For Quick Alerts
ALLOW NOTIFICATIONS  
For Daily Alerts

Unlock 2.0 Guidelines: ಏನೇನಿರುತ್ತೆ? ಏನೇನಿರುವುದಿಲ್ಲ?

|

ನವದೆಹಲಿ, ಜೂನ್ 30: ನಾಲ್ಕು ಹಂತದ ಲಾಕ್‌ಡೌನ್ ಮುಗಿದು, ಅನ್ಲಾಕ್ 1.0 ದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿತ್ತು. ಆದರೆ, ಕೊರೊನಾವೈರಸ್ ಸೋಂಕು ಹರಡುವುದು ನಿಲ್ಲುತ್ತಿಲ್ಲವಾದ್ದರಿಂದ ಅನ್ಲಾಕ್ 2.0 ದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಕೆಲವು ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದು, ಉಳಿದಂತೆ ಕೊರೊನಾ ತಡೆಗಾಗಿ ಕೆಲವು ಬಿಗಿ ಕ್ರಮಗಳನ್ನು ಮುಂದುವರೆಸಲಾಗಿದೆ.

ಮಂಗಳವಾರ ಜುಲೈ 1 ರಿಂದ ಈ ಹೊಸ ಅನ್ಲಾಕ್ 2.0 ದ ಮಾರ್ಗಸೂಚಿಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಕೊರೊನಾವೈರಸ್ ಲಾಕ್‌ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜು

 

ಹೊಸ ಮಾರ್ಗಸೂಚಿಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಪ್ರತಿಕ್ರಿಯೆ ಮತ್ತು ಸಂಬಂಧಿತ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ವ್ಯಾಪಕವಾದ ಸಮಾಲೋಚನೆಗಳನ್ನು ಆಧರಿಸಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಶಾಲಾ-ಕಾಲೇಜುಗಳಿಲ್ಲ

ಶಾಲಾ-ಕಾಲೇಜುಗಳಿಲ್ಲ

ಪ್ರಮುಖವಾಗಿ ಅನ್‌ಲಾಕ್‌ 2.0 ದಲ್ಲಿ ದೇಶೀಯ ವಿಮಾನಗಳು ಮತ್ತು ಪ್ರಯಾಣಿಕರ ರೈಲುಗಳ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ. ರಾತ್ರಿ ಕರ್ಫ್ಯೂ ಸಮಯವನ್ನು ರಾತ್ರಿ 9 ರ ಬದಲಾಗಿ 10 ರಿಂದ ಬೆಳಿಗ್ಗೆ 5 ರವರೆಗೆ ಮಾತ್ರ ಇಡಲಾಗಿದೆ. ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ತರಬೇತಿ ಸಂಸ್ಥೆಗಳು ಜುಲೈ 31 ರವರೆಗೆ ಕಡ್ಡಾಯವಾಗಿ ತೆರೆಯುವುದಿಲ್ಲ.

ಅನ್‌ಲಾಕ್ 2.0 ದಲ್ಲಿ ಏನೇನಿರುತ್ತೆ?

ಅನ್‌ಲಾಕ್ 2.0 ದಲ್ಲಿ ಏನೇನಿರುತ್ತೆ?

ಧಾರ್ಮಿಕ ಸ್ಥಳಗಳು

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು

ಶಾಪಿಂಗ್ ಮಾಲ್‌ಗಳು

ಹೆಚ್ಚಿನ ದೇಶೀಯ ವಿಮಾನಗಳು ಮತ್ತು ಪ್ರಯಾಣಿಕರ ರೈಲುಗಳು

ರಾತ್ರಿ ಕರ್ಫ್ಯೂ ಸಮಯವನ್ನು ಮತ್ತಷ್ಟು ಸಡಿಲಿಸಲಾಗುತ್ತಿದೆ

ಕೈಗಾರಿಕಾ ಘಟಕಗಳ ತಡೆರಹಿತ ಕಾರ್ಯಾಚರಣೆ

ಸರಕುಗಳನ್ನು ಲೋಡ್ ಮಾಡುವುದು ಮತ್ತು ಅನ್‌ಲೋಡ್ ಮಾಡುವುದು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತರಬೇತಿ ಸಂಸ್ಥೆಗಳಿಗೆ ಜುಲೈ 15 ರಿಂದ ಅವಕಾಶವಿರುತ್ತದೆ.

