For Quick Alerts
ALLOW NOTIFICATIONS  
For Daily Alerts

HDFC ಬ್ಯಾಂಕ್ ಮೊಬೈಲ್ ATM: ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಣ

|

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಎರಡನೇ ಅಲೆ ಜೋರಾಗಿದ್ದು, ಇಂತಹ ಸಂದರ್ಭದಲ್ಲಿ ಹಣ ವಿತ್‌ಡ್ರಾ ಮಾಡಲು ಎಟಿಎಂಗೆ ಹೋಗಲು ಅನೇಕರು ಭಯ ಪಡುತ್ತಾರೆ. ಆದ್ರೆ ನೀವು ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರಾಗಿದ್ದರೆ ಇಲ್ಲಿದೆ ಗುಡ್‌ ನ್ಯೂಸ್. ಕೊರೊನಾ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಎಚ್‌ಡಿಎಫ್‌ಸಿ ಬ್ಯಾಂಕ್ ದೇಶದ ಪ್ರಮುಖ ನಗರಗಳಲ್ಲಿ ಮೊಬೈಲ್ ಎಟಿಎಂ ಸೌಲಭ್ಯವನ್ನು ಪ್ರಾರಂಭಿಸಿದೆ.

 

ಮೊಬೈಲ್ ಎಟಿಎಂ ಎಂದರೇನು? ಇದ್ರಿಂದ ಏನು ಉಪಯೋಗ? ಹೀಗೆ ನಿಮ್ಮಲ್ಲಿ ಪ್ರಶ್ನೆಗಳು ಮೂಡಬಹುದು. ಅಂದರೆ ಹಣವನ್ನು ಹಿಂಪಡೆಯಲು ನೀವು ಎಟಿಎಂಗೆ ಹೋಗಬೇಕಾಗಿಲ್ಲ, ಬದಲಿಗೆ ಎಟಿಎಂ ನಿಮ್ಮ ಬಳಿಗೆ ಬರುತ್ತದೆ.

ಮೊಬೈಲ್ ಎಟಿಎಂ ಸೌಲಭ್ಯ ಗ್ರಾಹಕರಿಗೆ ಲಭ್ಯ

ಮೊಬೈಲ್ ಎಟಿಎಂ ಸೌಲಭ್ಯ ಗ್ರಾಹಕರಿಗೆ ಲಭ್ಯ

ಮೊಬೈಲ್ ಎಟಿಎಂಗಳ ಸೌಲಭ್ಯದೊಂದಿಗೆ, ಸಾಮಾನ್ಯ ಜನರು ಹಣವನ್ನು ವಿತ್‌ಡ್ರಾ ಮಾಡಲು ತಮ್ಮ ಪ್ರದೇಶದಿಂದ ಹೊರಗೆ ಹೋಗಬೇಕಾಗಿಲ್ಲ. ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕೊರೊನಾವೈರಸ್ ಬಿಕ್ಕಟ್ಟಿನ ಮಧ್ಯೆ ನಗದು ಸಮಸ್ಯೆಯನ್ನು ಎದುರಿಸಲು ಗ್ರಾಹಕರಿಗೆ ಸಹಾಯ ಮಾಡಲು ಎಚ್‌ಡಿಎಫ್‌ಸಿ ಬ್ಯಾಂಕ್ ದೇಶಾದ್ಯಂತ ಮೊಬೈಲ್ ಎಟಿಎಂ ಸೌಲಭ್ಯವನ್ನು ಪರಿಚಯಿಸಿದೆ. ದೇಶದ 19 ನಗರಗಳು ಇದರಿಂದ ಪ್ರಯೋಜನ ಪಡೆಯಲಿವೆ.

ಯಾವೆಲ್ಲಾ ನಗರಗಳಲ್ಲಿ ಮೊಬೈಲ್ ಎಟಿಎಂ ಸೌಲಭ್ಯ ಸಿಗಲಿದೆ?

ಯಾವೆಲ್ಲಾ ನಗರಗಳಲ್ಲಿ ಮೊಬೈಲ್ ಎಟಿಎಂ ಸೌಲಭ್ಯ ಸಿಗಲಿದೆ?

ಎಚ್‌ಡಿಎಫ್‌ಸಿ ಬ್ಯಾಂಕ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ತಿಳಿಸಿರುವಂತೆ ಪ್ರಮುಖ ನಗರಗಳಲ್ಲಿ ಎಟಿಎಂ ವ್ಯಾನ್‌ಗಳ ಸೌಲಭ್ಯ ಲಭ್ಯವಾಗಿದೆ. ದೆಹಲಿ, ಮುಂಬೈ, ಪುಣೆ, ಚೆನ್ನೈ, ಅಲಹಾಬಾದ್, ಸೇಲಂ, ಡೆಹ್ರಾಡೂನ್, ಲಕ್ನೋ, ಲುಧಿಯಾನ, ಚಂಡೀಗಢ, ತಿರುವನಂತಪುರ, ಕಟಕ್, ಅಹಮದಾಬಾದ್, ಭುವನೇಶ್ವರ, ಹೊಸೂರು, ತಿರುಚಿ, ಹೈದರಾಬಾದ್, ವಿಜಯವಾಡ ಮತ್ತು ಕೊಯಮತ್ತೂರು ಮುಂತಾದ 19 ನಗರಗಳು ಈ ಸೌಲಭ್ಯವಿದೆ.

