HDFC ಬ್ಯಾಂಕ್ ಮತ್ತಷ್ಟು ವಿಸ್ತರಿಸುವ ಮುನ್ನ ಐಟಿ ವ್ಯವಸ್ಥೆಯನ್ನು ಬಲಪಡಿಸಬೇಕಿದೆ: ಆರ್ಬಿಐ
ನವದೆಹಲಿ, ಡಿಸೆಂಬರ್ 05: ಹೆಚ್ಡಿಎಫ್ಸಿ ಬ್ಯಾಂಕ್ನ ಹೊಸ ಡಿಜಿಟಲ್ ಯೋಜನೆಗಳ ಮೇಲೆ ಆರ್ಬಿಐ ತಾತ್ಕಾಲಿಕ ನಿರ್ಬಂಧ ಹೇರಿದ ಬಳಿಕ, ಬ್ಯಾಂಕ್ ತನ್ನ ಜಾಲವನ್ನು ವಿಸ್ತರಿಸುವ ಮುನ್ನ ಐಟಿ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹೇಳಿದ್ದಾರೆ.
ಇತ್ತೀಚೆಗಷ್ಟೇ ಆರ್ಬಿಐ, ಹೆಚ್ಡಿಎಫ್ಸಿ ಬ್ಯಾಂಕ್ನ ಡಿಜಿಟಲ್ 2.0 ಕಾರ್ಯಕ್ರಮದಡಿ ಯಾವುದೇ ಹೊಸ ಸೇವೆಯನ್ನು ಪ್ರಾರಂಭಿಸಬಾರದು ಮತ್ತು ಯಾವುದೇ ಗ್ರಾಹಕರಿಗೆ ಹೊಸ ಕ್ರೆಡಿಟ್ ಕಾರ್ಡ್ ನೀಡಬಾರದು ಎಂದು ನಿಷೇಧ ಹೇರಿತ್ತು. ಪ್ರಾಥಮಿಕ ದತ್ತಾಂಶ ಕೇಂದ್ರದಲ್ಲಿ ವಿದ್ಯುತ್ ವೈಫಲ್ಯದಿಂದಾಗಿ 2020 ರ ನವೆಂಬರ್ 21 ರಂದು ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಪಾವತಿ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಆರ್ಬಿಐ ಹೀಗೆ ನಿರ್ದೇಶಿಸಿದೆ.
ಎಚ್ ಡಿಎಫ್ ಸಿ ಬ್ಯಾಂಕ್ ಹೊಸ ಡಿಜಿಟಲ್ ವ್ಯವಹಾರ, ಕ್ರೆಡಿಟ್ ಕಾರ್ಡ್ ಗೆ ತಡೆ
'' ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಜನರ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವು ಹೆಚ್ಡಿಎಫ್ಸಿ ಬ್ಯಾಂಕ್ ಹೊಂದಿದೆ. ಜೊತೆಗೆ ಸೇವಾ ನಿಲುಗಡೆ ವಿರುದ್ಧ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ'' ಎಂದು ದಾಸ್ ಹೇಳಿದ್ದಾರೆ.
''ಡಿಜಿಟಲ್ ಬ್ಯಾಂಕಿಂಗ್ ಅನ್ನು ಬಳಸುತ್ತಿರುವ ಸಾವಿರಾರು ಮತ್ತು ಲಕ್ಷಾಂತರ ಗ್ರಾಹಕರನ್ನು ಒಟ್ಟಿಗೆ ತೊಂದರೆಗೊಳಗಾಗಲು ನಾವು ಬಿಡುವುದಿಲ್ಲ. ವಿಶೇಷವಾಗಿ ನಾವು ಡಿಜಿಟಲ್ ಬ್ಯಾಂಕ್ಗೆ ಒತ್ತು ನೀಡುತ್ತಿದ್ದೇವೆ. ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು'' ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಗುರುವಾರ ಸ್ಥಗಿತಗೊಂಡ ಬಳಿಕ ಶಕ್ತಿಕಾಂತ ದಾಸ್ ಈ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದು ಹೇಳಿದರು.