For Quick Alerts
ALLOW NOTIFICATIONS  
For Daily Alerts

ಕಳೆದ ವಾರ ಚಿನ್ನ, ಬೆಳ್ಳಿ, ಪ್ಲಾಟಿನಂ ರಿಟರ್ನ್ಸ್ ಏರಿಳಿತ ಹೇಗಿತ್ತು?

|

ಕೋವಿಡ್ ಕಾಲದಲ್ಲಿ ಪರ್ಯಾಯ ಹೂಡಿಕೆಗಳ ವ್ಯಾಪ್ತಿ ಮತ್ತು ಆಕರ್ಷಣೆ ಹೆಚ್ಚುತ್ತಿದೆ. ಇಂಥ ಹೂಡಿಕೆಗಳಿಂದ ಬರುವ ಗಳಿಕೆ ಕಳೆದ ವಾರದಲ್ಲಿ ಹೇಗಿತ್ತು ಎಂಬುದನ್ನು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಆದರೆ ಪರ್ಯಾಯ ಹೂಡಿಕೆಗಳ ಅನುಪಾತ ಮತ್ತು ಉದ್ದೇಶವು ತುಂಬಾ ಭಿನ್ನವಾಗಿರುವುದರಿಂದ ಸಾಂಪ್ರದಾಯಿಕ ಹೂಡಿಕೆಗಳಿಂದ ಬರುವ ಆದಾಯದೊಂದಿಗೆ ಇವುಗಳನ್ನು ಹೋಲಿಸುವುದು ಸರಿಯಲ್ಲ.

 

ಭಾರತದಲ್ಲಿ ಕಚ್ಚಾ ತೈಲ ಬೆಲೆ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ (ಸದ್ಯ 69.88 ಡಾಲರ್ ಪ್ರತಿ ಬ್ಯಾರೆಲ್) ಮತ್ತು ಡಾಲರ್-ರುಪಾಯಿ ವಿನಿಮಯ ದರ(1 USD=75.24 ರೂ)ದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಚಿನ್ನದ ಬೆಲೆ ಏರಿಳಿತ:

ಚಿನ್ನದ ಬೆಲೆ ಏರಿಳಿತ:

ಹಲವೆಡೆ ಕೋವಿಡ್ 19 ನಿರ್ಬಂಧ, ಕರ್ಫ್ಯೂ ಸಡಿಲಗೊಂಡಿದೆ. ಜಾಗತಿಕವಾಗಿ ಇಂಧನ ದರ ಏರಿಳಿತ, ಕೋವಿಡ್ 19 ರೂಪಾಂತರ ಉಲ್ಬಣವಾಗುವ ಭೀತಿ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಏರಿಳಿತ ಕಾಣುತ್ತಿದೆ.ಕಳೆದ 30 ದಿನಗಳಲ್ಲಿ ಸ್ಪಾಟ್ ಗೋಲ್ಡ್ ಗರಿಷ್ಠ 1866.69 ಡಾಲರ್ ಹಾಗೂ ಕನಿಷ್ಠ 1776.80 ಡಾಲರ್ ತಲುಪಿತ್ತು. ಇದೇ ಅವಧಿಯಲ್ಲಿ ಬೆಳ್ಳಿ ದರ ಗರಿಷ್ಠ 25.53 ಡಾಲರ್ ಹಾಗೂ ಕನಿಷ್ಠ 23.33 ಡಾಲರ್ ಮುಟ್ಟಿತ್ತು.

ಚಿನ್ನ (995) (ರೂ.)

ಚಿನ್ನ (995) (ರೂ.)

ಕೋವಿಡ್ ಮೇಲಿನ ಹೆಚ್ಚಿದ ಭೀತಿ, ಕೇಂದ್ರೀಯ ಬ್ಯಾಂಕರ್‌ಗಳ ದರ ಹೆಚ್ಚಳದ ನಿರೀಕ್ಷೆಯಿಂದ ಚಿನ್ನದ ಮೇಲಿನ ಹೂಡಿಕೆ, ರಿಟರ್ನ್ಸ್ ತಟಸ್ಥವಾಗಿ, ಚಿನ್ನದ ಬೆಲೆ ಹೆಚ್ಚಿನ ಏರಿಳಿತ ಕಂಡಿಲ್ಲ, ಕಳೆದ ವಾರ ಶೇ 0.18ರಷ್ಟು ಇಳಿಕೆಯಾಗಿದ್ದರೆ, ಒಂದು ವರ್ಷದ ಹಿಂದಿನ ದರಕ್ಕೆ ಹೋಲಿಸಿದರೆ ಶೇ 3.19ರಷ್ಟು ಕುಸಿತವಾಗಿದೆ. 2020ರಲ್ಲಿ 10 ಗ್ರಾಂ ಚಿನ್ನದ ದರ 48, 973 ರು ಇತ್ತು, 2021ರಲ್ಲಿ 47, 410 ರು ನಷ್ಟಿತ್ತು.

