For Quick Alerts
ALLOW NOTIFICATIONS  
For Daily Alerts

ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೀರೋ ಮೊಟೊಕಾರ್ಪ್‌ ಎಲೆಕ್ಟ್ರಿಕ್ ಸ್ಕೂಟರ್

|

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೊಟೊಕಾರ್ಪ್ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ತಯಾರಿಸುತ್ತಿದ್ದು ಮುಂಬರುವ ವರ್ಷದಲ್ಲಿ ಬಿಡುಗಡೆ ಮಾಡಬಹುದು.
ಇದು ಹೀರೊ ಮೊಟೊಕಾರ್ಪ್‌ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಕಂಪನಿಯು ಅಧಿಕೃತವಾಗಿ ಪ್ರಕಟಿಸಬೇಕಿದೆ.

 

ಮಾಧ್ಯಮ ವರದಿಯ ಪ್ರಕಾರ, ಗುರಗಾಂವ್ ಮೂಲದ ಹೀರೊ ಮೊಟೊಕಾರ್ಪ್‌ 2022 ರ ಜನವರಿ-ಮಾರ್ಚ್ ಮೊದಲ ತ್ರೈಮಾಸಿಕದಲ್ಲಿ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಪಾದಾರ್ಪಣೆ ಮಾಡಲಿದೆ.

2022ಕ್ಕೆ ಬಿಡುಗಡೆಯಾಗಲಿದೆ ಹೀರೋ ಮೊಟೊಕಾರ್ಪ್‌ ಎಲೆಕ್ಟ್ರಿಕ್ ಸ್ಕೂಟರ್

ಹೀರೋ ಮೊಟೊಕಾರ್ಪ್‌ನ ಸಿಎಫ್‌ಒ ನಿರಂಜನ್ ಗುಪ್ತಾ ಇತ್ತೀಚೆಗೆ ಈ ಸುದ್ದಿಯನ್ನು ದೃಢಪಡಿಸಿದ್ದು, ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಹಣಕಾಸು ವರ್ಷ 2022-23ರಲ್ಲಿ ತರಲಿದೆ ಎಂದು ಹೇಳಿದ್ದಾರೆ.

ಹೀರೋ ಮೊಟೊಕಾರ್ಪ್ ತನ್ನ ಎಲೆಕ್ಟ್ರಿಕ್ ಆವೃತ್ತಿಯ ಡ್ಯುಯೆಟ್ ಮತ್ತು ಮೆಸ್ಟ್ರೋವನ್ನು ಕೆಲವೇ ವರ್ಷಗಳ ಹಿಂದೆ ಪರಿಚಯಿಸಿತು. ಈ ಸ್ಕೂಟರ್‌ಗಳಲ್ಲಿ ಒಂದನ್ನು ಮುಂದಿನ ವರ್ಷ ಅಧಿಕೃತವಾಗಿ ಪರಿಚಯಿಸಬಹುದೆಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಮುಂದಿನ ವರ್ಷ ಕಂಪನಿಯು ಹೊಸ ವಿನ್ಯಾಸ ಮತ್ತು ಹೊಸ ಬ್ರಾಂಡ್ ಅನ್ನು ಸಹ ಪರಿಚಯಿಸಬಹುದು ಎಂದು ನಂಬಲಾಗಿದೆ.

ಇನ್ನು ಹೀರೋ ಮೊಟೊಕಾರ್ಪ್ ಇತ್ತೀಚೆಗೆ ತೈವಾನೀಸ್ ಕಂಪನಿಯಾದ ಗೊಗೊರೊ ಜೊತೆ ಕೈಜೋಡಿಸಿದ್ದು, ಅನೇಕ ದೇಶಗಳಲ್ಲಿ ಸಾವಿರಾರು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿದೆ. ಆದ್ದರಿಂದ ಕಂಪನಿಯು ಮುಂದಿನ ಕೆಲವು ವರ್ಷಗಳಲ್ಲಿ ಬದಲಾಯಿಸಬಹುದಾದ ಬ್ಯಾಟರಿ ಎಲೆಕ್ಟ್ರಿಕ್ ವಾಹನ ಅನ್ನು ಸಹ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಲಾಗಿದೆ.

Read more about: hero bike ಬೈಕ್
English summary

Hero Motocorp To Launch Electric Two Wheeler In 2022

India's Top Two wheeler manufacturer Hero Motocorp will launch First electric two wheeler in 2022
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X