For Quick Alerts
ALLOW NOTIFICATIONS  
For Daily Alerts

"ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲಿನ ನಗದು ಸಾಲಕ್ಕೆ ಬಡ್ಡಿ ಇಲ್ಲ"

|

ಇದೇ ಮೊದಲ ಬಾರಿಗೆ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ನಿಂದ ವಿಶಿಷ್ಟ ಪ್ರಯತ್ನವೊಂದು ಮಾಡಲಾಗುತ್ತಿದೆ. 48 ದಿನಗಳ ಅವಧಿಗೆ ಬಡ್ಡಿರಹಿತವಾಗಿ ನಗದು ಸಾಲವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಮತ್ತು ಈ ಸಾಲಕ್ಕಾಗಿ ಆಕರ್ಷಕವಾದ ಬಡ್ಡಿ ದರವನ್ನು ಸಹ ನಿಗದಿ ಮಾಡಲಾಗಿದೆ. ಈ ಸೇವೆಗೆ ಕಳೆದ ಶುಕ್ರವಾರ ಚಾಲನೆ ನೀಡಲಾಗಿದೆ.

 

ಕ್ರೆಡಿಟ್ ಕಾರ್ಡ್ ಬಳಸುವವರು ಈ 5 ದುಬಾರಿ ತಪ್ಪುಗಳನ್ನು ಮಾಡಬೇಡಿ

ಇದು ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಯೋಜನೆ. ಸದ್ಯಕ್ಕೆ ಕ್ರೆಡಿಟ್ ಕಾರ್ಡ್ ಮೇಲೆ ಏನಾದರೂ ನಗದು ಸಾಲವನ್ನು ಪಡೆದರೆ ಬಡ್ಡಿ ದರ ತುಂಬ ಜಾಸ್ತಿ ಆಗುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ ನಗದು ವಿಥ್ ಡ್ರಾ ಮಾಡಿದಲ್ಲಿ ಬ್ಯಾಂಕ್ ಗಳು ಪ್ರತಿ ವಹಿವಾಟಿಗೆ 250ರಿಂದ 450 ರುಪಾಯಿ ಶುಲ್ಕ ವಿಧಿಸುತ್ತವೆ. ಇನ್ನು ನಗದು ಮರುಪಾವತಿ ಮಾಡುವ ತನಕ ತಿಂಗಳಿಗೆ 2.5%ನಿಂದ 3.5% ಬಡ್ಡಿ ಹಾಕುತ್ತವೆ.

ಈಗಾಗಲೇ ಇರುವ ಗ್ರಾಹಕರಿಗೆ ಮಾತ್ರ ಅನ್ವಯ

ಈಗಾಗಲೇ ಇರುವ ಗ್ರಾಹಕರಿಗೆ ಮಾತ್ರ ಅನ್ವಯ

ನಗದು ಹೊರತಾದ ವಹಿವಾಟಿಗೂ ಬಡ್ಡಿ ಬೀಳುತ್ತದೆ. ಆದರೆ ಆ ವಹಿವಾಟಿಗೆ ನಿರ್ದಿಷ್ಟ ಅವಧಿ ತನಕ ಬಡ್ಡಿ ಹಾಕಲ್ಲ. ಐಡಿಎಫ್ ಸಿ  ಫಸ್ಟ್ ಬ್ಯಾಂಕ್ ನಿಂದ ಈ ಹೊಸ ಬಡ್ಡಿರಹಿತ ನಗದು ವಿಥ್ ಡ್ರಾ ಅನುಕೂಲವನ್ನು ಈಗಾಗಲೇ ಇರುವ ಗ್ರಾಹಕರಿಗೆ ಮಾತ್ರ ನೀಡಲಾಗುತ್ತಿದೆ. ಅದು ಕೂಡ ಬ್ಯಾಂಕ್ ನ ಆಹ್ವಾನದ ಮೇರೆಗೆ ಮಾತ್ರ. ಮಾರ್ಚ್ ನಂತರ ಇತರ ಗ್ರಾಹಕರಿಗೂ ವಿಸ್ತರಣೆ ಮಾಡಲಾಗುತ್ತದೆ.

ಒಂದು ವಹಿವಾಟಿಗೆ 250 ರುಪಾಯಿ ಶುಲ್ಕ

ಒಂದು ವಹಿವಾಟಿಗೆ 250 ರುಪಾಯಿ ಶುಲ್ಕ

ಕ್ರೆಡಿಟ್ ಕಾರ್ಡ್ ಮೂಲಕ ನಗದು ವಿಥ್ ಡ್ರಾ ಮಾಡಿದಾಗ ಎಷ್ಟು ಮೊತ್ತ ಎಂಬ ಮಿತಿಯನ್ನೇನೂ ಗಮನಿಸದೆ ಒಂದು ವಹಿವಾಟಿಗೆ 250 ರುಪಾಯಿ ಶುಲ್ಕ ಹಾಕುವುದಕ್ಕೆ ಐಡಿಎಫ್ ಸಿ ಬ್ಯಾಂಕ್ ಬಯಸಿದೆ. ಇದು ಪ್ರಯೋಗ ಮಾತ್ರ. ಹೇಗೆ ಇದು ಕೆಲಸ ಮಾಡುತ್ತದೆ ಎಂಬುದನ್ನು ನೋಡಬೇಕಿದೆ ಎಂದು ಕೂಡ ಹೇಳಲಾಗಿದೆ.

9ರಿಂದ 36% ತನಕ ಬಡ್ಡಿ ದರ
 

9ರಿಂದ 36% ತನಕ ಬಡ್ಡಿ ದರ

ಇನ್ನು ಬಡ್ಡಿ ದರದ ವಿಚಾರಕ್ಕೆ ಬಂದಲ್ಲಿ ಸದ್ಯಕ್ಕೆ ನಿಶ್ಚಿತವಾದ 36- 40% ಇದೆ. ಆದರೆ ಹೊಸ ಪ್ರಯೋಗದಲ್ಲಿ ಬಡ್ಡಿ ದರವು 9ರಿಂದ 36% ಇರುತ್ತದೆ. ಗ್ರಾಹಕರ ಸಾಲ ತೀರಿಸುವ ಸ್ವಭಾವ ಹೇಗಿದೆ ಎಂಬುದನ್ನೇ ಮಾನದಂಡವನ್ನಾಗಿ ಇಟ್ಟುಕೊಂಡು ಬಡ್ಡಿ ದರವನ್ನು ನಿರ್ಧರಿಸಲಾಗುತ್ತದೆ.

English summary

IDFC Bank Offering Interest Free Cash On Credit Cards To Existing Customers On Invitation

This is the first in industry, IDFC First Bank offering interest free cash on credit card to customers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X