For Quick Alerts
ALLOW NOTIFICATIONS  
For Daily Alerts

ಹರ್ಯಾಣದಲ್ಲಿನ ಉತ್ಪಾದನೆ ಘಟಕ ಮುಚ್ಚಲಿದೆ ಹಾರ್ಲೆ ಡೇವಿಡ್ ಸನ್

By ಅನಿಲ್ ಆಚಾರ್
|

ಕ್ರೂಸರ್ ಬೈಕ್ ಗಳ ದಿಗ್ಗಜ ಸಂಸ್ಥೆ ಹಾರ್ಲೆ ಡೇವಿಡ್ ಸನ್ ಹರ್ಯಾಣದ ಬಾವಲ್ ನಲ್ಲಿ ಇರುವ ಉತ್ಪಾದನಾ ಘಟಕವನ್ನು ಮುಚ್ಚುವ ಯೋಜನೆ ಬಗ್ಗೆ ಗುರುವಾರ ಹೇಳಿದೆ. ಅಷ್ಟೇ ಅಲ್ಲ, ಗುರುಗ್ರಾಮ್ ನಲ್ಲಿ ಇರುವ ಅದರ ಮಾರಾಟ ಕಚೇರಿಯ ಗಾತ್ರವನ್ನು ದೊಡ್ಡ ಪ್ರಮಾಣದಲ್ಲಿ ಇಳಿಸಲಿದೆ.

ಕಂಪೆನಿಯ ಕಾರ್ಯ ನಿರ್ವಹಣೆಯ ಮಾದರಿ ಹಾಗೂ ಮಾರ್ಕೆಟ್ ರಚನೆಯನ್ನು ಮರುಹೊಂದಾಣಿಕೆ ಮಾಡುವ ನಿಟ್ಟಿನಲ್ಲಿ ಈ ಬೆಳವಣಿಗೆ ನಡೆದಿದೆ. ಭಾರತದಲ್ಲಿ ತನ್ನ ವ್ಯವಹಾರದ ಮಾದರಿಯನ್ನು ಬದಲಿಸುತ್ತಿರುವುದಾಗಿ ಹಾರ್ಲೆ ಹೇಳಿದೆ. ಮತ್ತು ಗ್ರಾಹಕರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಪರ್ಯಾಯಗಳನ್ನು ಅಳೆದು ತೂಗುತ್ತಿರುವುದಾಗಿ ಹೇಳಿದೆ.

ಭಾರತದಲ್ಲಿ 65 ಸಾವಿರ ರುಪಾಯಿ ಬೆಲೆ ಕಡಿತ ಮಾಡಿದ ಹಾರ್ಲೆ ಡೇವಿಡ್ ಸನ್

 

"ಹಾರ್ಲೆ ಡೇವಿಡ್ ಸನ್ ಬಾವಲ್ ನಲ್ಲಿ ಇರುವ ಉತ್ಪಾದನೆ ಘಟಕ ಮುಚ್ಚಲು ಮತ್ತು ಗುರುಗ್ರಾಮ್ ದಲ್ಲಿನ ಮಾರಾಟ ಕಚೇರಿಯ ಗಾತ್ರವನ್ನು ದೊಡ್ಡ ಪ್ರಮಾಣದಲ್ಲಿ ಇಳಿಸಲು ಯೋಜನೆ ರೂಪಿಸುತ್ತಿದೆ,"ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. "ಕಂಪೆನಿಯು ಗ್ರಾಹಕರೊಂದಿಗೆ ಸಂವಹನ ನಡೆಸುತ್ತಿದೆ ಮತ್ತು ಭವಿಷ್ಯದ ಸಪೋರ್ಟ್ ಬಗ್ಗೆ ಮಾಹಿತಿ ನೀಡಲಾಗುವುದು. ಹಾರ್ಲೆ ಡೇವಿಡ್ ಸನ್ ಡೀಲರ್ ಜಾಲದ ಮೂಲಕ ಗ್ರಾಹಕರಿಗೆ ಗುತ್ತಿಗೆ ಆಧಾರದಲ್ಲಿ ಸೇವೆ ಮುಂದುವರಿಸಲಿದೆ,"ಎನ್ನಲಾಗಿದೆ.

ಹರ್ಯಾಣದಲ್ಲಿನ ಉತ್ಪಾದನೆ ಘಟಕ ಮುಚ್ಚಲಿದೆ ಹಾರ್ಲೆ ಡೇವಿಡ್ ಸನ್

ಕಂಪೆನಿಯ ಮಾಹಿತಿ ಪ್ರಕಾರ, 'ದ ರೀವೈರ್' ಅಭಿಯಾನದ ಅಡಿಯಲ್ಲಿ ಈ ವರ್ಷದ ಕೊನೆಯ ತನಕ ಇಂಥ ಯೋಜನೆ ಮಾಡಲಿದೆ. 2021- 25ಕ್ಕೆ ಹಾರ್ಲೆ ಡೇವಿಡ್ ಸನ್ ಬ್ರ್ಯಾಂಡ್ ಹಾಗೂ ಉತ್ಪನ್ನಗಳಿಗೆ ಅಂದುಕೊಂಡ ರೀತಿಯಲ್ಲಿ ಹೊಸ ವ್ಯೂಹಾತ್ಮಕ ಯೋಜನೆ ರೂಪಿಸಲಾಗುತ್ತದೆ.

English summary

Harley Davidson Plans To Close Manufacturing Facility In India

Cruise bike giant Harley Davidson plans to close manufacturing facility in Indian and also to reduce size of sales office significantly.
Company Search
COVID-19