For Quick Alerts
ALLOW NOTIFICATIONS  
For Daily Alerts

ಸಣ್ಣ ಉಳಿತಾಯ ಯೋಜನೆಗಳು: ಬಡ್ಡಿ ದರ ಕಡಿತದ ಆದೇಶ ಹಿಂಪಡೆದ ಸರ್ಕಾರ!

|

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿದರಗಳನ್ನು ಕಡಿಮೆ ಮಾಡಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಟ್ವೀಟ್ ಮಾಡಿದ್ದಾರೆ.

 

ಸಣ್ಣ ಉಳಿತಾಯ ಯೋಜನೆಗಳಾದ ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ), ಪಿಪಿಎಫ್‌, ನಿಗದಿತ ಠೇವಣಿ, ಉಳಿತಾಯ ಖಾತೆ ಸೇರಿದಂತೆ ಬಹುತೇಕ ಎಲ್ಲಾ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಈ ಹಿಂದೆ ಇಳಿಕೆ ಮಾಡಲಾಗಿತ್ತು. ಹೀಗಾಗಿ ಈ ಪರಿಷ್ಕೃತ ದರಗಳು ಏಪ್ರಿಲ್ 1ರಿಂದ ಅನ್ವಯ ಆಗಲಿದ್ದು, ಏಪ್ರಿಲ್ ಹಾಗೂ ಜೂನ್ ತ್ರೈಮಾಸಿಕದಲ್ಲಿ ಜಾರಿಯಲ್ಲಿರಲಿವೆ ಎನ್ನಲಾಗಿತ್ತು.

ಸಣ್ಣ ಉಳಿತಾಯ ಯೋಜನೆಗಳು: ಬಡ್ಡಿ ದರ ಕಡಿತದ ಆದೇಶ ಹಿಂಪಡೆದ ಸರ್ಕಾರ!

ಗುರುವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ' ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ, ಅಂದರೆ 2021ರ ಮಾರ್ಚ್‌ವರೆಗೆ ಇದ್ದ ದರಗಳು ಮುಂದುವರಿಯಲಿವೆ'' ಎಂದು ಹೇಳಿದ್ದಾರೆ.

ಸಣ್ಣ ಉಳಿತಾಯ ಯೋಜನೆಗಳ ಮೇಲೆ ಗರಿಷ್ಠ ಶೇ. 1.1ರವರೆಗೆ ಬಡ್ಡಿದರ ಇಳಿಕೆ ಮಾಡಲಾಗಿತ್ತು. ಆದರೆ ಈಗ ಈ ಆದೇಶವನ್ನು ಹಿಂಪಡೆಯಲಾಗಿದೆ.

English summary

Govt Withdraws Order Slashing Rates Of Small Saving Schemes

The government announced steep cuts in interest rates of small saving schemes, including the PPF and NSC, on Wednesday. That order has been withdrawn, finance minister Nirmala Sitharaman announced on Thursday morning.
Story first published: Thursday, April 1, 2021, 8:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X