For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್, ಡೀಸೆಲ್ ಮೇಲೆ ನೀವು ಸರ್ಕಾರಕ್ಕೆ ಪಾವತಿಸುವ ತೆರಿಗೆ ಎಷ್ಟು?

|

ಕೇಂದ್ರ ಸರ್ಕಾರವು ಇಂದಿನಿಂದ (ಮೇ 06) ರಿಂದ ಅನ್ವಯವಾಗುವಂತೆ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ. ಪೆಟ್ರೋಲ್‌ ಲೀಟರ್‌ಗೆ 10 ರುಪಾಯಿ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 13 ರುಪಾಯಿ ಹೆಚ್ಚಿಸಿದೆ.

 

ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರವು ಕಡಿಮೆಯಿದ್ದರೂ, ಜನಸಾಮಾನ್ಯರಿಗೆ ಮಾತ್ರ ಅದರ ಸದುಪಯೋಗ ಸಿಗುತ್ತಿಲ್ಲ. ಕಚ್ಚಾ ತೈಲ ಬೆಲೆಯು ಕುಸಿದರೂ ಭಾರತದಲ್ಲಿ ಪೆಟ್ರೋಲ್ ಲೀಟರ್‌ಗೆ 71.26 ರುಪಾಯಿ ಪಾವತಿಸಬೇಕಾಗಿದೆ. ಹಾಗಿದ್ದರೆ ಕಚ್ಚಾ ತೈಲ ದರ ಕಮ್ಮಿ ಆದರೂ ಇಷ್ಟು ದರ ಏಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಜೊತೆಗೆ ನೀವು ತೈಲದ ಮೇಲೆ ಪಾವತಿಸುವ ತೆರಿಗೆ ಎಷ್ಟು ಎಂಬುದನ್ನು ತಿಳಿಯಲು ಈ ಕೆಳಗಿನ ಮಾಹಿತಿ ಓದಿ.

ಪೆಟ್ರೋಲ್, ಡೀಸೆಲ್ ಮೇಲೆ ಯಾವೆಲ್ಲ ತೆರಿಗೆ ಹಾಕಲಾಗುತ್ತೆ?

ಪೆಟ್ರೋಲ್, ಡೀಸೆಲ್ ಮೇಲೆ ಯಾವೆಲ್ಲ ತೆರಿಗೆ ಹಾಕಲಾಗುತ್ತೆ?

ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ಹಲವಾರು ರೀತಿಯ ಸುಂಕವನ್ನು ವಿಧಿಸುತ್ತದೆ. ಅಬಕಾರಿ ಸುಂಕ, ಆಯಾ ರಾಜ್ಯ ಸರ್ಕಾರಗಳ ವ್ಯಾಟ್, ಮಾರಾಟಗಾರರ ಕಮಿಷನ್ , ಸೆಸ್‌ ಹಾಕಲಾಗುತ್ತದೆ. ಜೊತೆಗೆ ಕಚ್ಚಾ ತೈಲದ ದರದ ಕಳೆದ ಹದಿನೈದು ದಿನಗಳ ಸರಾಸರಿ ಬೆಲೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ ಸುಮಾರು 30 ಡಾಲರ್‌ನಷ್ಟಿದೆ

ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ ಸುಮಾರು 30 ಡಾಲರ್‌ನಷ್ಟಿದೆ

ಕಳೆದ ಹಲವು ವಾರಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರವು ಇಳಿಕೆಯಾಗುತ್ತಲೇ ಸಾಗಿದೆ. ಅಷ್ಟೇ ಏಕೆ ಶೂನ್ಯವನ್ನು ತಲುಪಿ, ಮೈನಸ್ ಕೂಡ ದಾಖಲಾಗಿತ್ತು. ಹೀಗಿರುವಾಗ ಸದ್ಯ ಕಚ್ಚಾ ತೈಲ ದರವು ಬ್ಯಾರೆಲ್ ಸುಮಾರು 30 ಡಾಲರ್‌ನಷ್ಟಿದೆ. ಅಂದರೆ ಸದ್ಯ ಇರುವ ಪೆಟ್ರೋಲ್-ಡೀಸೆಲ್ ದರದಲ್ಲಿ ಕಚ್ಚಾ ತೈಲ ದರದ ಪಾಲು ಸುಮಾರು 40 ಪರ್ಸೆಂಟ್‌ನಷ್ಟಿದೆ.

ಪೆಟ್ರೋಲ್ ಮೂಲ ಬೆಲೆ ಎಷ್ಟು? ತೆರಿಗೆ ಎಷ್ಟು?
 

ಪೆಟ್ರೋಲ್ ಮೂಲ ಬೆಲೆ ಎಷ್ಟು? ತೆರಿಗೆ ಎಷ್ಟು?

