For Quick Alerts
ALLOW NOTIFICATIONS  
For Daily Alerts

ಶ್ರೀಮಂತ ಭಾರತೀಯರ ಹ್ಯುರನ್ ಪಟ್ಟಿ: ಸಾವಿರ ಕೋಟಿಗೂ ಹೆಚ್ಚು ಆಸ್ತಿ ಇರುವ 627 ಮಂದಿ

|

ಐಐಎಫ್ ಎಲ್ ಹ್ಯುರನ್ ಇಂಡಿಯಾದ ಶ್ರೀಮಂತರ ಪಟ್ಟಿ ಬಿಡುಗಡೆ ಆಗಿದೆ. ಅದರಲ್ಲಿ ಟಾಪ್ ಒಂದನೇ ಸ್ಥಾನದಲ್ಲಿ ಇರೋದು ಯಾರು ಎಂಬುದರ ಬಗ್ಗೆ ಯಾವ ಕುತೂಹಲವೂ ಇಲ್ಲ. ಹೌದು, ಅದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್. ಆದರೆ ಆಸಕ್ತಿಕರ ವಿಷಯ ಏನೆಂದರೆ, ಹೀಗೆ ಸತತ ಒಂಬತ್ತನೇ ವರ್ಷ ಆ ಸ್ಥಾನದಲ್ಲಿ ಇದ್ದಾರೆ.

ಮುಕೇಶ್ ಅಂಬಾನಿ ಆಸ್ತಿ ಕೊರೊನಾ ಬಿಕ್ಕಟ್ಟಿನ ಮಧ್ಯೆ ಹೆಚ್ಚಾಗಿದ್ದರ ಗುಟ್ಟೇನು ಗೊತ್ತಾ?

ಭಾರತೀಯರಲ್ಲಿ 1000 ಕೋಟಿ ರುಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಆಸ್ತಿ ಇರುವವರು 627 ಮಂದಿ ಇದ್ದಾರೆ. ಆಗಸ್ಟ್ 31, 2020ರ ಹೊತ್ತಿಗೆ ಅವರ ಆಸ್ತಿ ಮೌಲ್ಯ ಹೆಚ್ಚು ಕೂಡ ಆಗಿದೆ. ಒಟ್ಟು 828 ಭಾರತೀಯರು ಈ ಪಟ್ಟಿಯಲ್ಲಿ ಇದ್ದಾರೆ. ಮುಕೇಶ್ ಅಂಬಾನಿ ಬಳಿ 6.58 ಲಕ್ಷ ಕೋಟಿ ರುಪಾಯಿ ಆಸ್ತಿ ಇದ್ದು, ಕಳೆದ ಹನ್ನೆರಡು ತಿಂಗಳಲ್ಲಿ 73% ಆಸ್ತಿ ಪ್ರಮಾಣ ಜಾಸ್ತಿ ಆಗಿದೆ. ಆ ಮೂಲಕ ಏಷ್ಯಾಗೆ ನಂಬರ್ ಒನ್ ಹಾಗೂ ವಿಶ್ವದ ನಾಲ್ಕನೇ ಅತ್ಯಂತ ಶ್ರೀಮಂತರಾಗಿದ್ದಾರೆ ಮುಕೇಶ್.

