GST : ಜಿಎಸ್ಟಿ: ಶೇ.5 ತೆರಿಗೆ ಸ್ಲ್ಯಾಬ್ ರದ್ದು ಮಾಡಿ ಏರಿಕೆ?
ಪರಿಹಾರಕ್ಕಾಗಿ ಕೇಂದ್ರದ ಮೇಲೆ ಅವಲಂಬಿತವಾಗದಂತೆ ಆದಾಯವನ್ನು ಹೆಚ್ಚಿಸಲು ಹೆಚ್ಚಿನ ರಾಜ್ಯಗಳು ಸಿದ್ದವಾಗಿರುವಾಗ, ಸರಕು ಮತ್ತು ಸೇವಾ ತೆರಿಗೆ ಮಂಡಳಿ (ಜಿಎಸ್ಟಿ) ಕೌನ್ಸಿಲ್ ಮುಂದಿನ ತಿಂಗಳು ತನ್ನ ಮುಂಬರುವ ಸಭೆಯಲ್ಲಿ ರಾಜ್ಯಗಳ ಪ್ರಸ್ತಾವನೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ಶೇಕಡ 5ರ ತೆರಿಗೆ ಸ್ಲ್ಯಾಬ್ ಅನ್ನು ರದ್ದು ಮಾಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಮುಂದಿನ ತಿಂಗಳು ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯ ಅಡಿಯಲ್ಲಿ ಶೇಕಡ 5ರ ತೆರಿಗೆ ಸ್ಲ್ಯಾಬ್ ರದ್ದು ಮಾಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ಲಭ್ಯವಾಗಿದೆ.
GST Collection in March 2022: ಮಾರ್ಚ್ನಲ್ಲಿ ಸಾರ್ವಕಾಲಿಕ ದಾಖಲೆಯ ಜಿಎಸ್ಟಿ ಸಂಗ್ರಹ
5 ಶೇಕಡಾ ಸ್ಲ್ಯಾಬ್ಗಳಲ್ಲಿ ಸಾಮೂಹಿಕ ಬಳಕೆಯ ಕೆಲವು ಸರಕುಗಳ ತೆರಿಗೆ ಸ್ಲ್ಯಾಬ್ ಅನ್ನು ಶೇಕಡ 3ಕ್ಕೆ ಹಾಗೂ ಉಳಿದವುಗಳನ್ನು ಶೇಕಡ 8ಕ್ಕೆ ಬದಲಾವಣೆ ಮಾಡುವ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಜಿಎಸ್ಟಿ ಮಂಡಳಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಪ್ರಸ್ತುತ, ಜಿಎಸ್ಟಿಯು 5, 12, 18 ಮತ್ತು 28 ರ ನಾಲ್ಕು ಸ್ಲ್ಯಾಬ್ಗಳನ್ನು ಹೊಂದಿದೆ. ಇದಲ್ಲದೆ, ಚಿನ್ನ ಮತ್ತು ಚಿನ್ನದ ಆಭರಣಗಳು 3 ಪ್ರತಿಶತ ತೆರಿಗೆಯನ್ನು ಹೊಂದಿದೆ. ಇನ್ನು ತೆರಿಗೆ ಇಲ್ಲದ ಪ್ಯಾಕ್ ಮಾಡದ ಆಹಾರ ಪದಾರ್ಥಗಳಂತಹ ವಸ್ತುಗಳ ವಿನಾಯಿತಿ ಪಟ್ಟಿಯೂ ಇದೆ.
ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ಅವಧಿ ವಿಸ್ತರಣೆಗೆ ಸಿಎಂ ಬೊಮ್ಮಾಯಿ ಮನವಿ
"ಆದಾಯವನ್ನು ಹೆಚ್ಚಿಸಲು ಕೌನ್ಸಿಲ್ ಕೆಲವು ಆಹಾರೇತರ ವಸ್ತುಗಳನ್ನು 3 ಶೇಕಡಾ ಸ್ಲ್ಯಾಬ್ಗೆ ಸ್ಥಳಾಂತರಿಸುವ ಮೂಲಕ ವಿನಾಯಿತಿ ಪಟ್ಟಿಯಿಂದ ಕೆಲವನ್ನು ಹೊರಕ್ಕೆ ಇಡುವ ಸಾಧ್ಯತೆ ಇದೆ," ಎಂದು ಮೂಲಗಳು ತಿಳಿಸಿವೆ.
