ಮೇಲಿನ ಸೆಕ್ಯುರಿಟೀಸ್ ಟ್ರ್ಯಾನ್ಸಾಕ್ಷನ್ ಟ್ಯಾಕ್ಸ್(STT)ನಿಂದ ವ್ಯಾಪಾರಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಸರ್ಕಾರವು ಆಲೋಚನೆ ಮಾಡಬೇಕು ಎಂದು ಮಾರುಕಟ್ಟೆ ತಜ್ಞರು ಗುರುವಾರ ಹೇಳಿದ್ದಾರೆ. ಈ ಕ್ರಮವು ಬಂಡವಾಳ ಮಾರುಕಟ್ಟೆಗಳನ್ನು ಉತ್ತೇಜಿಸುವ ಮತ್ತು ಹೊಸ ಹೂಡಿಕೆದಾರರನ್ನು ಉತ್ತೇಜಿಸುವ ನಿರೀಕ್ಷೆಯಿದೆ.
ಸರ್ಕಾರವು 2004 ರಲ್ಲಿ ವಿವಿಧ ರೀತಿಯ ಸೆಕ್ಯುರಿಟಿಗಳಲ್ಲಿನ ವಹಿವಾಟುಗಳ ಮೇಲೆ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್ಟಿಟಿ) ಅನ್ನು ಪರಿಚಯಿಸಿತು. ಮಾರಾಟವಾಗಲಿ ಅಥವಾ ಖರೀದಿಯಾಗಲಿ ವ್ಯಾಪಾರದ ಭದ್ರತೆ ಮತ್ತು ವಹಿವಾಟಿನ ಪ್ರಕಾರವನ್ನು ಅವಲಂಬಿಸಿ ದರವು ಪ್ರಸ್ತುತ ಶೇಕಡಾ 0.025 ರಿಂದ ಶೇಕಡಾ 0.25 ರವರೆಗೆ ಬದಲಾಗುತ್ತದೆ.
ಬಜೆಟ್ 2022: ಗೃಹ ಸಾಲಗಳ ಮೇಲಿನ ತೆರಿಗೆ ಕಡಿತ ಹೆಚ್ಚಳ ನಿರೀಕ್ಷೆ
"ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಅನ್ನು ರದ್ದುಗೊಳಿಸಿದರೆ ಹೂಡಿಕೆ ಉದ್ಯಮವು ಪ್ರಯೋಜನವನ್ನು ಪಡೆಯುತ್ತದೆ. ದೀರ್ಘಾವಧಿಯ ಬಂಡವಾಳ ಲಾಭಗಳು (ಎಲ್ಟಿಸಿಜಿ) ಮತ್ತು ಅಲ್ಪಾವಧಿಯ ಬಂಡವಾಳ ಲಾಭಗಳು (ಎಸ್ಟಿಸಿಜಿ) ಇವೆ," ಎಂದು ಟ್ರೂ ಬೀಕನ್ ಮತ್ತು ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಹೇಳಿದರು. ಅದೇನೇ ಇದ್ದರೂ, ಸರ್ಕಾರವು ಎಸ್ಟಿಟಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದರೆ ದೀರ್ಘಾವಧಿಯ ಬಂಡವಾಳ ಲಾಭದ ಮೇಲಿನ ತೆರಿಗೆಯನ್ನು ತೆಗೆದುಹಾಕುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಕೂಡಾ ಹೇಳಿದ್ದಾರೆ.

ಅಪ್ಸ್ಟಾಕ್ಸ್ನ ನಿರ್ದೇಶಕ ಪುನೀತ್ ಮಹೇಶ್ವರಿ ಮಾತನಾಡಿ, "ಎಸ್ಟಿಟಿಯ ಹೊರೆಯಿಂದ ವ್ಯಾಪಾರಿಗಳನ್ನು ಬಿಡುಗಡೆ ಮಾಡಲು ಸರ್ಕಾರವು ಪರಿಗಣಿಸಬಹುದು. ಹಾಗೆ ಮಾಡುವುದರಿಂದ ಹೊಸ ಹೂಡಿಕೆದಾರರು ವಹಿವಾಟು ಆರಂಭಿಸಲು ಉತ್ತೇಜನ ನೀಡಲು ಸಾಧ್ಯವಾಗುತ್ತದೆ," ಎಂದು ಹೇಳಿದರು. "ಸೂಚ್ಯಂಕಗಳು ಅಥವಾ ವಿನಿಮಯ-ವಹಿವಾಟು ನಿಧಿಗಳಲ್ಲಿ ಹೆಚ್ಚಾಗಿ ಹೂಡಿಕೆ ಆಗುವ ಅಗತ್ಯವಿದೆ. ಈಕ್ವಿಟಿ-ಲಿಂಕ್ಡ್ ತೆರಿಗೆ ಉಳಿತಾಯ ಯೋಜನೆಗಳ ಸಾಲಿನಲ್ಲಿ ಲಾಕ್-ಇನ್ ಮತ್ತು ತೆರಿಗೆ ಪ್ರೋತ್ಸಾಹವನ್ನು ನೀಡುವ ಮೂಲಕ, ಸರ್ಕಾರವು ನಿಫ್ಟಿ ಅಥವಾ ಸೆನ್ಸೆಕ್ಸ್ನಲ್ಲಿ ದೀರ್ಘಾವಧಿಯ ಉಳಿತಾಯವನ್ನು ಉತ್ತೇಜಿಸಬಹುದು," ಎಂದು ಅಭಿಪ್ರಾಯಿಸಿದ್ದಾರೆ.