ಪಟ್ಟಿಯಲ್ಲಿ ಒಟ್ಟು ಆಸ್ತಿ ಏರಿಕೆಯಲ್ಲಿ ಮುಕೇಶ್ ಪಾಲು ಹೆಚ್ಚು
 

ಪಟ್ಟಿಯಲ್ಲಿ ಒಟ್ಟು ಆಸ್ತಿ ಏರಿಕೆಯಲ್ಲಿ ಮುಕೇಶ್ ಪಾಲು ಹೆಚ್ಚು

ಹ್ಯುರನ್ ಪಟ್ಟಿಯಲ್ಲಿ ಒಟ್ಟಾರೆಯಾಗಿ ಜಾಸ್ತಿ ಆಗಿರುವ ಆಸ್ತಿ ಪ್ರಮಾಣದ ಪೈಕಿ ಮುಕೇಶ್ ಅಂಬಾನಿ ಅವರ ಪಾಲೇ ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚಿದೆ. ಮುಕೇಶ್ ಅಂಬಾನಿ ನಡೆಸುತ್ತಿರುವ ಉದ್ಯಮವು ತೈಲದಿಂದ ಟೆಲಿಕಾಂ ಹಾಗೂ ರೀಟೇಲ್ ತನಕ ಇದೆ. ಇನ್ನು ಹೆಚ್ಚಿನ ಸಂಪತ್ತು ಸೃಷ್ಟಿ ಮಾಡಿರುವುದು ಫಾರ್ಮಾ ವಲಯ. ಏಕೆಂದರೆ, ಹೆಲ್ತ್ ಕೇರ್ ಮೇಲೆ ಖರ್ಚಿನ ಪ್ರಮಾಣ ಹೆಚ್ಚಾಗಿದೆ. ಕೊರೊನಾ ಕಾರಣಕ್ಕೆ ವೈಯಕ್ತಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಅದಾನಿ, ದಮಾನಿ, ಪ್ರೇಮ್ ಜೀ ಮತ್ತಿತರರು

ಅದಾನಿ, ದಮಾನಿ, ಪ್ರೇಮ್ ಜೀ ಮತ್ತಿತರರು

ಲಂಡನ್ ಮೂಲದ ಹಿಂದೂಜಾ ಸೋದರರ ಜಂಟಿ ಆಸ್ತಿ ಮೌಲ್ಯ 1.44 ಲಕ್ಷ ಕೋಟಿ ಇದ್ದು, ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆ ನಂತರದಲ್ಲಿ ಎಚ್ ಸಿಎಲ್ ಸ್ಥಾಪಕ ಶಿವ ನಾಡಾರ್ ಇದ್ದಾರೆ. ಇನ್ನು ಟಾಪ್ ಟೆನ್ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಗೌತಮ್ ಅದಾನಿ ಮತ್ತು ಕುಟುಂಬ, ಅಜೀಂ ಪ್ರೇಮ್ ಜೀ, ರಾಧಾಕಿಶನ್ ದಮಾನಿ ಇದ್ದಾರೆ.

ಭಾರತದ ಆರ್ಥಿಕತೆಯ ಅಳತೆಗೋಲು

ಭಾರತದ ಆರ್ಥಿಕತೆಯ ಅಳತೆಗೋಲು

"ಐಐಎಫ್ ಎಲ್ ವೆಲ್ತ್ ಹ್ಯುರನ್ ಇಂಡಿಯಾ ಶ್ರೀಮಂತರ ಪಟ್ಟಿ ಎಂಬುದು ಭಾರತೀಯ ಆರ್ಥಿಕತೆಯ ಅಳತೆಗೋಲು. ಯಾವ ವಲಯ ಬೆಳವಣಿಗೆ ಕಂಡಿದೆ ಎಂದು ಅರ್ಥ ಮಾಡಿಕೊಳ್ಳಲು ಸಹಾಯ ಆಗುತ್ತದೆ. ಅದೇ ವೇಳೆ ಯಾವುದರಲ್ಲಿ ಆವಿಷ್ಕಾರಗಳು ಆಗಿವೆ ಹಾಗೂ ಇಳಿಕೆಯಲ್ಲಿವೆ ಅಂತಲೂ ಗೊತ್ತಾಗುತ್ತದೆ. ಈ ಉದ್ಯಮಿಗಳ ಕಥೆಯು ಭಾರತದ ಆಧುನಿಕ ವ್ಯವಹಾರದ ಕಥೆಗಳನ್ನು ಹೇಳುತ್ತವೆ," ಎಂದು ಹ್ಯುರನ್ ಇಂಡಿಯಾದ ಮುಖ್ಯ ಸಂಶೋಧಕ ಹಾಗೂ ಎಂ.ಡಿ. ಅನಸ್ ರೆಹಮಾನ್ ಜುನೈದ್ ಅಭಿಪ್ರಾಯಪಟ್ಟಿದ್ದಾರೆ.

English summary

Hurun Rich List: Reliance Industry's Mukesh Ambani Top Consecutive 9th Year With 6.48 Lakh Crore Wealth

Hurun rich list of Indian's announced. Reliance Industry's Mukesh Ambani top on the list consecutive 9th year.
Company Search
COVID-19