ಬೆಳ್ಳಿ
 

ಬೆಳ್ಳಿ

ಬೆಳ್ಳಿ ಬೆಲೆ 4%(3.98%) ರಷ್ಟು ಕುಸಿದಿದೆ ಮತ್ತು ಇತರ ಕೈಗಾರಿಕಾ ಲೋಹಗಳ ಪತನದಲ್ಲಿ ಬೆಳ್ಳಿ ಪಾಲು ಸೇರಿದೆ. ಏಕೆಂದರೆ ಮತ್ತೊಂದು ಕೋವಿಡ್ ಆಲೆ ಭೀತಿ ಎಲ್ಲೆಡೆ ಆವರಿಸಿಕೊಂಡಿದ್ದು, ಲೋಹಗಳ ಬೇಡಿಕೆಯನ್ನು ಕಡಿಮೆ ಮಾಡುತ್ತದೆ. 2020ರಲ್ಲಿ 1 ಕೆ.ಜಿ ಬೆಳ್ಳಿ ದರ 63,206ರು ಇತ್ತು, 2021ರಲ್ಲಿ 60,789 ರು ನಷ್ಟಿತ್ತು.

ಪ್ಲಾಟಿನಂ

ಪ್ಲಾಟಿನಂ

ಪ್ಲಾಟಿನಂನ ಕೈಗಾರಿಕಾ ಬಳಕೆ ಹೆಚ್ಚಿರುವುದರಿಂದ, ಅದು 5% ರಷ್ಟು ಕುಸಿದಿದೆ ಮತ್ತು ಈಗ ಅದರ 52 ವಾರದ ಕನಿಷ್ಠಕ್ಕೆ ಹತ್ತಿರದಲ್ಲಿದೆ. 2020ರಲ್ಲಿ 1 ಟ್ರಾಯ್ ಔನ್ಸ್ ಪ್ಲಾಟಿನಂ ದರ 1,024.79 ಡಾಲರ್ ಇತ್ತು, 2021ರಲ್ಲಿ 1 ಟ್ರಾಯ್ ಔನ್ಸ್ ಪ್ಲಾಟಿನಂ ದರ 946.28 ಡಾಲರ್ ಆಗಿದೆ. ಕಳೆದ ವಾರ ಶೇ 5.24ರಷ್ಟು ಬೆಲೆ ಕುಸಿದಿದೆ.

WTI ಕಚ್ಚಾತೈಲ ($/ಬ್ಯಾರೆಲ್)

WTI ಕಚ್ಚಾತೈಲ ($/ಬ್ಯಾರೆಲ್)

ಕೋವಿಡ್ ಪ್ರೇರಿತ ಬೇಡಿಕೆಯ ಕುಸಿತದ ಜೊತೆಗೆ, ಯುಎಸ್ ಹಾಗೂ ಇನ್ನಿತರ ದೇಶಗಳ ಮೀಸಲು ಕಚ್ಚಾ ತೈಲ ಬಿಡುಗಡೆಯ ಬಗ್ಗೆ ಮಾರುಕಟ್ಟೆಯು ಹೆದರುತ್ತಿದೆ. ಹೀಗಾಗಿ ಕಳೆದ ವಾರ ಶೇ 6.26ರಷ್ಟು ಇಳಿಕೆಯಾಗಿದೆ. ಒಂದು ವರ್ಷಕ್ಕೆ ಹೋಲಿಸಿದರೆ ಶೇ 43.67ರಷ್ಟು ತಗ್ಗಿದೆ. 2020ರ ಡಿಸೆಂಬರ್ 2ರಂದು ಪ್ರತಿ ಬ್ಯಾರೆಲ್ ಬೆಲೆ 45.64 ಡಾಲರ್ ಇತ್ತು. 2021ರಲ್ಲಿ 65.67 ಡಾಲರ್ ಆಗಿದೆ.

ಚಿನ್ನದ ಬೆಲೆ ಏರಿಳಿತಕ್ಕೆ ಮಾಪನ

ಚಿನ್ನದ ಬೆಲೆ ಏರಿಳಿತಕ್ಕೆ ಮಾಪನ

ಜಾಗತಿಕ ರಾಜಕೀಯ ವಿದ್ಯಮಾನ, ಡಾಲರ್ ಮೌಲ್ಯ ಏರಿಕೆ, ಕೊರೊನಾ ಲಸಿಕೆ ಅಭಿಯಾನ, ಕೊರೊನಾ ಹೊಸ ರೂಪಾಂತರ, ಕೊರೊನಾ ಲಾಕ್ ಡೌನ್, ಹವಾಮಾನ ವೈಪರೀತ್ಯ, ಜಾಗತಿಕ ಆರ್ಥಿಕ ಚೇತರಿಕೆ, ಹಲವು ಪ್ರಮುಖ ಬ್ಯಾಂಕುಗಳ ಆರ್ಥಿಕ ನೀತಿ, ಯುರೋಪಿಯನ್ ಯೂನಿಯನ್ ಕೊರೊನಾ ನಿರ್ಬಂಧ, ಚೀನಾ-ಭಾರತ ಗಡಿ ವಿವಾದ, ಕೊರೊನಾ ಲಸಿಕೆ ಅಭಿಯಾನ ಪ್ರಗತಿ ಎಲ್ಲವೂ ಚಿನ್ನದ ಏರಿಳಿತಕ್ಕೆ ಕಾರಣವಾಗಿವೆ ಎಂದು ಕೋಟಕ್ ಸೆಕ್ಯುರಿಟೀಸ್ ಉಪಾಧ್ಯಕ್ಷ ರವೀಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary

How gold, silver, platinum performed for week ending December 2, 2021

How gold, silver, platinum performed for week ending December 2, 2021.Gold prices remained flat.
Story first published: Monday, December 6, 2021, 17:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X