ಮೂಲ ಬೆಲೆ : 17.96 ರುಪಾಯಿ

ಸರಕು ಸಾಗಣೆ ವೆಚ್ಚ: ಪ್ರತಿ ಲೀಟರ್‌ಗೆ 0.32 ಪೈಸೆ

ವಿತರಕರಿಗೆ ವಿಧಿಸುವ ಬೆಲೆ(ಅಬಕಾರಿ ಸುಂಕ ಮತ್ತು ವ್ಯಾಟ್‌ ಹೊರತುಪಡಿಸಿ) : ಪ್ರತಿ ಲೀಟರ್‌ಗೆ 18.28 ರುಪಾಯಿ

ಅಬಕಾರಿ ಸುಂಕ: 32.98 ರುಪಾಯಿ (ಮೂಲ ಅಬಕಾರಿ ಸುಂಕ 2.98 ರುಪಾಯಿ, ಹೆಚ್ಚುವರಿ ಅಬಕಾರಿ ಸುಂಕ 12 ರುಪಾಯಿ ಮತ್ತು ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ಗಾಗಿ ಹೆಚ್ಚುವರಿ ಅಬಕಾರಿ ಸುಂಕ 18 ರುಪಾಯಿ)

ಸರಾಸರಿ ಡೀಲರ್ ಕಮಿಷನ್: ಪ್ರತಿ ಲೀಟರ್‌ಗೆ 3.56 ರುಪಾಯಿ

ವ್ಯಾಟ್ (ಮಾರಾಟಗಾರರ ವ್ಯಾಟ್ ಸೇರಿದಂತೆ) : 16.44 ರುಪಾಯಿ

ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ಮಾರಾಟದ ಬೆಲೆ : 71.26 ರುಪಾಯಿ

ಡೀಸೆಲ್ ಮೂಲ ಬೆಲೆ ಎಷ್ಟು? ತೆರಿಗೆ ಎಷ್ಟು?

ಡೀಸೆಲ್ ಮೂಲ ಬೆಲೆ ಎಷ್ಟು? ತೆರಿಗೆ ಎಷ್ಟು?

ಮೂಲ ಬೆಲೆ : 18.49 ರುಪಾಯಿ

ಸರಕು ಸಾಗಣೆ ವೆಚ್ಚ: ಪ್ರತಿ ಲೀಟರ್‌ಗೆ 0.29 ಪೈಸೆ

ವಿತರಕರಿಗೆ ವಿಧಿಸುವ ಬೆಲೆ(ಅಬಕಾರಿ ಸುಂಕ ಮತ್ತು ವ್ಯಾಟ್‌ ಹೊರತುಪಡಿಸಿ) : ಪ್ರತಿ ಲೀಟರ್‌ಗೆ 18.78 ರುಪಾಯಿ

ಅಬಕಾರಿ ಸುಂಕ: 31.83 ರುಪಾಯಿ (ಮೂಲ ಅಬಕಾರಿ ಸುಂಕ 4.83 ರುಪಾಯಿ, ಹೆಚ್ಚುವರಿ ಅಬಕಾರಿ ಸುಂಕ 9 ರುಪಾಯಿ ಮತ್ತು ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ಗಾಗಿ ಹೆಚ್ಚುವರಿ ಅಬಕಾರಿ ಸುಂಕ 18 ರುಪಾಯಿ)

ಸರಾಸರಿ ಡೀಲರ್ ಕಮಿಷನ್: ಪ್ರತಿ ಲೀಟರ್‌ಗೆ 2.52 ರುಪಾಯಿ

ವ್ಯಾಟ್ (ಮಾರಾಟಗಾರರ ವ್ಯಾಟ್ ಸೇರಿದಂತೆ) : 16.26 ರುಪಾಯಿ

ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ಮಾರಾಟದ ಬೆಲೆ : 69.39 ರುಪಾಯಿ

ಹೀಗೆ ಕಚ್ಚಾ ತೈಲ ಬೆಲೆಯು ಇಳಿಕೆ ಕಂಡರೂ ಅದರ ಪೂರ್ಣ ಪ್ರಮಾಣದ ಲಾಭ ಪಡೆಯುತ್ತಿರುವ ಸರ್ಕಾರವು ತೈಲದ ಮೇಲೆ ಹೆಚ್ಚುವರಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಆ ಮೂಲಕ ಸಂಗ್ರಹವಾದ ಮೊತ್ತವನ್ನು ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿರುವ ನಷ್ಟ ಸರಿತೂಗಿಸಲು ಬಳಸಲಾಗುತ್ತದೆ. ಅಬಕಾರಿ ಸುಂಕ ಏರಿಕೆ ಮೂಲಕ ಕೇಂದ್ರ ಸರ್ಕಾರವು 1.6 ಲಕ್ಷ ಕೋಟಿ ಹೆಚ್ಚುವರಿ ಆದಾಯವನ್ನು ಗಳಿಸುವ ಗುರಿ ಹೊಂದಿದೆ.

English summary

How Much Tax You Pay On Petrol, Diesel

In this article explained how much tax you pay on petrol and diesel after the excise duty hike
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X