ಪ್ರಯಾಣಿಕರ ಮತ್ತು ಸರಕುಗಳ ಅಂತರ-ರಾಜ್ಯ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಅಂತಹ ಓಡಾಟಗಳಿಗೆ ಪರ್ಮಿಟ್ ಅಗತ್ಯವಿಲ್ಲ. (ಇವೆಲ್ಲವೂ ಕಂಟೈನ್‌ಮೆಂಟ್ ಜೋನ್ ಹೊರತುಪಡಿಸಿ).

ಅನ್‌ಲಾಕ್ 2.0 ದಲ್ಲಿ ಏನೇನಿರುವುದಿಲ್ಲ?
 

ಅನ್‌ಲಾಕ್ 2.0 ದಲ್ಲಿ ಏನೇನಿರುವುದಿಲ್ಲ?

ಮೆಟ್ರೋ ರೈಲು ಸೇವೆ

ಸಿನೆಮಾ ಹಾಲ್‌ಗಳು, ಜಿಮ್‌ಗಳು, ಈಜುಕೊಳಗಳು, ಮನರಂಜನಾ ಉದ್ಯಾನಗಳು, ಚಿತ್ರಮಂದಿರಗಳು, ಬಾರ್‌ಗಳು, ಪಾರ್ಟಿ ಹಾಲ್‌ಗಳು

ಸಾಮಾಜಿಕ / ರಾಜಕೀಯ / ಕ್ರೀಡೆ / ಮನರಂಜನೆ / ಶೈಕ್ಷಣಿಕ / ಸಾಂಸ್ಕೃತಿಕ / ಧಾರ್ಮಿಕ ಕಾರ್ಯಗಳು ಮತ್ತು ಇತರ ದೊಡ್ಡ ಸಭೆ, ಸಮಾರಂಭಗಳು

ಶಾಲಾ ಕಾಲೇಜುಗಳು ಮತ್ತು ತರಬೇತಿ ಸಂಸ್ಥೆಗಳು

ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ಇವುಗಳನ್ನು ತೆರೆಯುವ ದಿನಾಂಕಗಳನ್ನು ಪ್ರತ್ಯೇಕವಾಗಿ ನಿರ್ಧರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಗಮನಾರ್ಹವಾದ ಸಡಿಲಿಕೆ ನೀಡಿತು

ಗಮನಾರ್ಹವಾದ ಸಡಿಲಿಕೆ ನೀಡಿತು

ಮೇ 30 ರಂದು ಕೇಂದ್ರ ಸರ್ಕಾರ ದೇಶಾದ್ಯಂತ ನಾಲ್ಕನೇ ಹಂತದ ಲಾಕ್‌ಡೌನ್ ವಿಸ್ತರಿಸಿತು. ಆದರೆ, ಅನ್‌ಲಾಕ್ 1.0 ಘೋಷಣೆ ಮಾಡಿ ಗಮನಾರ್ಹವಾದ ಸಡಿಲಿಕೆ ನೀಡಿತು. ಅನ್ಲಾಕ್ 1.0 ನಲ್ಲಿ ಜೂನ್ 8 ರಿಂದ ಧಾರ್ಮಿಕ ಸ್ಥಳಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಪ್ರವಾಸೋಧ್ಯಮ ಸೇವೆಗಳು ಮತ್ತು ಮಾಲ್‌ಗಳನ್ನು ತೆರೆಯಲು ಅನುಮತಿ ನೀಡಲಾಯಿತು.

English summary

Home Ministry Announces Unlock 2.0 Guidelines: More activities Opens Up

Home Ministry Announces Unlock 2.0 Guidelines: More activities Opens Up. Unlock 2.0 Guidelines:
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more