For Quick Alerts
ALLOW NOTIFICATIONS  
For Daily Alerts

ಜೂನ್‌ನಲ್ಲಿ 92,849 ಕೋಟಿ GST ಆದಾಯ ಸಂಗ್ರಹ: ಕಳೆದ 10 ತಿಂಗಳಲ್ಲಿ ಭಾರೀ ಕಡಿಮೆ!

|

ಕೋವಿಡ್‌-19 ಸಾಂಕ್ರಾಮಿಕ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳ ಸಡಿಲಿಕೆಗಳ ನಡುವೆಯು ಜೂನ್ ತಿಂಗಳಿನಲ್ಲಿ ಜಿಎಸ್‌ಟಿ ಆದಾಯ ಸಂಗ್ರಹವು 1 ಲಕ್ಷ ಕೋಟಿ ರೂಪಾಯಿ ಒಳಗೆ ಕುಸಿದಿದ್ದು , ಕಳೆದ 10 ತಿಂಗಳಿನಲ್ಲಿ ಅತ್ಯಂತ ಕಡಿಮೆ ಆದಾಯ ಸಂಗ್ರಹಗೊಂಡಿದೆ.

 

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯ ಜೂನ್ 2021 ರ ಸಂಗ್ರಹವು 92,849 ಕೋಟಿ ರೂ.ಗೆ ಇಳಿದಿದೆ ಎಂದು ಹಣಕಾಸು ಸಚಿವಾಲಯ ಜುಲೈ 6 ರಂದು ಹೇಳಿದೆ. ಒಂಬತ್ತು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಮಾಸಿಕ ಜಿಎಸ್‌ಟಿ ಸಂಗ್ರಹವು 1 ಲಕ್ಷ ಕೋಟಿ ರೂ.ಗಿಂತ ಕಡಿಮೆಯಾಗಿದೆ.

ಜೂನ್‌ನಲ್ಲಿ 92,849 ಕೋಟಿ GST ಆದಾಯ ಸಂಗ್ರಹ!

ಕೊನೆಯ ಬಾರಿಗೆ 2020ರ ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 95,480 ಕೋಟಿ ರೂ. ದಾಖಲಾಗಿತ್ತು, ಆದರೆ ಜೂನ್ 2021 ರ ಸಂಗ್ರಹವು ಆಗಸ್ಟ್ 2020 ರಿಂದ ಹತ್ತು ತಿಂಗಳಲ್ಲಿ ಅತಿ ಹೆಚ್ಚು ಸಂಗ್ರಹವಾಗಿತ್ತು.

ಜೂನ್‌ನಲ್ಲಿ ಕೇಂದ್ರ ಜಿಎಸ್‌ಟಿ ಸಂಗ್ರಹ 16,424 ಕೋಟಿ ರೂ., ರಾಜ್ಯ ಜಿಎಸ್‌ಟಿ 20,397 ರೂ., ಇಂಟಿಗ್ರೇಟೆಡ್ ಜಿಎಸ್‌ಟಿ 49,079 ಕೋಟಿ ರೂ., ಸೆಸ್ 6,949 ಕೋಟಿ ರೂ. ಸಂಗ್ರಹವಾಗಿದೆ.

ಈ ವರ್ಷ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಜಿಎಸ್‌ಟಿ ಆದಾಯ ಸಂಗ್ರಹವು ಶೇಕಡಾ 30ರಷ್ಟು ಕಡಿಮೆಯಾಗಿದೆ.

English summary

GST Collection in June 2021: GST revenue falls to Rs 92,849 crore in June Month

The economic impact the 'second wave' of Covid-19 showed on Goods and Service Tax (GST) as collections for June 2021 fell to Rs 92,849 crore
Story first published: Tuesday, July 6, 2021, 17:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X