For Quick Alerts
ALLOW NOTIFICATIONS  
For Daily Alerts

PMAY: CLSS ಸ್ಕೀಮ್ ನಲ್ಲಿ HDFCಯಿಂದ 47 ಸಾವಿರ ಕೋಟಿ ವಿತರಣೆ

|

ಮೊದಲ ಬಾರಿಗೆ ಮನೆ ಖರೀದಿ ಮಾಡಿದ 2 ಲಕ್ಷ ಮಂದಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನಾ (PMAY) ಅಡಿಯಲ್ಲಿ, ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ನಲ್ಲಿ 47 ಸಾವಿರ ಕೋಟಿ ರುಪಾಯಿ ವಿತರಿಸಲಾಗಿದೆ ಎಂದು ಹೌಸಿಂಗ್ ಫೈನಾನ್ಸ್ ಕಂಪೆನಿ ಎಚ್ ಡಿಎಫ್ ಸಿ ತಿಳಿಸಿದೆ. ಇದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

ಪ್ರಧಾನಮಂತ್ರಿ ಆವಾಸ ಯೋಜನಾ ಬಡ್ಡಿ ಸಬ್ಸಿಡಿ ಬಗ್ಗೆ ನಿಮಗೆಷ್ಟು ಗೊತ್ತು?

CLSS ಸ್ಕೀಮ್ ನಲ್ಲಿ ಮನೆ ಖರೀದಿದಾರರಿಗೆ ಸಾಲ ಒದಗಿಸುತ್ತದೆ. ಅದರಲ್ಲಿ EWS, LIG ಹಾಗೂ MIG ಎಂಬ ಮೂರು ವಿಭಾಗ ಇದೆ. ಕೇಂದ್ರ ಸರ್ಕಾರದ ಸಚಿವಾಲಯ ಹಾಗೂ ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಸಹಯೋಗದೊಂದಿಗೆ "ಎಲ್ಲರಿಗೂ ಕೈಗೆಟುಕುವ ದರದಲ್ಲಿ ಮನೆ" ಸಿಗಬೇಕು ಎಂಬ ಸರ್ಕಾರದ ಉದ್ದೇಶದಿಂದ ಸಾಲ ಒದಗಿಸಲಾಗುತ್ತಿದೆ.

2015ನೇ ಇಸವಿಯಿಂದ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್
 

2015ನೇ ಇಸವಿಯಿಂದ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್

ವಿವಿಧ ಆದಾಯ ವರ್ಗದವರಿಗೆ 2015ನೇ ಇಸವಿಯಿಂದ PMAY ಅಡಿಯಲ್ಲಿ ಸಾಲ ಒದಗಿಸಲಾಗುತ್ತಿದೆ. ಆದರೆ ಈಗ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ರಿಯಲ್ ಎಸ್ಟೇಟ್ ವಲಯದ ಮೇಲೆ ಪರಿಣಾಮ ಆಗಿದೆ. ಆರ್ಥಿಕತೆ ಚೇತರಿಕೆ ಕಾಣುತ್ತಿದ್ದಂತೆ ಹೌಸಿಂಗ್ ಗೆ ಬೇಡಿಕೆ ಕುದುರುವ ನಿರೀಕ್ಷೆ ಇದೆ. 2015ನೇ ಇಸವಿಯ ಜೂನ್ ನಲ್ಲಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS) ಪರಿಚಯಿಸಲಾಯಿತು. ಪ್ರಧಾನ್ ಮಂತ್ರಿ ಆವಾಸ್ ಯೋಜನಾ (PMAY) ಅಡಿಯಲ್ಲಿ ಗೃಹ ಸಾಲ ಖರೀದಿದಾರರಿಗೆ ಇದು ದೊರೆಯುತ್ತದೆ. ಅದಕ್ಕಾಗಿ ಆರ್ಥಿಕ ದುರ್ಬಲ ವರ್ಗ (EWS), ಕಡಿಮೆ ಆದಾಯದ ಗುಂಪು (LIG) ಮೊದಲು ಈ ಸೌಲಭ್ಯ ಪಡೆದವು. 2017ರಲ್ಲಿ ಇದನ್ನು ಮಧ್ಯಮ ಆದಾಯ ವರ್ಗಕ್ಕೂ (MIG) ವಿಸ್ತರಣೆ ಮಾಡಲಾಯಿತು.