ಕೇಂದ್ರ ಬಜೆಟ್ಗೂ ಮುನ್ನ ವೈಯಕ್ತಿಕ ಹಣಕಾಸು ನಿರ್ವಹಣೆ ಹೀಗೆ ಮಾಡಿ..
ಭಾರತದ ಕಂಪನಿಗಳಿಗೆ ಅವಕಾಶವಿರಲಿ
ಸರ್ಕಾರಿ ಸ್ವಾಮ್ಯದ ಭವಿಷ್ಯ ನಿಧಿಗಳು ಮತ್ತು ಪಿಂಚಣಿ ನಿಧಿಗಳಿಂದ ಈಕ್ವಿಟಿ ಮಾರುಕಟ್ಟೆಗಳಿಗೆ ಹೆಚ್ಚಿನ ಹೂಡಿಕೆ ಕೂಡಾ ಸಹಾಯ ಮಾಡಬಹುದು ಎಂದಿದ್ದಾರೆ. "ಕಂಪನಿಗಳು ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಬದಲಾವಣೆ ಮಾಡುವಂತೆ ಕೋರಿ ಸರ್ಕಾರವನ್ನು ತಲುಪುತ್ತಿರುವಾಗ, ಪಟ್ಟಿ ಮಾಡದ ಭಾರತೀಯ ಕಂಪನಿಗಳನ್ನು ವಿದೇಶದಲ್ಲಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊರುತ್ತದೆ. ಇದು ಮನೆಯಲ್ಲಿ ಕೆಲಸ ಮಾಡಲು ಸರಿಯಾದ ಸಮಯ ಎಂದು ನಾನು ನಂಬುತ್ತೇನೆ," ಎಂದು ಪರೋಕ್ಷವಾಗಿ ಭಾರತದಲ್ಲಿ ವ್ಯಾಪಾರ ನಡೆಸಲು ಭಾರತೀಯ ಕಂಪನಿಗಳಿಗೆ ಅವಕಾಶ ಮಾಡಿಕೊಡಿ ಎಂದು ತಿಳಿಸಿದ್ದಾರೆ.
ಅಪ್ಸ್ಟಾಕ್ಸ್ನ ನಿರ್ದೇಶಕ ಪುನೀತ್ ಮಹೇಶ್ವರಿ ಪ್ರಕಾರ ಕಂಪನಿಗಳನ್ನು ಪಟ್ಟಿ ಮಾಡಲು ಅಂದರೆ ಮಾನ್ಯತೆ ನೀಡಲು ಭಾರತದಲ್ಲಿ ಪ್ರವೇಶ ಅಡೆತಡೆಗಳು ಹೆಚ್ಚು. ಆದರೆ ಒಮ್ಮೆ ಮಾನ್ಯತೆ ಪಡೆದರೆ ಉಲ್ಲಂಘನೆಗಳಿಗೆ ದಂಡವು ಕಡಿಮೆಯಿರುತ್ತದೆ. ಇಲ್ಲವಾದರೆ ಹೂಡಿಕೆದಾರರು, ವಿಶೇಷವಾಗಿ ಚಿಲ್ಲರೆ ವ್ಯಾಪಾರವು ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತದೆ.
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗಿದೆ. ಇದರ ಮಧ್ಯೆ ಜನವರಿ 31 ರಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆಗಾಗಿ ಫೆಬ್ರವರಿ 1ರಂದು ಬೆಳಗ್ಗೆ 11 ಗಂಟೆಗೆ ಸಭೆ ಸೇರಲಾಗುತ್ತಿದ್ದು, ಫೆಬ್ರವರಿ 2 ರಿಂದ ಫೆಬ್ರವರಿ 11 ರವರೆಗೆ ಸಂಸತ್ ಅಧಿವೇಶನ ನಡೆಯಲಿದೆ. ಭಾರತದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಿಸಲಿದ್ದಾರೆ. 2022 ರ ಬಜೆಟ್ ಹಲವಾರು ನಿರೀಕ್ಷೆಗಳನ್ನು ಹೊಂದಿದೆ. ಕೃಷಿ, ಆರೋಗ್ಯ ಮತ್ತು ರಿಯಲ್ ಎಸ್ಟೇಟ್ ಅಥವಾ ಉದ್ಯಮಿಗಳು ಮತ್ತು ಸಂಬಳ ವೃತ್ತಿಪರರಂತಹ ವ್ಯಕ್ತಿಗಳಿಗೆ ಈ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳು ಇದೆ.