For Quick Alerts
ALLOW NOTIFICATIONS  
For Daily Alerts

ವಾರದಲ್ಲಿ PM- CARES ಫಂಡ್ ಗೆ ಬಂದಿದ್ದೆಷ್ಟು? ಹೆಚ್ಚು ಮೊತ್ತ ನೀಡಿದ್ದು ಯಾರು?

|

ಕೊರೊನಾ ವಿರುದ್ಧ ಹೋರಾಟದಲ್ಲಿ ಸರ್ಕಾರದ ಜತೆಗೆ ಕೈ ಜೋಡಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದರು. ಅದಕ್ಕಾಗಿ PM- CARES ಫಂಡ್ ಕೂಡ ಸ್ಥಾಪಿಸಲಾಗಿತ್ತು. ಆ ನಿಧಿಗೆ ಒಂದೇ ವಾರದಲ್ಲಿ 6500 ಕೋಟಿ ರುಪಾಯಿ ಸಂಗ್ರಹವಾಗಿದೆ. ಅದರ ಜತೆಗೆ ವಿವಿಧ ರಾಜ್ಯ ಸರ್ಕಾರಗಳಿಗೂ ದೇಣಿಗೆ ನೀಡಲಾಗಿದೆ. ಹೀಗೆ ಒಂದು ವಾರದಲ್ಲಿ ಮಾತ್ರ ಸಂಗ್ರಹವಾದ ಮೊತ್ತದಲ್ಲಿ ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡಿದವರ ಪಟ್ಟಿ ಇಂತಿದೆ.

 

* ಮುಕೇಶ್ ಅಂಬಾನಿ : ರಿಲಯನ್ಸ್ ಇಂಡಸ್ಟ್ರೀಸ್ ನಿಂದ PM- CARES ಫಂಡ್ ಗೆ 500 ಕೋಟಿ ರುಪಾಯಿ. ಮಹಾರಾಷ್ಟ್ರ- ಗುಜರಾತ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 5 ಕೋಟಿ. ಕಂಪೆನಿಯಿಂದ 100 ಹಾಸಿಗೆಯ ಸ್ಥಾಪನೆ ಆರಂಭ. ಪ್ರತಿ ದಿನ 1 ಲಕ್ಷ ಮಾಸ್ಕ್ ಉತ್ಪಾದನೆ. ಅಗತ್ಯ ಇರುವವರಿಗೆ ಆಹಾರ ಮತ್ತಿತರ ಸೇವೆ.

* ರತನ್ ಟಾಟಾ: 500 ಕೋಟಿ ರುಪಾಯಿಗಳ ದೇಣಿಗೆ ಘೋಷಣೆ. ಜತೆಗೆ ದೇಶದ ಅಗತ್ಯಕ್ಕೆ ಸ್ಪಂದಿಸುವ ಭರವಸೆ. ಟಾಟಾ ಗ್ರೂಪ್ ಹಾಗೂ ಟಾಟಾ ಟ್ರಸ್ಟ್ ಸೇರಿ 1500 ಕೋಟಿ ರುಪಾಯಿ ನೆರವಿನ ಘೋಷಣೆ.

* ಕುಮಾರ ಮಂಗಲಂ ಬಿರ್ಲಾ: ಪ್ರಧಾನಿ ಮಂತ್ರಿಗಳ ನಿಧಿಗೆ ಆದಿತ್ಯ ಬಿರ್ಲಾ ಗ್ರೂಪ್ ನಿಂದ 400 ಕೋಟಿ ದೇಣಿಗೆ. ಮಹಾರಾಷ್ಟ್ರದ ವಿವಿಧೆಡೆ ಆಸ್ಪತ್ರೆಗಳಿಗೆ 100 ಕೋಟಿ ರುಪಾಯಿಯಷ್ಟು ನೆರವು ನೀಡುವ ಭರವಸೆ.

* ರಾಧಾಕೃಷ್ಣ ದಮಾನಿ: ಡಿ ಮಾರ್ಟ್ ನಿಂದ ಪ್ರಧಾನಿ ಪರಿಹಾರ ನಿಧಿಗೆ 100 ಕೋಟಿ ಹಾಗೂ ವಿವಿಧ ರಾಜ್ಯಗಳಿಗೆ ಬ್ರೈಟ್ ಸ್ಟಾರ್ ಇನ್ವೆಸ್ಟ್ ಮೆಂಟ್ಸ್ ಮೂಲಕ 55 ಕೋಟಿ ರುಪಾಯಿ ದೇಣಿಗೆ.

* ಗೌತಮ್ ಅದಾನಿ: ಅದಾನಿ ಫೌಂಡೇಷನ್ ನಿಂದ PM- CARES ಫಂಡ್ ಗೆ 100 ಕೋಟಿ ರುಪಾಯಿ. ಗುಜರಾತ್ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ.

PM- CARES ಫಂಡ್ ಗೆ ಬಂದಿದ್ದೆಷ್ಟು? ಹೆಚ್ಚು ಮೊತ್ತ ನೀಡಿದ್ದು ಯಾರು?

* ಸಜ್ಜನ್ ಜಿಂದಾಲ್: ಜಿಮ್ದಾಲ್ ಕಂಪೆನಿಯಿಂದ PM- CARES ಫಂಡ್ ಗೆ 100 ಕೋಟಿ ರುಪಾಯಿ. ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡುವ ಭರವಸೆ.

* ಬಿಸಿಸಿಐ: PM- CARES ಫಂಡ್ ಗೆ 51 ಕೋಟಿ ರುಪಾಯಿ. ಸರ್ಕಾರಕ್ಕೆ ಎಲ್ಲ ರೀತಿಯಾಗಿ ಬೆಂಬಲ ನೀಡುವುದಾಗಿ ಭರವಸೆ.

* ಉದಯ್ ಕೊಟಕ್: ಕೊಟಕ್ ಮಹೀಂದ್ರಾ ಬ್ಯಾಂಕ್ ಎಂ.ಡಿ.ಯಿಂದ PM- CARES ಫಂಡ್ ಗೆ 25 ಕೋಟಿ ರುಪಾಯಿ.

* ಅಕ್ಷಯ್ ಕುಮಾರ್: PM- CARES ಫಂಡ್ ಗೆ ಅಕ್ಷಯ್ ಕುಮಾರ್ ರಿಂದ 25 ಕೋಟಿ ರುಪಾಯಿ.

 

* ಭೂಷಣ್ ಕುಮಾರ್: T-ಸೀರೀಸ್ ನಿಂದ PM- CARES ಫಂಡ್ ಗೆ 11 ಕೋಟಿ ರುಪಾಯಿ.

English summary

How Much Money Collected To PM CARES Fund Within A Week?

How much money collected in PM CARES fund, who gave highest fund? Here is the details.
Story first published: Tuesday, April 7, 2020, 20:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X