For Quick Alerts
ALLOW NOTIFICATIONS  
For Daily Alerts

Boycott China: ಹೀರೋ ಸೈಕಲ್ಸ್ ತೆಗೆದುಕೊಂಡಿತು ಮಹತ್ವದ ನಿರ್ಧಾರ

|

ನವದೆಹಲಿ: ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಭಾಗವಾಗಿ ಭಾರತದ ಪ್ರಮುಖ ಬೈಸಿಕಲ್ ತಯಾರಕ ಕಂಪನಿಯಾದ ಹೀರೋ ಸೈಕಲ್ಸ್ ಚೀನಾದೊಂದಿಗೆ ಮುಂಬರುವ 900 ಕೋಟಿ ರುಪಾಯಿ ಒಪ್ಪಂದವನ್ನು ರದ್ದುಗೊಳಿಸಲು ಮುಂದಾಗಿದೆ.

 

ಹೀರೋ ಅಧ್ಯಕ್ಷ ಪಂಕಜ್ ಮುಂಜಾಲ್ ಅವರ ಪ್ರಕಾರ, ಕಂಪನಿಯು ಚೀನಾದೊಂದಿಗೆ 900 ಕೋಟಿ ರೂ. ವ್ಯವಹಾರ ನಡೆಸಲು ನಿರ್ಧರಿಸಲಾಗಿತ್ತು ಆದರೆ, ಆ ಯೋಜನೆಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಮುಂಬರುವ 3 ತಿಂಗಳಲ್ಲಿ ನಾವು ಚೀನಾದೊಂದಿಗೆ 900 ಕೋಟಿ ರೂಪಾಯಿಗಳ ವ್ಯವಹಾರವನ್ನು ಮಾಡಬೇಕಾಗಿತ್ತು, ಆದರೆ ನಾವು ಆ ಎಲ್ಲಾ ಯೋಜನೆಗಳನ್ನು ರದ್ದುಗೊಳಿಸಿದ್ದೇವೆ. ಇದು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ನಮ್ಮ ಬದ್ಧತೆಯಾಗಿದೆ" ಎಂದು ಮುಂಜಾಲ್ ಹೇಳಿದ್ದಾರೆ.

Boycott China: ಹೀರೋ ಸೈಕಲ್ಸ್ ತೆಗೆದುಕೊಂಡಿತು ಮಹತ್ವದ ನಿರ್ಧಾರ

ಚೀನಾದೊಂದಿಗಿನ ವ್ಯಾಪಾರ ಸಂಬಂಧವನ್ನು ಸ್ಥಗಿತಗೊಳಿಸಿದ ನಂತರ, ಕಂಪನಿಯು ಈಗ ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿದೆ ಮತ್ತು ಜರ್ಮನಿ ಇದರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಲುಧಿಯಾನದ ಧನನ್ಸು ಗ್ರಾಮದಲ್ಲಿ ಸೈಕಲ್ ಘಟಕ ಪೂರ್ಣಗೊಂಡ ನಂತರ ದೇಶವು ಸುಲಭವಾಗಿ ಚೀನಾದೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಹೇಳುವ ಮೂಲಕ ಕಂಪನಿಯು ಭಾರತೀಯ ಉತ್ಪಾದನಾ ಮಾರುಕಟ್ಟೆಯ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಕಟಿಸಿದೆ.

English summary

Hero Cycle Company Withdrawal 900 Crore Rupees Deal From China

Hero Cycle Company Withdrawal 900 Crore Rupees Deal From China
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X