For Quick Alerts
ALLOW NOTIFICATIONS  
For Daily Alerts

ದೀಪಾವಳಿ ಸಂದರ್ಭದಲ್ಲಿ ಯಾವ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಅಧಿಕೃತ ರಜಾದಿನದ ಪಟ್ಟಿ ಪ್ರಕಟಿಸಿದೆ. ನವೆಂಬರ್‌ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳು ಒಟ್ಟು 17 ದಿನಗಳವರೆಗೆ ಮುಚ್ಚಲ್ಪಡುತ್ತವೆ. ವಿವಿಧ ರಾಜ್ಯಗಳ ವಿವಿಧ ಹಬ್ಬಗಳು, ವಾರಾಂತ್ಯದ ದಿನಗಳು ಸೇರಿದಂತೆ ವಿವಿಧ ರಜೆಗಳು ಸೇರಿವೆ. ಹೀಗಾಗಿ, ದೀಪಾವಳಿ ಸಂದರ್ಭದಲ್ಲಿ ಯಾವ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಪಟ್ಟಿ ಇಲ್ಲಿದೆ.

 

ರಜಾ ದಿನಗಳಲ್ಲೂ ಆನ್‌ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಮುಂದುವರಿಯುತ್ತವೆ, ಆದರೆ ವಿವಿಧ ರಾಜ್ಯಗಳಲ್ಲಿನ ಬ್ಯಾಂಕಿಂಗ್ ಚಟುವಟಿಕೆಗಳು ಪರಸ್ಪರ ಬದಲಾಗಬಹುದು.

ಹಬ್ಬಗಳ ದಿನದಂದು ರಜೆ: ಸಾರ್ವತ್ರಿಕ ರಜೆ ದಿನಗಳಂದು ಸರ್ಕಾರಿ ಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

ದೀಪಾವಳಿ ಸಂದರ್ಭದಲ್ಲಿ ಯಾವ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ

ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಆರ್‌ಬಿಐ ಕಡ್ಡಾಯ ರಜೆ ದಿನಗಳಲ್ಲೂ ಕೆಲವು ನಿರ್ಬಂಧಿತ ಸೇವೆಗಳು ಲಭ್ಯವಿರಲಿದ್ದು, ಆನ್ ಲೈನ್ ಸೇವೆ ಕೂಡಾ ಹಲವು ಬ್ಯಾಂಕುಗಳು ನೀಡುತ್ತಿವೆ.

ನವೆಂಬರ್ 3- ನರಕ ಚತುರ್ದಶಿ (ಕರ್ನಾಟಕ),

ನವೆಂಬರ್ 4- ದೀಪಾವಳಿ ಅಮಾವಾಸ್ಯೆ, ಲಕ್ಷ್ಮಿಪೂಜೆ(ಕರ್ನಾಟಕ ಹೊರತುಪಡಿಸಿ ಹಲವು ರಾಜ್ಯಗಳಲ್ಲಿ ರಜೆ ಇರಲಿದೆ). ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಭೋಪಾಲ್, ಭುವನೇಶ್ವರ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಕ್, ಗುವಾಹತಿ, ಹೈದರಾಬಾದ್, ಇಂಫಾಲ, ಜೈಪುರ್,ಚಂದೀಗಢ, ಜಮ್ಮು, ಕಾನ್ಪುರ್, ಕೊಚ್ಚಿ, ಕೋಲ್ಕತಾ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನ, ರಾಯ್ ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಹಾಗೂ ತಿರುವನಂತಪುರಂ.

ನವೆಂಬರ್ 5- ಬಲಿ ಪಾಡ್ಯಮಿ, ಗೋವರ್ಧನ ಪೂಜೆ (ಕರ್ನಾಟಕ, ಗುಜರಾತ್,ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ್ ಹಾಗೂ ಸಿಕ್ಕಿಂ) ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಡೆಹ್ರಾಡೂನ್, ಗ್ಯಾಂಗ್ಟಕ್, ಜೈಪುರ್, ಕಾನ್ಪುರ್, ಲಕ್ನೋ, ಮುಂಬೈ ಹಾಗೂ ನಾಗ್ಪುರ.

 

ನವೆಂಬರ್ 6 - ಲಕ್ಷ್ಮಿ ಪೂಜೆ, ಭಾಯಿ ದೂಜ್ (ಸಿಕ್ಕಿಂ, ಮಣಿಪುರ ಹಾಗೂ ಉತ್ತರಪ್ರದೇಶ), ಗ್ಯಾಂಗ್ಟಕ್, ಇಂಫಾಲ, ಕಾನ್ಪುರ್, ಲಕ್ನೋ ಹಾಗೂ ಶಿಮ್ಲಾ

ನವೆಂಬರ್ 7: ಭಾನುವಾರ (ವಾರದ ರಜೆ) ದೇಶದೆಲ್ಲೆಡೆ ರಜೆ ಇರಲಿದೆ.

ಪ್ರತಿ ವರ್ಷ ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

ಗ್ರಾಹಕರೇ ಗಮನಿಸಿ: ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 17 ರಜಾದಿನಗಳು

ಕೊರೊನಾವೈರಸ್ ಸಾಂಕ್ರಾಮಿಕ ನಿರ್ಬಂಧ ಮಾರ್ಗಸೂಚಿ ನಡುವೆಯೂ ಆನ್ ಲೈನ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಎಂದಿನಂತೆ ಸಕ್ರಿಯವಾಗಿರಲಿದೆ ಎಂದು ಆರ್ ಬಿ ಐ ತಿಳಿಸಿದೆ. ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್​ ಕ್ಲೋಸಿಂಗ್.

ಬ್ಯಾಂಕುಗಳಿಗೆ ಭೇಟಿ ಮಾಡಲು ಯೋಜಿಸುವಾಗ, ಈ ಯಾವುದೇ ರಜಾದಿನಗಳು ಯಾವುದೇ ರೀತಿಯಲ್ಲಿ ಏಕರೂಪವಾಗಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ವಾರಾಂತ್ಯಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಿಗೂ ಈ ರಜಾದಿನಗಳು ಅನ್ವಯಿಸುವುದಿಲ್ಲ. ಆರ್‌ಬಿಐ ಕಡ್ಡಾಯ ರಜೆ ದಿನಗಳಲ್ಲೂ ಕೆಲವು ನಿರ್ಬಂಧಿತ ಸೇವೆಗಳು ಲಭ್ಯವಿರಲಿದ್ದು, ಆನ್ ಲೈನ್ ಸೇವೆ ಕೂಡಾ ಹಲವು ಬ್ಯಾಂಕುಗಳು ನೀಡುತ್ತಿವೆ.

English summary

Holiday Alert: Banks to Remain Closed For 4 days in These Cities Deepavali

Due to a series of festivals of Deepavali, Dhanteras, the banks will remain closed in certain cities for 4 days this week starting from Thursday(Nov 4).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X