For Quick Alerts
ALLOW NOTIFICATIONS  
For Daily Alerts

HCL Technologies ಈಗ ಭಾರತದ ಟಾಪ್ 10 ಮೌಲ್ಯಯುತ ಕಂಪೆನಿಗಳ ಪಟ್ಟಿಯಲ್ಲಿ

By ಅನಿಲ್ ಆಚಾರ್
|

ಎಚ್ ಸಿಎಲ್ ಟೆಕ್ನಾಲಜೀಸ್ ಷೇರು ಸೆಪ್ಟೆಂಬರ್ 17, 2020ರಂದು (ಗುರುವಾರ) ಬಿಎಸ್ ಇ ಸೂಚ್ಯಂಕದಲ್ಲಿ ದಿನದ ಹಾಗೂ ವಾರ್ಷಿಕ ಗರಿಷ್ಠ ಮಟ್ಟವಾದ 817.45 ರುಪಾಯಿಯನ್ನು ಮುಟ್ಟಿತು. ಆ ಮೂಲಕ ಕಂಪೆನಿಯ ಮಾರುಕಟ್ಟೆ ಬಂಡವಾಳ 2.2 ಲಕ್ಷ ಕೋಟಿಯನ್ನು ಮುಟ್ಟಿ, ಭಾರತದ ಟಾಪ್ 10 ಮೌಲ್ಯಯುತ ಕಂಪೆನಿಗಳಲ್ಲಿ ಎಚ್ ಸಿಎಲ್ ಟೆಕ್ನಾಲಜೀಸ್ ಕೂಡ ಒಂದು ಎನಿಸಿಕೊಂಡಿತು.

 

ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿಸ್ಟಿಂಗ್ 110% ಏರಿಕೆ

ಇದೀಗ ಭಾರತದ ಟಾಪ್ ಟೆನ್ ಮೌಲ್ಯಯುತ ಕಂಪೆನಿಗಳ ಪಟ್ಟಿಯಲ್ಲಿ ಟಿಸಿಎಸ್, ಇನ್ಫೋಸಿಸ್ ಸೇರಿದಂತೆ ಮೂರು ಕಂಪೆನಿಗಳು ಇದ್ದಂತಾಗಿದೆ. ಗೂಗಲ್ ಕ್ಲೌಡ್ ಜತೆಗೆ ಎಚ್ ಸಿಎಲ್ ಟೆಕ್ನಾಲಜೀಸ್ ವ್ಯವಹಾರ ಒಪ್ಪಂದ ವಿಸ್ತರಣೆ ಮಾಡಿದ ನಂತರ ಷೇರಿನ ಬೆಲೆಯಲ್ಲಿ ಭರ್ಜರಿ ಏರಿಕೆ ಆಗಿದೆ.

HCL Technologies ಈಗ ಭಾರತದ ಟಾಪ್ 10 ಮೌಲ್ಯಯುತ ಕಂಪೆನಿ ಪಟ್ಟಿಯಲ್ಲಿ

ಇದರ ಜತೆಗೆ ಸೆಪ್ಟೆಂಬರ್ ತ್ರೈಮಾಸಿಕ ಅಂತ್ಯಕ್ಕೆ ಕಂಪೆನಿಯಿಂದ ಉತ್ತಮ ಫಲಿತಾಂಶ ದೊರೆಯುವ ಮುನ್ಸೂಚನೆ ಕೂಡ ನೀಡಲಾಗಿದೆ. "ಈ ತ್ರೈಮಾಸಿಕದಲ್ಲಿ ಇಲ್ಲಿಯ ತನಕ ಪ್ರಬಲವಾದ ಕಾರ್ಯಕ್ರಮಗಳ ಅನುಷ್ಠಾನ ಮಾಡಿದ್ದೇವೆ. ಈ ತಿಂಗಳು ಸಹ ಯೋಜನೆ ಅನುಷ್ಠಾನ ಮುಂದುವರಿಸುತ್ತೇವೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಎಲ್ಲ ಸೇವೆ, ವಿಭಾಗ ಹಾಗೂ ಭೌಗೋಳಿಕ ಪ್ರದೇಶದಲ್ಲಿ ಕಾನ್ ಸ್ಟಾಂಟ್ ಕರೆನ್ಸಿ (ಸಿಸಿ) ಈ ತ್ರೈಮಾಸಿಕದಲ್ಲಿ ಬೆಳವಣಿಗೆ 3ರಿಂದ 5 ಪರ್ಸೆಂಟ್ ಮೀರುವ ನಿರೀಕ್ಷೆ ಇದೆ" ಎಂದು ಕಂಪೆನಿ ತಿಳಿಸಿದೆ.

English summary

HCL Technologies Now In India's Top 10 Most Valuable Companies List

HCL technologies on September 17, 2020 entered India's top 10 most valuable companies list.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X