For Quick Alerts
ALLOW NOTIFICATIONS  
For Daily Alerts

ಚಿನ್ನದ ಆಭರಣಗಳಿಗೆ ಹಾಲ್‌ಮಾರ್ಕ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

|

ಕೇಂದ್ರ ಸರ್ಕಾರವು ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಿನ್ನಾಭರಣಗಳಿಗೆ 2021ರಿಂದ ಹಾಲ್‌ಮಾರ್ಕ್ ಕಡ್ಡಾಯಗೊಳಿಸಿದೆ. 2021 ಜನವರಿ 15ರಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಹಾಲ್‌ಮಾರ್ಕ್‌ ಕಡ್ಡಾಯವಾಗಲಿದೆ.

ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ಚಿನ್ನಾಭರಣ ಶುದ್ಧತೆ ಬಗ್ಗೆ ತಲೆಕೆಡಿಸಿಕೊಳ್ಳುವ ಗ್ರಾಹಕರಿಗೆ ಇದು ನೆಮ್ಮದಿ ತರುವ ವಿಚಾರವಾಗಿದೆ. ಗ್ರಾಹಕರು ತಾವು ಖರೀದಿಸುವ ಚಿನ್ನಾಭರಣ ಶುದ್ಧತೆಯ ಪ್ರಮಾಣವು ಹಾಲ್‌ಮಾರ್ಕ್‌ನಿಂದ ಖಚಿತವಾಗಲಿದೆ. ಚಿನ್ನಾಭರಣ ಮಾರಾಟಗಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ಭಾರತೀಯ ಮಾನದಂಡ ಅಡಿಯಲ್ಲಿ (ಬಿಐಎಎಸ್) ನೋಂದಾಯಿಸಿಕೊಳ್ಳಬೇಕು. ಹಾಲ್‌ಮಾರ್ಕ್ ಇರುವ ಚಿನ್ನವನ್ನು ಮಾತ್ರ ಮಾರಾಟ ಮಾಡಬೇಕು ಇಲ್ಲದೆ ಹೋದಲ್ಲಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಚಿನ್ನದ ಆಭರಣಗಳಿಗೆ ಹಾಲ್‌ಮಾರ್ಕ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

 

ಈ ಅಧಿಸೂಚನೆಯನ್ನು ಹಂತ ಹಂತವಾಗಿ ಜಾರಿಗೆ ತರಲಿದ್ದು, ಮೆಟ್ರೋ ನಗರಗಳಿಂದ ಪ್ರಾರಂಭಿಸಿ ನಾಲ್ಕು ಹಂತಗಳಲ್ಲಿ ಚಿನ್ನದ ಹಾಲ್‌ಮಾರ್ಕ್ ಅನ್ನು ಜಾರಿಗೆ ತರಲು ಸರ್ಕಾರ ಯೋಜಿಸಿದೆ. ಹಾಲ್‌ಮಾರ್ಕ್ ಅಧಿಸೂಚನೆಯನ್ನು ಉಲ್ಲಂಘಿಸಿದರೆ ಕನಿಷ್ಠ 1 ಲಕ್ಷ ರುಪಾಯಿಗಳಿಂದ ಗರಿಷ್ಠ ಚಿನ್ನದ ಮೌಲ್ಯದ 5 ಪಟ್ಟು ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಬಿಐಎಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

2016ರ ಬಿಐಎಸ್ ಕಾಯ್ದೆ ಪ್ರಕಾರ ಆಭರಣಕಾರರು 14 ಕ್ಯಾರೆಟ್, 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಎಂಬ ಮೂರು ಅಳತೆಗಳ ಅಡಿಯಲ್ಲಿ ಚಿನ್ನವನ್ನು ಗುರುತಿಸಬೇಕಾಗಿದೆ. ಕ್ಯಾರೆಟ್ ಎನ್ನುವುದು ಚಿನ್ನದ ಪ್ರಮಾಣವನ್ನು 24 ಭಾಗಗಳಲ್ಲಿ ಮಿಶ್ರಲೋಹದಲ್ಲಿ ಸೂಚಿಸುವ ಅಳತೆಯಾಗಿದೆ. ಆದ್ದರಿಂದ 18 ಕ್ಯಾರೆಟ್ ಚಿನ್ನವು 18/24 ಭಾಗಗಳ ಚಿನ್ನವಾಗಿದೆ.

ಪ್ರಸ್ತುತ ದೇಶಾದ್ಯಂತ ಕೇವಲ 26,019 ಆಭರಣ ವ್ಯಾಪಾರಿಗಳು ಬಿಎಸ್ಐನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸದ್ಯ ಬಳಕೆಯಲ್ಲಿರುವ ಚಿನ್ನಾಭರಣಗಳಲ್ಲಿ ಶೇಕಡಾ 40ರಷ್ಟು ಹಾಲ್‌ಮಾರ್ಕ್ ಒಳಗೊಂಡಿವೆ.

English summary

Hallmark Must For Gold Jewellery From Next Year

The narendra modi government has decided to make BIS hallmarking mandatory for gold jewellery from january 15,2021
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more