For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ಬಿಟ್‌ಕಾಯಿನ್ ATM ಸ್ಥಾಪಿಸಿದ್ದವರಿಗೆ ರಿಲೀಫ್: ಎಫ್‌ಐಆರ್‌ ರದ್ದು

|

ಬೆಂಗಳೂರು ನಗರದಲ್ಲಿ ಎರಡು ವರ್ಷಗಳ ಹಿಂದೆ ಬಿಟ್‌ಕಾಯಿನ್ ಎಟಿಎಂ ಕಿಯೋಸ್ಕ್‌ ಸ್ಥಾಪಿಸಿದ್ದ ವರ್ಚುವಲ್ ಕರೆನ್ಸಿ ವಿನಿಮಯ ಕಂಪನಿ ಯುನೋ ಕಾಯಿನ್ ಸಂಸ್ಥಾಪಕ ವಿರುದ್ಧ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

 

ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ವಿನಿಮಯ ಸಂಸ್ಥಾಪಕರಾದ ಬಿ.ವಿ. ಹರೀಶ್‌ ಮತ್ತು ಸಾತ್ವಿಕ್ ವಿಶ್ವನಾಥ್‌ ವಿರುದ್ಧ ಪ್ರಕರಣವನ್ನು ರದ್ದುಗೊಳಿಸಿವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಎಫ್‌ಐಆರ್ ಅನ್ನು ರದ್ದುಗೊಳಿಸಿದೆ.

ಬೆಂಗಳೂರಿನಲ್ಲಿ ಬಿಟ್‌ಕಾಯಿನ್ ATM ಸ್ಥಾಪಿಸಿದ್ದವರಿಗೆ ರಿಲೀಫ್

ಭಾರತದಲ್ಲಿ ಬಿಟ್‌ಕಾಯಿನ್‌ ಅನ್ನು ಆರ್‌ಬಿಐ ನಿಷೇಧಿಸಿದೆ. ಈ ಹಿಂದೆ ಸುಪ್ರೀಂಕೋರ್ಟ್ ಬಿಟ್‌ಕಾಯಿನ್ ವಿರುದ್ಧದ ನಿರ್ಬಂಧವನ್ನು ರದ್ದುಪಡಿಸಿದೆ. ಹೀಗಾಗಿ ಎಫ್‌ಐಆರ್‌ ಅನ್ನು ರದ್ದುಪಡಿಸಬಹುದು ಎಂದು ನ್ಯಾಯಾಲಯ ಪೀಠ ಅಭಿಪ್ರಾಯಪಟ್ಟಿದೆ.

ಬಿಟ್‌ಕಾಯಿನ್ ಸಾರ್ವಕಾಲಿಕ ದಾಖಲೆ: 52,000 ಗಡಿ ದಾಟಿದೆ

ಈ ಎಟಿಎಂ ಸ್ಥಾಪಿಸುವ ಸಮಯದಲ್ಲಿ, ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಮಾಡದಂತೆ ಆರ್‌ಬಿಐ ಬ್ಯಾಂಕುಗಳಿಗೆ ನಿರ್ದೇಶನ ನೀಡಿತ್ತು. ಇನ್ನೂ ಇತ್ತೀಚೆಗೆ, ಆರ್‌ಬಿಐ ತನ್ನದೇ ಆದ ಕ್ರಿಪ್ಟೋಕರೆನ್ಸಿಯನ್ನು ತರಲು ತಯಾರಿ ನಡೆಸುತ್ತಿದೆ. ಆದರೆ, 2018 ರಲ್ಲಿ ಯೂನಿಕಾರ್ನ್ ಯುನೋ ಬೆಂಗಳೂರಿನಲ್ಲಿ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಎಟಿಎಂ ಸ್ಥಾಪಿಸಿತು. ಈ ಎಟಿಎಂ ಯಂತ್ರವು ವ್ಯಾಪಾರ ಮತ್ತು ವಿನಿಮಯ ವೇದಿಕೆಯಂತೆ ಕಾರ್ಯನಿರ್ವಹಿಸುತ್ತದೆ.

ಈ ಕ್ರಿಪ್ಟೋಕರೆನ್ಸಿ ಅಥವಾ ಬಿಟ್‌ಕಾಯಿನ್ ಎಟಿಎಂಗಳು ಬ್ಯಾಂಕುಗಳು ಸ್ಥಾಪಿಸಿದ ಎಟಿಎಂಗಳಿಗೆ ಹೋಲುತ್ತವೆ. ಗ್ರಾಹಕರು ಬಿಟ್‌ಕಾಯಿನ್‌ನಂತಹ ಕರೆನ್ಸಿಗೆ ವಹಿವಾಟುಗಳನ್ನು ನಿಭಾಯಿಸಬಹುದು, ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.

English summary

High Court Relief For Duo Who Set Up Bitcoin ATM

The High Court has canceled an FIR filed by the police against the founder of the virtual currency exchange company UnoCoin, which was set up two years ago in Bitcoin ATM Kiosk.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X