For Quick Alerts
ALLOW NOTIFICATIONS  
For Daily Alerts

HCL ಅಧ್ಯಕ್ಷ ಸ್ಥಾನಕ್ಕೆ ಶಿವ ನಡಾರ್ ರಾಜೀನಾಮೆ

|

ಬೆಂಗಳೂರು: ಪ್ರಸ್ತುತ ಎಚ್‌ಸಿಎಲ್ ಕಂಪನಿಯ ಅಧ್ಯಕ್ಷ ಶಿವ ನಡಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಜುಲೈ 17 ರಂದು ಅಂಗೀಕಾರಗೊಂಡಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

 

ತೆರವಾದ ಎಚ್‌ಸಿಎಲ್ ಕಂಪನಿಯ ಅಧ್ಯಕ್ಷ ಸ್ಥಾನವನ್ನು ಶಿವ ನಡಾರ್ ಅವರ ಮಗಳು ರೋಶಿನಿ ನಡಾರ್ ಅವರು ತುಂಬಲಿದ್ದಾರೆ. ಶಿವ ನಡಾರ್ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.

ಜೂನ್ ತ್ರೈಮಾಸಿಕದಲ್ಲಿ ಎಚ್‌ಸಿಎಲ್ ಕಂಪನಿಯು ತನ್ನ ನಿವ್ವಳ ಲಾಭದಲ್ಲಿ ಶೇ 7.3 ರ ಕುಸಿತವನ್ನು ದಾಖಲಿಸಿತ್ತು. ಈ ವೇಳೆ ನಿವ್ವಳ ಲಾಭ 2925 ಕೋಟಿ ರುಪಾಯಿ ಆಗಿದ್ದರೆ, ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 3154 ಕೋಟಿ ರು ಆಗಿತ್ತು.

HCL ಅಧ್ಯಕ್ಷ ಸ್ಥಾನಕ್ಕೆ ಶಿವ ನಡಾರ್ ರಾಜೀನಾಮೆ

ಕಳೆದ ತ್ರೈಮಾಸಿಕದಲ್ಲಿ ಎಚ್‌ಸಿಎಲ್‌ನ ಆದಾಯ ಶೇ 4 ರಷ್ಟು ಕುಸಿತವಾಗಿದೆ. ಶಿವ ನಡಾರ್ ಅವರು ಹುದ್ದೆ ತ್ಯಜೀಸುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ರೋಶಿನಿ ನಡಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ

Read more about: hcl it ಐಟಿ
English summary

Shiv Nadar steps down as HCL Chairman

HCL President Shiv Nadar Resigns His Post
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X