For Quick Alerts
ALLOW NOTIFICATIONS  
For Daily Alerts

ಮೂವರು ವಲಸಿಗ ಕಾರ್ಮಿಕರು, ವಿಮಾನದ ಟಿಕೆಟ್ ಹಾಗೂ 3 ಮೇಕೆ ಮಾರಾಟ

|

ಅದೆಂಥ ದೊಡ್ಡ ವ್ಯವಹಾರವೇ ನಡೆಸುತ್ತಿದ್ದರೂ ಮಾನವೀಯತೆಯನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಅಡ್ಡಗೆರೆ ಎಳೆದು ಹೇಳುವಂಥ ವರದಿ ಇದು. ಅದರಲ್ಲೂ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿನ ಈ ಘಟನೆಯು ಹೃದಯಕ್ಕೆ ಮತ್ತಷ್ಟು ಹತ್ತಿರ ಆಗುತ್ತದೆ. ಅಸಲಿಗೆ ಆಗಿದ್ದೇನೆಂದರೆ, ಮೂವರು ವಲಸಿಗ ಕಾರ್ಮಿಕರು ತಮ್ಮೆಲ್ಲ ಉಳಿತಾಯದ ಹಣ ಹಾಗೂ ಆ ಪೈಕಿ ಒಬ್ಬರು ಮೂರು ಮೇಕೆಗಳನ್ನು ಮಾರಿ ಮುಂಬೈನಿಂದ ಕೋಲ್ಕತ್ತಾಗೆ ವಿಮಾನದ ಟಿಕೆಟ್ ಖರೀದಿಸಿದ್ದರು.

ಆದರೆ, ಅವರ ವಿಮಾನ ರದ್ದಾಗಿ ಹೋಯಿತು. ಆಗ ಅವರ ಆತಂಕ ಅಷ್ಟಿಷ್ಟಲ್ಲ. ಕೊನೆಗೆ ಒಂದು ಮಾನವೀಯ ವರದಿಯಿಂದ ಅಂತೂ ತಮ್ಮ ತವರು ರಾಜ್ಯಕ್ಕೆ ವಾಪಸ್ ತೆರಳುವುದಕ್ಕೆ ಎಲ್ಲ ವ್ಯವಸ್ಥೆ ಆಗಿದೆ. ಈ ಮಧ್ಯೆ ಇಷ್ಟೆಲ್ಲ ಸಂಗತಿ ಗೊತ್ತಾದ ಇಂಡಿಗೋ ಏರ್ ಲೈನ್ ಈ ಮೂವರು ಮುಂಬೈನಿಂದ ವಾಪಸ್ ತಮ್ಮ ತವರು ರಾಜ್ಯಕ್ಕೆ ಮರಳಲು ನೆರವಾಗುತ್ತಿದೆ.

ಟಿಕೆಟ್ ವ್ಯವಸ್ಥೆ ಅಥವಾ ಪೂರ್ತಿ ರೀಫಂಡ್
 

ಟಿಕೆಟ್ ವ್ಯವಸ್ಥೆ ಅಥವಾ ಪೂರ್ತಿ ರೀಫಂಡ್

"ನಾವು ಆ ಪ್ರಯಾಣಿಕರನ್ನು ಕೂಡಲೇ ತಲುಪುತ್ತೇವೆ. ಮುಂದಿನ ವಿಮಾನದಲ್ಲೇ ಅವರು ತವರು ರಾಜ್ಯಕ್ಕೆ ತೆರಳುವುದಕ್ಕೆ ವ್ಯವಸ್ಥೆ ಮಾಡುತ್ತೇವೆ ಅಥವಾ ಪೂರ್ತಿ ಹಣ ರೀಫಂಡ್ ಮಾಡ್ತೀವಿ" ಎಂದು ಏರ್ ಲೈನ್ಸ್ ಹೇಳಿದೆ. ಮಾಧ್ಯಮವೊಂದರಲ್ಲಿ ಬಂದಿದ್ದ ವರದಿ ಆಧರಿಸಿ, ಪ್ರತಿಕ್ರಿಯಿಸಿದೆ. ಮೇ 28ರಂದು ತೆರಳುವುದು ಬೇಡ ಎಂದು ತೀರ್ಮಾನಿಸಿರುವ ಇವರು, ಜೂನ್ 1ರಂದು ಹೋಗಲಿದ್ದಾರೆ. ಕೊರೊನಾ ವೈರಾಣು ಹಬ್ಬುವುದನ್ನು ನಿಯಂತ್ರಿಸುವ ಕಾರಣಕ್ಕೆ ಮಾರ್ಚ್ 24ರಿಂದ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರು ನರೇಂದ್ರ ಮೋದಿ. ಆ ನಂತರ ಪಶ್ಚಿಮ ಬಂಗಾಲದ ಈ ಮೂವರಿಗೂ ಯಾವುದೇ ಆದಾಯ ಇರಲಿಲ್ಲ. ಈ ಮೂವರು ಹೇಗೋ 30,600 ರುಪಾಯಿಯನ್ನು ವಿಮಾನದ ಟಿಕೆಟ್ ಗೆ ಹೊಂದಿಸಿದರು. ಆದರೆ ಅವರ ವಿಮಾನ ರದ್ದಾಗಿದ್ದರಿಂದ ಯಾವುದೇ ರೀಫಂಡ್ ಇಲ್ಲ ಎಂದು ತಿಳಿಸಲಾಯಿತು.