EWS, LIG ಹಾಗೂ MIG 1 ಬಡ್ಡಿ ಸಬ್ಸಿಡಿ

EWS, LIG ಹಾಗೂ MIG 1 ಬಡ್ಡಿ ಸಬ್ಸಿಡಿ

ಈ ಯೋಜನೆಯಡಿ, 6 ಲಕ್ಷ ರುಪಾಯಿ ತನಕದ ಸಾಲಕ್ಕೆ ವಾರ್ಷಿಕ 6.5% ಬಡ್ಡಿ ಸಬ್ಸಿಡಿಗೆ EWS, LIG ವಿಭಾಗಕ್ಕೆ ಬರುವವರು (ಕುಟುಂಬದ ವಾರ್ಷಿಕ ವರಮಾನ 6 ಲಕ್ಷ ರುಪಾಯಿ ತನಕ ಇರುವವರು) ಅರ್ಹರು. ಬಡ್ಡಿ ಸಬ್ಸಿಡಿ 4% ಅನ್ನು ಸಾಲದ ಮೊತ್ತ 9 ಲಕ್ಷದ ತನಕ MIG 1 ಅಡಿಯಲ್ಲಿ (ಕುಟುಂಬದ ಆದಾಯ 6,00,001ರಿಂದ 12 ಲಕ್ಷ ರುಪಾಯಿ ಇರುವವರು) ದೊರೆಯುತ್ತದೆ.

ಮರುಪಾವತಿಗೆ ಗರಿಷ್ಠ ಅವಧಿ ಇಪ್ಪತ್ತು ವರ್ಷ

ಮರುಪಾವತಿಗೆ ಗರಿಷ್ಠ ಅವಧಿ ಇಪ್ಪತ್ತು ವರ್ಷ

MIG 2 (12,00,001ರಿಂದ 18 ಲಕ್ಷ ರುಪಾಯಿ ಕುಟುಂಬದ ವಾರ್ಷಿಕ ವರಮಾನ ಇರುವವರು) ವಿಭಾಗದಲ್ಲಿ ಬರುವವರಿಗೆ 12 ಲಕ್ಷ ರುಪಾಯಿ ತನಕದ ಸಾಲಕ್ಕೆ 3% ಬಡ್ಡಿ ಸಬ್ಸಿಡಿ ದೊರೆಯುತ್ತದೆ. ಸಾಲ ಮರುಪಾವತಿಗೆ ಗರಿಷ್ಠ ಅವಧಿ ಇಪ್ಪತ್ತು ವರ್ಷ ಸಿಗುತ್ತದೆ. ಇಷ್ಟು ಸಮಯಕ್ಕೆ ಗ್ರಾಹಕರಿಗೆ 2.30 ಲಕ್ಷದಿಂದ 2.67 ಲಕ್ಷ ರು. ತನಕ ಮುಂಚಿತವಾಗಿಯೇ ಸಬ್ಸಿಡಿ ದೊರೆಯುತ್ತದೆ. MIG ವರ್ಗದಲ್ಲಿ ಈ ಯೋಜನೆಯನ್ನು ಮಾರ್ಚ್ 31, 2021ರ ತನಕ ವಿಸ್ತರಿಸಲಾಗಿದೆ. ಇನ್ನು EWS/LIG ವಿಭಾಗಕ್ಕೆ ಮಾರ್ಚ್ 31, 2022ರ ತನಕ ವಿಸ್ತರಿಸಲಾಗಿದೆ.

English summary

HDFC Disbursed 47000 Crore To 2 Lakh Home Buyers Under CLSS Scheme PMAY

HDFC disbursed Rs 47,000 crore in subsidy to over 2 lakh first-time home buyers under the PMAY Credit Linked Subsidy Scheme (CLSS).
Company Search
COVID-19