For Quick Alerts
ALLOW NOTIFICATIONS  
For Daily Alerts

HDFC ಬ್ಯಾಂಕ್ ಡೆಬಿಟ್, ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ ಭರ್ಜರಿ ಆಫರ್

|

ಎಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಫ್ಲಿಪ್ ಕಾರ್ಟ್ ನಲ್ಲಿ ಆನ್ ಲೈನ್ ವ್ಯವಹಾರ ಮಾಡಿದರೆ 2000 ರುಪಾಯಿ ತನಕ ಉಳಿತಾಯ ಮಾಡಬಹುದು ಎಂದು ಬ್ಯಾಂಕ್ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. ಇಎಂಐ ವ್ಯವಹಾರಗಳಿಗೂ ಈ ಆಫರ್ ಅನ್ವಯ ಆಗುತ್ತದೆ.

 

ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಬಳಸಿ Flipkart.comನಲ್ಲಿ ವ್ಯವಹಾರ ನಡೆಸಬೇಕಾಗುತ್ತದೆ. ಅದಕ್ಕಾಗಿ ಕೆಲವು ನಿಯಮ, ನಿಬಂಧನೆಗಳಿವೆ. ಎಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ಸ್ ಮತ್ತು ಕ್ರೆಡಿಟ್/ಡೆಬಿಟ್ ಇಎಂಐ ವ್ಯವಹಾರಗಳಿಗೆ ತಕ್ಷಣವೇ 10 ಪರ್ಸೆಂಟ್ ರಿಯಾಯಿತಿ ದೊರೆಯುತ್ತದೆ.

ಡೆಬಿಟ್ ಕಾರ್ಡ್ ವ್ಯವಹಾರಕ್ಕೆ ತಕ್ಷಣ 500 ರುಪಾಯಿ ರಿಯಾಯಿತಿ

ಡೆಬಿಟ್ ಕಾರ್ಡ್ ವ್ಯವಹಾರಕ್ಕೆ ತಕ್ಷಣ 500 ರುಪಾಯಿ ರಿಯಾಯಿತಿ

ಎಚ್ ಡಿಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್ ವ್ಯವಹಾರಗಳಿಗೆ 500 ರುಪಾಯಿ ತಕ್ಷಣವೇ ರಿಯಾಯಿತಿ ದೊರೆಯುತ್ತದೆ. ಅಂದ ಹಾಗೆ ಈ ಆಫರ್ ಮೇ 27, 2020ರ ತನಕ ಇರುತ್ತದೆ. ಮುಖ್ಯವಾದ ನಿಬಂಧನೆ ಏನೆಂದರೆ, ಎಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ಸ್ ಮತ್ತು ಕ್ರೆಡಿಟ್/ಡೆಬಿಟ್ ಇಎಂಐಗೆ ಖರೀದಿಸುವ ವಸ್ತುವಿನ ಕನಿಷ್ಠ ಮೌಲ್ಯ 5000 ರುಪಾಯಿ ಇರಬೇಕು. ಆಗ 10 ಪರ್ಸೆಂಟ್ ರಿಯಾಯಿತಿ ದೊರೆಯುತ್ತದೆ. ಗರಿಷ್ಠ 2 ಸಾವಿರ ರುಪಾಯಿ ತನಕ ರಿಯಾಯಿತಿ ಸಿಗುತ್ತದೆ.

ಆಯ್ದ ಉತ್ಪನ್ನಗಳಿಗೆ ಆಫರ್ ಅನ್ವಯ

ಆಯ್ದ ಉತ್ಪನ್ನಗಳಿಗೆ ಆಫರ್ ಅನ್ವಯ

ಅಂದರೆ, ಎಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ 20 ಸಾವಿರ ರುಪಾಯಿಯ ಶಾಪಿಂಗ್ ಮಾಡಿದರೆ, ಅದಕ್ಕೆ ತಕ್ಷಣವೇ 10 ಪರ್ಸೆಂಟ್ ರಿಯಾಯಿತಿ, ಅಂದರೆ 2 ಸಾವಿರ ರುಪಾಯಿ ರಿಯಾಯಿತಿ ಸಿಗುತ್ತದೆ. ಈ ಆಫರ್ ಇರುವುದು ಆಯ್ದ ರೆಫ್ರಿಜರೇಟರ್, ಏರ್ ಕಂಡೀಷನರ್, ಕೂಲರ್, ವಾಟರ್ ಗೀಸರ್, ರೂಮ್ ಹೀಟರ್ ಮತ್ತು ಫ್ಯಾನ್ ಗಳಿಗೆ ಮಾತ್ರ. ಈ ಆಫರ್ ಬಗ್ಗೆ ಉತ್ಪನ್ನಗಳ ಪುಟದಲ್ಲಿ ಮಾಹಿತಿ ಇರುತ್ತದೆ. ಖರೀದಿಗೆ ಮುಂಚೆ ಆಫರ್ ಇದೆಯಾ ಎಂದು ಒಮ್ಮೆ ಪರೀಕ್ಷಿಸಬೇಕು. ಇನ್ನು ಪಿನ್ ಕೋಡ್ ಅಂದರೆ, ಖರೀದಿ ಮಾಡುವ ವ್ಯಕ್ತಿಯ ಸ್ಥಳ ಕೂಡ ಮುಖ್ಯವಾಗುತ್ತದೆ. ಅಲ್ಲಿಗೆ ಫ್ಲಿಪ್ ಕಾರ್ಟ್ ಸೇವೆ ಇರಬೇಕು.

ಕಾರ್ಪೊರೇಟ್ ಅಥವಾ ಕಮರ್ಷಿಯಲ್ ಕಾರ್ಡ್ ಗಳಿಗೆ ಅನ್ವಯಿಸಲ್ಲ
 

ಕಾರ್ಪೊರೇಟ್ ಅಥವಾ ಕಮರ್ಷಿಯಲ್ ಕಾರ್ಡ್ ಗಳಿಗೆ ಅನ್ವಯಿಸಲ್ಲ

ಎಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಮತ್ತು ಇಎಂಐ ವ್ಯವಹಾರಗಳಿಗೆ ಇದು ಅನ್ವಯ ಆಗುತ್ತದೆ. ಆದರೆ ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಪೊರೇಟ್ ಅಥವಾ ಕಮರ್ಷಿಯಲ್ ಕಾರ್ಡ್ ಗಳಿಗೆ ಅನ್ವಯ ಆಗುವುದಿಲ್ಲ.ಎಚ್ ಡಿಎಫ್ ಸಿ ವೆಬ್ ಸೈಟ್ ಪ್ರಕಾರ, ಒಬ್ಬ ಕಾರ್ಡ್ ದಾರರು ಎಷ್ಟು ವ್ಯವಹಾರ ನಡೆಸಬಹುದು ಎಂಬ ಮಾಹಿತಿ ಇಲ್ಲ. ಆದರೆ ಒಬ್ಬ ಗ್ರಾಹಕರಿಗೆ ಗರಿಷ್ಠ 2 ಸಾವಿರ ರುಪಾಯಿ ರಿಯಾಯಿತಿ ಸಿಗುತ್ತದೆ.

English summary

HDFC Bank Debit, Credit Card Instant Discount Offer On Flipkart Online Purchase

Flipkart providing 10% instant discount on online purchase for HDFC debit, credit card holders.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X