For Quick Alerts
ALLOW NOTIFICATIONS  
For Daily Alerts

ಜನವರಿಯಿಂದ ಹೀರೋ ಬೈಕ್, ಸ್ಕೂಟರ್ ದರ ಹೆಚ್ಚಳ

|

ದೇಶದ ಬೃಹತ್ ಮೋಟಾರು ಬೈಕ್ ಮತ್ತು ಸ್ಕೂಟರ್ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ 2020 ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

 

2020ರ ಜನವರಿಯಿಂದ ಮಾರುತಿ ಕಾರುಗಳ ಬೆಲೆಯಲ್ಲಿ ಹೆಚ್ಚಳ!

ಕಾರುಗಳ ತಯಾರಕ ಕಂಪನಿಗಳಂತೆ ಹೀರೋ ಮೋಟೊಕಾರ್ಪ್ ಕೂಡ ಬಿಎಸ್-VI ನಿಯಮಾವಳಿಗೆ ಅನುಗುಣವಾಗಿ ಎಂಜಿನ್‌ಗಳನ್ನು ಮೇಲ್ದರ್ಜೆಗೇರಿಸುವ ಹಿನ್ನಲೆಯಲ್ಲಿ ಬೈಕ್ ಮತ್ತು ಸ್ಕೂಟರ್ ದರ ಹೆಚ್ಚಿಸಲು ಮುಂದಾಗಿದೆ. ಜನವರಿ 1ರಿಂದ ಹೀರೋ ಬೈಕ್, ಸ್ಕೂಟರ್ ಬೆಲೆ 2,000 ರುಪಾಯಿಗಳವರೆಗೂ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

ಜನವರಿಯಿಂದ ಹೀರೋ ಬೈಕ್, ಸ್ಕೂಟರ್ ದರ ಹೆಚ್ಚಳ

ಸದ್ಯ ಹೀರೋ ಕಂಪನಿಯಲ್ಲಿರುವ ಏಕೈಕ ಬಿಎಸ್-VI ದ್ವಿಚಕ್ರ ವಾಹನ ಎಂದರೆ ಸ್ಲೆಂಡರ್ ಐ ಸ್ಮಾರ್ಟ್ ಆಗಿದೆ. ಬಿಎಸ್-IV ಸ್ಪೆಂಡರ್ ಐ ಸ್ಮಾರ್ಟ್ ಹಾಗೂ ಬಿಎಸ್- VI ಸ್ಲೆಂಡರ್ ಐ ಸ್ಪಾರ್ಟ್ ನಡುವಿನ ಬೆಲೆಯ ವ್ಯತ್ಯಾಸ 7,560 ರುಪಾಯಿ. ಹಳೆಯ ಆವೃತ್ತಿಯ ಬೈಕ್ 57,430 (ಎಕ್ಸ್ ಶೋರೂಮ್, ದೆಹಲಿ)ರುಪಾಯಿ ಮತ್ತು ಹೊಸ ಬಿಎಸ್-VI ಬೆಲೆ 64,900 (ಎಕ್ಸ್ ಶೋರೂಮ್) ರುಪಾಯಿ ಇದೆ.

ಹೀರೋ ಮೋಟೊಕಾರ್ಪ್ ಅಷ್ಟೇ ಅಲ್ಲದೆ ಇತರೆ ಎಲ್ಲಾ ಮೋಟಾರು ಬೈಕುಗಳು ಮತ್ತು ಸ್ಕೂಟರ್‌ಗಳ ಬೆಲೆಯು ಸುಮಾರು 2,000 ರುಪಾಯಿಗಳವರೆಗೆ ಹೆಚ್ಚಿಸುವುದಾಗಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿವೆ. ಇತ್ತೀಚೆಗಷ್ಟೇ ಮಾರುತಿ ಕಂಪನಿಯು ತನ್ನ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿತ್ತು. ಟಾಟಾ ಕಂಪನಿಯು ಕೂಡ ಬೆಲೆ ಏರಿಕೆಯ ಯೋಚನೆಯಲ್ಲಿದೆ.

ಮಾರುತಿ ಬಳಿಕ ಟಾಟಾ ಕಾರುಗಳ ಬೆಲೆಯಲ್ಲೂ ಹೆಚ್ಚಳ : 2020 ಜನವರಿಯಿಂದ

ದೇಶದಲ್ಲಿನ ಹಲವಾರು ವಾಹನ ತಯಾರಿಕಾ ಕಂಪನಿಗಳು ಡಿಸೆಂಬರ್ ತಿಂಗಳಿನಲ್ಲಿ ವರ್ಷಾಂತ್ಯದ ಮಾರಾಟವನ್ನು ಉತ್ತೇಜಿಸಲು ಮತ್ತು ಗ್ರಾಹಕರನ್ನು ಆಕರ್ಷಿಸಲು ಜನವರಿಯಿಂದ ವಾಹನ ಬೆಲೆ ಹೆಚ್ಚಳವಾಗಲಿದೆ ಎಂಬ ಪ್ರಕಟಣೆಯನ್ನು ಕಳೆದ ಒಂದು ವಾರದಿಂದ ಹೇಳುತ್ತಾ ಬಂದಿವೆ. ಕಾರುಗಳು ತಯಾರಿಕಾ ಕಂಪನಿಗಳ ಸಾಲಿಗೆ ಇದೀಗ ಮೋಟೊಕಾರ್ಪ್ ಕೂಡ ಸೇರಿದ್ದು ಬೆಲೆ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.

English summary

Hero Bike And Scooter Prices To Increase From January 2020

Herocarp has announced that there will be ex showroom prices of its motocycles and scooters will be increased effecive in 1st january 2020
Story first published: Tuesday, December 10, 2019, 9:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X