ಮೊಬೈಲ್ ಎಟಿಎಂ ಬಳಕೆಯ ಮೂಲಕ ಗ್ರಾಹಕರು 15 ರೀತಿಯ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.

ಕಳೆದ ವರ್ಷದಲ್ಲೂ ಮೊಬೈಲ್ ಎಟಿಎಂ ಸೌಲಭ್ಯ
 

ಕಳೆದ ವರ್ಷದಲ್ಲೂ ಮೊಬೈಲ್ ಎಟಿಎಂ ಸೌಲಭ್ಯ

ಕಳೆದ ವರ್ಷ ಕೊರೊನಾವೈರಸ್ ಪ್ರಕರಣಗಳು ಹೆಚ್ಚು ಪರಿಣಾಮಕಾರಿಯಾಗಿದ್ದ ವೇಳೆ ಮಾರ್ಚ್-ಏಪ್ರಿಲ್‌ನಲ್ಲಿ ಬ್ಯಾಂಕ್ ಇದೇ ರೀತಿಯ ಸೌಲಭ್ಯವನ್ನು ನೀಡಿತ್ತು. ಇದೀಗ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತೆ ಮೊಬೈಲ್ ಎಟಿಎಂ ಸೌಲಭ್ಯ ಪ್ರಾರಂಭಿಸಿದೆ.

ದೇಶಾದ್ಯಂತ ಸುಮಾರು 14 ಸಾವಿರ ಎಟಿಎಂಗಳನ್ನು ಹೊಂದಿರುವ ಎಚ್‌ಡಿಎಫ್‌ಸಿ ಇದೀಗ ಮೊಬೈಲ್ ಎಟಿಎಂ ಮೂಲಕ ಜನರಿಗೆ ಹಣ ಒದಗಿಸುತ್ತಿದೆ. ಬ್ಯಾಂಕ್‌ನ ಈ ವ್ಯಾನ್‌ ಮತ್ತು ಎಟಿಎಂ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ ಮತ್ತು ಅದರಲ್ಲಿ ತೊಡಗಿರುವ ಎಲ್ಲಾ ಉದ್ಯೋಗಿಗಳು ಸಾಮಾಜಿಕ ದೂರ ಮತ್ತು ಸ್ಯಾನಿಟೈಜರ್ ಮತ್ತು ಮಾಸ್ಕ್‌ಗಳನ್ನು ಹಾಕಿರುತ್ತಾರೆ. ಇನ್ನು ಮಾಸ್ಕ್‌ ಧರಿಸಿರುವವರು ಮಾತ್ರ ಎಟಿಎಂನಿಂದ ಹಣ ಪಡೆಯಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ಹೇಳಿದೆ.

ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್ ನಿವ್ವಳ ಲಾಭ 8,434 ಕೋಟಿ ರೂ.

ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್ ನಿವ್ವಳ ಲಾಭ 8,434 ಕೋಟಿ ರೂ.

ಮಾರ್ಚ್‌ 31ಕ್ಕೆ ಕೊನೆಗೊಂಡ 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಬ್ಯಾಂಕ್ ಶೇಕಡಾ 18.2ರಷ್ಟು ಆದಾಯದ ಬೆಳವಣಿಗೆಯನ್ನು ಸಾಧಿಸಿದ್ದು, 8,186.5 ಕೋಟಿ ರೂ. ಲಾಭ ವರದಿ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಲಾಭವು 6,927.69 ಕೋಟಿ ರೂಪಾಯಿನಷ್ಟಿತ್ತು.

2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯ (ಸಾಲದ ವಸೂಲಿ ಬಡ್ಡಿ) ಹಾಗೂ ಖರ್ಚು ಮಾಡಿದ ಬಡ್ಡಿ(ಠೇವಣಿಗೆ ನೀಡಿದ ಬಡ್ಡಿ) ನಡುವಿನ ವ್ಯತ್ಯಾಸ ಶೇಕಡಾ 12.6 ರಷ್ಟು ಏರಿಕೆ ಕಂಡು 17,120.15 ಕೋಟಿ ರೂ.ಗೆ ತಲುಪಿದೆ.

English summary

HDFC Bank Mobile ATM To Help People Transact Amid Lockdowns

Largest private sector lender HDFC Bank on Saturday said it has deployed mobile automated teller machines (ATM) in 19 cities in view of the rising COVID-19 cases and lockdown
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X