5 ಪ್ರತಿಶತ ತೆರಿಗೆ ಸ್ಲ್ಯಾಬ್ ಏರಿಕೆ ಸಾಧ್ಯತೆ
5 ಪ್ರತಿಶತ ತೆರಿಗೆ ಸ್ಲ್ಯಾಬ್ ಅನ್ನು 7 ಅಥವಾ 8 ಅಥವಾ 9 ಪ್ರತಿಶತಕ್ಕೆ ಏರಿಸುವ ಚರ್ಚೆಗಳು ನಡೆಯುತ್ತಿವೆ. ಆದರೆ ಅಂತಿಮ ನಿರ್ಧಾರವನ್ನು ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಮಂತ್ರಿಗಳನ್ನು ಒಳಗೊಂಡಿರುವ ಜಿಎಸ್ಟಿ ಕೌನ್ಸಿಲ್ ತೆಗೆದುಕೊಳ್ಳುತ್ತದೆ ಎಂದು ಮೂಲಗಳು ಹೇಳಿದೆ. ವರಮಾನ ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದ ಮಂಡಳಿಯು, ವಿನಾಯಿತಿ ಇರುವ ಕೆಲವು ಆಹಾರೇತರ ವಸ್ತುಗಳನ್ನು ಶೇ 3ರ ತೆರಿಗೆ ಸ್ಲ್ಯಾಬ್ಗೆ ತರುವ ಬಗ್ಗೆಯೂ ಪರಿಶೀಲಿಸಬಹುದು ಎಂದು ವರದಿಯಾಗಿದೆ.

ಒಂದು ಲೆಕ್ಕಾಚಾರದ ಪ್ರಕಾರ ಶೇ 5ರ ತೆರಿಗೆ ಸ್ಲ್ಯಾಬ್ನಲ್ಲಿನ ಉತ್ಪನ್ನಗಳಿಗೆ ಹೆಚ್ಚುವರಿಯಾಗಿ ಶೇ 1ರಷ್ಟು ತೆರಿಗೆ ವಿಧಿಸಿದರೆ ವಾರ್ಷಿಕವಾಗಿ ಹೆಚ್ಚುವರಿ 50 ಸಾವಿರ ಕೋಟಿ ರೂಪಾಯಿ ವರಮಾನ ಸಿಗಲಿದೆ. ಈ ತೆರಿಗೆ ಸ್ಲ್ಯಾಬ್ನಲ್ಲಿ ಮುಖ್ಯವಾಗಿ ಆಹಾರ ವಸ್ತುಗಳು ಇವೆ. ಈಗ ಶೇ 5ರಷ್ಟು ತೆರಿಗೆ ಇರುವ ಬಹುತೇಕ ವಸ್ತುಗಳಿಗೆ ಶೇ 8ರಷ್ಟು ತೆರಿಗೆ ವಿಧಿಸಲು ಮಂಡಳಿ ನಿರ್ಧಾರ ಮಾಡಬಹುದು ಎಂದು ಮೂಲಗಳು ಹೇಳಿವೆ.
ಜಿಎಸ್ಟಿ ವ್ಯವಸ್ಥೆಯಿಂದಾಗಿ ರಾಜ್ಯಗಳಿಗೆ ಆಗಬಹುದಾದ ವರಮಾನ ನಷ್ಟಕ್ಕೆ ಪರಿಹಾರ ಕೊಡುವ ಕ್ರಮವು ಜೂನ್ಗೆ ಕೊನೆ ಆಗಲಿದೆ. ಈ ನಿಟ್ಟಿನಲ್ಲಿ, ಜಿಎಸ್ಟಿ ವರಮಾನದ ವಿಚಾರದಲ್ಲಿ ರಾಜ್ಯಗಳು ಕೇಂದ್ರದ ಮೇಲಿನ ಅವಲಂಬನೆ ನಿವಾರಿಸಿಕೊಳ್ಳುವುದು ಮಹತ್ವ ಪಡೆದುಕೊಳ್ಳಲಿದೆ.