For Quick Alerts
ALLOW NOTIFICATIONS  
For Daily Alerts

ಹೊಸ ಸೂಪರ್ ಸ್ಪ್ಲೆಂಡರ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್ : ಬೆಲೆ ಎಷ್ಟು ಗೊತ್ತಾ?

|

ಬಹುದೊಡ್ಡ ದ್ವಿಚಕ್ರ ವಾಹನ ತಯಾರಕಾ ಕಂಪನಿ ಹೀರೋ ಮೋಟೊಕಾರ್ಪ್ ಗುರುವಾರ ತನ್ನ ಜನಪ್ರಿಯ ಮೋಟಾರ್ ಸೈಕಲ್ ಮಾದರಿಯಾದ ಸೂಪರ್‌ ಸ್ಪ್ಲೆಂಡರ್ ಬಿಎಸ್-VI ಆವೃತ್ತಿಯನ್ನು ಬಿಡುಗಡೆ ಮಾಡಿದೆ.

 

ಸೂಪರ್‌ ಸ್ಪ್ಲೆಂಡರ್ ಬಿಎಸ್-VI ಹೊಸ ಬೈಕ್ 125ಸಿಸಿ ಎಂಜಿನ್‌ ಹೊಂದಿದ್ದು, ಇದರ ಬೆಲೆಯು 67,300 ರುಪಾಯಿ (ಎಕ್ಸ್‌ಶೋರೂಂ, ದೆಹಲಿ) ಯಿಂದ ಪ್ರಾರಂಭವಾಗುತ್ತದೆ.

ಹೊಸ ಸೂಪರ್ ಸ್ಪ್ಲೆಂಡರ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್

ಸೂಪರ್‌ ಸ್ಪ್ಲೆಂಡರ್ ಬಿಎಸ್-VI ಎರಡು ರೂಪಾಂತರದಲ್ಲಿ ಇರುತ್ತದೆ. ಸೆಲ್ಫ್ ಸ್ಟಾರ್ಟ್, ಡ್ರಮ್ ಬ್ರೇಕ್ ವಿತ್ ಅಲಾಯ್ ವೀಲ್ 67,300 ರುಪಾಯಿ ಮತ್ತು ಸೆಲ್ಫ್ ಸ್ಟಾರ್ಟ್, ಡಿಸ್ಕ್ ಬ್ರೇಕ್ ವಿತ್ ಅಲಾಯ್ ವೀಲ್ 70,800 ರುಪಾಯಿ (ಎಕ್ಸ್ ಶೋರೂಮ್, ದೆಹಲಿ) ಬೆಲೆಯಿದೆ ಎಂದು ಹೀರೋ ಮೊಟೊಕಾರ್ಪ್ ಹೇಳಿಕೆಯಲ್ಲಿ ತಿಳಿಸಿದೆ.

ಹೊಸ ಬೈಕ್ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಹೀರೋ ಮೊಟೊಕಾರ್ಪ್ ಮುಖ್ಯಸ್ಥ ಮಾಲೋ ಲೆ ಮಾಸನ್, "ಸೂಪರ್ ಸ್ಪ್ಲೆಂಡರ್ ಭಾರತದ ಅತ್ಯಂತ ಜನಪ್ರಿಯ ಮೋಟರ್ ಸೈಕಲ್‌ಗಳಲ್ಲಿ ಒಂದಾಗಿದೆ ಮತ್ತು ಹೊಸ ಸೂಪರ್ ಸ್ಪ್ಲೆಂಡರ್ ಬಿಎಸ್-VI ನೊಂದಿಗೆ ಈ ಪ್ರವೃತ್ತಿ ಮತ್ತಷ್ಟು ಬಲಗೊಳ್ಳುತ್ತದೆ ಎಂದು ನಮಗೆ ಖಾತ್ರಿಯಿದೆ. " ಎಂದು ಹೇಳಿದ್ದಾರೆ.

ಸೂಪರ್‌ ಸ್ಪ್ಲೆಂಡರ್ ಬಿಎಸ್-VI ಹಿಂದಿಗಿಂತಲೂ ಹೆಚ್ಚು ಸಮರ್ಥವಾಗಿಸಲು ಪರಿಷ್ಕರಿಸಲಾಗಿದೆ ಎಂದು ಹೀರೋ ಮೋಟೊಕಾರ್ಪ್ ತಿಳಿಸಿದೆ.

Read more about: hero bike ಹೀರೋ ಬೈಕ್
English summary

Hero Motocorp Launches New Super Splendor

Hero Motocorp Thursday launched BS-VI compliant version of its popular motorcycle model Super Splendor
Story first published: Thursday, February 27, 2020, 21:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X