ಕೊನೆ ಕ್ಷಣದಲ್ಲಿ ವಿಮಾನ ರದ್ದು

ಕೊನೆ ಕ್ಷಣದಲ್ಲಿ ವಿಮಾನ ರದ್ದು

ಈ ಮೂವರ ಪೈಕಿ ಒಬ್ಬರ ಕುಟುಂಬದವರು ತಮ್ಮ ಮೂರು ಮೇಕೆಗಳನ್ನು ಮಾರಿ, ವಿಮಾನದ ಟಿಕೆಟ್ ಗೆ ಹಣ ಹೊಂದಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಆದರೆ, ಪಶ್ಚಿಮ ಬಂಗಾಲ ಸರ್ಕಾರ ನಿರ್ಬಂಧ ಹೇರಿದ್ದರಿಂದ ವಿಮಾನ ರದ್ದಾಯಿತು. ಆದರೆ ಈ ಬಗ್ಗೆ ಗೊತ್ತಾದ ಇಂಡಿಗೋ ಜೂನ್ 1ನೇ ತಾರೀಕಿಗೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದೆ ಈ ಮೂವರಿಗೆ ವಿಮಾನದ ಟಿಕೆಟ್ ಬುಕ್ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಸಂವಹನ ಕೊರತೆ ಕಾರಣಕ್ಕೆ ವಿಮಾನಗಳು ರದ್ದಾದವು. ಇನ್ನೇನು ವಿಮಾನ ಹೊರಡಬೇಕು ಅನ್ನೋ ಹೊತ್ತಿಗೆ ಕೆಲವು ರಾಜ್ಯಗಳು ತಡೆದಿದ್ದರಿಂದ, ಕೊನೆ ಕ್ಷಣದಲ್ಲಿ ಪ್ರಯಾಣ ರದ್ದಾಯಿತು.

ಮೂರು ಮೇಕೆ ಮಾರಿ ಟಿಕೆಟ್ ಖರೀದಿ

ಮೂರು ಮೇಕೆ ಮಾರಿ ಟಿಕೆಟ್ ಖರೀದಿ

ಕೊರೊನಾದಿಂದ ಸರ್ಕಾರ ಆದೇಶ ನೀಡಿ, ಟಿಕೆಟ್ ರದ್ದಾದಲ್ಲಿ ಎಲ್ಲ ವಿಮಾನ ಯಾನ ಸಂಸ್ಥೆಗಳೇನೂ ಪ್ರಯಾಣಿಕರಿಗೆ ಟಿಕೆಟ್ ಹಣದ ರೀಫಂಡ್ ಮಾಡುತ್ತಿಲ್ಲ. ಅದರ ಬದಲಿಗೆ ಭವಿಷ್ಯದಲ್ಲಿ ಬೇರೆ ವಿಮಾನ ಪ್ರಯಾಣಕ್ಕೆ ಇದೇ ಹಣವನ್ನು ಬಳಸಿಕೊಳ್ಳುವಂತೆ ತಿಳಿಸುತ್ತಿವೆ. ಮುಂಬೈನಲ್ಲಿದ್ದ ಪಶ್ಚಿಮಬಂಗಾಲದ ವಲಸಿಗ ಕಾರ್ಮಿಕರು ರೈಲು ಟಿಕೆಟ್ ಕೂಡ ಬುಕ್ ಮಾಡಲು ಸಾಧ್ಯವಾಗಿಲ್ಲ. ಆ ಪೈಕಿ ಸೋನಾ ಮುಲ್ಲಾ (46) ಎಂಬಾತ 15 ಸಾವಿರ ರುಪಾಯಿ ದುಡಿಯುತ್ತಾರೆ. ಅದರಲ್ಲಿ 10 ಸಾವಿರ ರುಪಾಯಿ ಮನೆಗೆ ಕಳಿಸುತ್ತಾರೆ. ಮುರ್ಷಿಯಾಬಾದ್ ನಲ್ಲಿ ಇರುವ ಆತನ ಪತ್ನಿ ಮೇಕೆ ಸಾಕುತ್ತಾರೆ. "ಕಳೆದ ವಾರ ಎಲ್ಲ ಮೂರು ಮೇಕೆಗಳನ್ನು 9600 ರುಪಾಯಿಗೆ ಮಾರಿ, 10,200 ರುಪಾಯಿ ವಿಮಾನದ ಟಿಕೆಟ್ ದರ ಪಾವತಿಸಿದೆ" ಎಂದು ಅವರು ಹೇಳಿದ್ದರು.

English summary

How Indigo Airline Helps Migrant Workers To Book Air Ticket Again?

It is a human interest story of 3 migrant workers. Indigo airlines come forward to help them after air ticket cancellation.
Story first published: Wednesday, May 27, 2020, 14:37 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more