For Quick Alerts
ALLOW NOTIFICATIONS  
For Daily Alerts

ಚಿಗಿತುಕೊಂಡ ಜಿಎಸ್ ಟಿ ಸಂಗ್ರಹ; ಸೆಪ್ಟೆಂಬರ್ ನಲ್ಲಿ 95,480 ಕೋಟಿ ರುಪಾಯಿ

By ಅನಿಲ್ ಆಚಾರ್
|

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹ ಸೆಪ್ಟೆಂಬರ್ ತಿಂಗಳಲ್ಲಿ 95,480 ಕೋಟಿ ರುಪಾಯಿ ಸಂಗ್ರಹ ಆಗಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಆರಂಭವಾದ ಮೇಲೆ ತಿಂಗಳ ಆಧಾರದಲ್ಲಿ ಸಂಗ್ರಹವಾದ ಅತಿ ದೊಡ್ಡ ಮೊತ್ತ ಇದು. ಕಳೆದ ಆಗಸ್ಟ್ ಗೆ ಹೋಲಿಸಿದರೆ 10.4% ಹಾಗೂ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 4% ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ಗುರುವಾರ ತಿಳಿಸಲಾಗಿದೆ.

ಕೇಂದ್ರದಿಂದ ರಾಜ್ಯಗಳಿಗೆ 1.51 ಲಕ್ಷ ಕೋಟಿ GST ಪರಿಹಾರ ಬಾಕಿ: ಕರ್ನಾಟಕದ್ದು 14 ಸಾವಿರ ಕೋಟಿ

"ಆರ್ಥಿಕತೆಯಲ್ಲಿ ಬಹು ಮುಖ್ಯವಾದ ಭಾಗಗಳ ಕಾರ್ಯ ಚಟುವಟಿಕೆ ಹಾಗೂ ಅಂತರರಾಷ್ಟ್ರೀಯ ವ್ಯಾಪಾರ- ವಹಿವಾಟು ಆರಂಭವಾಗಿರುವುದರಿಂದ ಹಾಗೂ ಶಾಂತಿ ಸ್ಥಿತಿಯೂ ಇರುವುದರಿಂದ ತೆರಿಗೆ ಸಂಗ್ರಹದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದೆ. ಆದಾಯದಲ್ಲಿ ಹೆಚ್ಚಳವಾಗಿರುವುದು ವ್ಯವಹಾರ ಚಟುವಟಿಕೆಗಳು ಸಹಜ ಸ್ಥಿತಿಯ ಸೂಚಕವಾಗಿದೆ ಮತ್ತು ಸಾಮಾನ್ಯವಾಗಿ ಆಶಾದಾಯಕವಾಗಿ ಪರಿಸ್ಥಿತಿ ಗೋಚರಿಸುತ್ತಿದೆ," ಎಂದು ಇವೈ ಪರೋಕ್ಷ ತೆರಿಗೆ ಪಾರ್ಟನರ್ ಆಗಿರುವ ಅಭಿಷೇಕ್ ಜೈನ್ ತಿಳಿಸಿದ್ದಾರೆ.

ಇಂಟಿಗ್ರೇಟೆಡ್ ಜಿಎಸ್ ಟಿ 47,484 ಕೋಟಿ ರುಪಾಯಿ
 

ಇಂಟಿಗ್ರೇಟೆಡ್ ಜಿಎಸ್ ಟಿ 47,484 ಕೋಟಿ ರುಪಾಯಿ

ಒಟ್ಟಾರೆ ಸಗಟು ಸಂಗ್ರಹದಲ್ಲಿ ಕೇಂದ್ರ ಜಿಎಸ್ ಟಿ 17,741 ಕೋಟಿ ರು., ರಾಜ್ಯ ಜಿಎಸ್ ಟಿ 23,131 ಕೋಟಿ ರು., ಇಂಟಿಗ್ರೇಟೆಡ್ ಜಿಎಸ್ ಟಿ 47,484 ಕೋಟಿ ರು. ಮತ್ತು ಇದರಲ್ಲಿ 22,442 ಕೋಟಿ ರುಪಾಯಿಯನ್ನು ವಸ್ತುಗಳ ಆಮದಿನ ಮೇಲೆ ಸಂಗ್ರಹಿಸಲಾಗಿದೆ. ಸೆಸ್ ಸಂಗ್ರಹ 7,124 ಕೋಟಿ ರುಪಾಯಿ ಇದೆ. ಇದರಲ್ಲಿ ಆಮದು ವಸ್ತುವಿನ ಮೇಲಿನ 788 ಕೋಟಿ ರುಪಾಯಿ ಒಳಗೊಂಡಿದೆ.

ಸಿಜಿಎಸ್ ಟಿ ಹಾಗೂ ಎಸ್ ಜಿಎಸ್ ಟಿ ತೀರುವಳಿ

ಸಿಜಿಎಸ್ ಟಿ ಹಾಗೂ ಎಸ್ ಜಿಎಸ್ ಟಿ ತೀರುವಳಿ

ಸರ್ಕಾರದಿಂದ 21,260 ಕೋಟಿ ರು. ಸಿಜಿಎಸ್ ಟಿ ಹಾಗೂ 16,997 ಕೋಟಿ ರು. ಎಸ್ ಜಿಎಸ್ ಟಿಯನ್ನು ಐಜಿಎಸ್ ಟಿಯಿಂದ ತೀರುವಳಿ ಆಗಿದೆ. ಸೆಪ್ಟೆಂಬರ್ ನಲ್ಲಿ ಎಲ್ಲ ಮಾಮೂಲಿ ತೀರುವಳಿಯ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಳಿಸಿರುವುದು ಸಿಜಿಎಸ್ ಟಿ 39,001 ಕೋಟಿ ರುಪಾಯಿ ಹಾಗೂ ಎಸ್ ಜಿಎಸ್ ಟಿ 40,128 ಕೋಟಿ ರುಪಾಯಿ.

ಅಕ್ಟೋಬರ್ 5ನೇ ತಾರೀಕು ಜಿಎಸ್ ಟಿ ಸಮತಿ ಸಭೆ

ಅಕ್ಟೋಬರ್ 5ನೇ ತಾರೀಕು ಜಿಎಸ್ ಟಿ ಸಮತಿ ಸಭೆ

ಕೊರೊನಾ ನಿಯಂತ್ರಿಸುವ ಸಲುವಾಗಿ ಲಾಕ್ ಡೌನ್ ಘೋಷಿಸಿದ್ದರಿಂದ ರಾಜ್ಯ ಸರ್ಕಾರಗಳಿಗೆ ಆದಾಯ ಕೊರತೆ ಆಗಿದೆ. ಆ ಆದಾಯ ಕೊರತೆಯನ್ನು ತುಂಬಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಮುಂದೆ ಇಟ್ಟಿದ್ದ ಪ್ರಸ್ತಾವದ ಆಯ್ಕೆಗಳ ಬಗ್ಗೆ ಅಕ್ಟೋಬರ್ 5ನೇ ತಾರೀಕಿನಂದು ಜಿಎಸ್ ಟಿ ಸಮಿತಿ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗುತ್ತದೆ.

English summary

GST Collection In September Month 95480 Crore

GST collection in September month 95,480 crore rupees. Here is the complete details.
Story first published: Thursday, October 1, 2020, 18:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X