For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್ ನಿಂದ ಪೇಟಿಎಂಗೆ ರು. 10,000ಕ್ಕಿಂತ ಹೆಚ್ಚು ಟ್ರಾನ್ಸ್ ಫರ್ ಆದರೆ ಶುಲ್ಕ

|

ಭಾರತೀಯ ಇ- ಕಾಮರ್ಸ್ ಪಾವತಿ ವ್ಯವಸ್ಥೆಯ ಪೇಟಿಎಂಗೆ ಒಂದು ತಿಂಗಳಲ್ಲಿ ನೀವೇನಾದರೂ ಕ್ರೆಡಿಟ್ ಕಾರ್ಡ್ ಬಳಸಿ 10,000 ರುಪಾಯಿಗಿಂತ ಹೆಚ್ಚು ವರ್ಗಾವಣೆ ಮಾಡಿಕೊಂಡರೆ 1.75% ಶುಲ್ಕ, ಜತೆಗೆ ಜಿಎಸ್ ಟಿ ವಿಧಿಸಲಾಗುತ್ತದೆ ಎಂದು ಕಂಪೆನಿಯಿಂದ ತಿಳಿಸಲಾಗಿದೆ. ಪೇಟಿಎಂ ಬಳಕೆದಾರರು 10,000 ರುಪಾಯಿ ತನಕದ ಮೊತ್ತಕ್ಕೆ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ.

ಈ ಶುಲ್ಕ ಹಾಗೂ ಜಿಎಸ್ ಟಿ 2020ರ ಆರಂಭದಿಂದ ಜಾರಿಗೆ ಬರಬಹುದು. " 1.75% ಶುಲ್ಕ್, ಜತೆಗೆ ಜಿಎಸ್ ಟಿ ಹಾಕುವುದು 10,000 ಮಿತಿಯನ್ನು ತಲುಪಿದರೆ ಮಾತ್ರ" ಎಂದು ಪ್ರಶ್ನೆಯೊಂದಕ್ಕೆ ಪೇಟಿಎಂನಿಂದ ಟ್ವಿಟ್ಟರ್ ನಲ್ಲಿ ಉತ್ತರ ನೀಡಲಾಗಿದೆ. ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿ, ಶುಲ್ಕ ಹಾಗೂ ಜಿಎಸ್ ಟಿ ಮೊತ್ತವನ್ನು ಉಳಿಸಬಹುದು ಎನ್ನಲಾಗಿದೆ.

ಕ್ರೆಡಿಟ್ ಕಾರ್ಡ್ ನಿಂದ ಪೇಟಿಎಂಗೆ ಹಣ ಹಾಕುವವರಿಗೆ ಮುಖ್ಯ ಸುದ್ದಿ

 

ಒಂದೇ ಸಲಕ್ಕೆ ಹತ್ತು ಸಾವಿರ ರುಪಾಯಿಯನ್ನು ಕ್ರೆಡಿಟ್ ಕಾರ್ಡ್ ನಿಂದ ವರ್ಗಾವಣೆ ಮಾಡಿದಲ್ಲಿ 1.75% ಶುಲ್ಕ್, ಜತೆಗೆ ಜಿಎಸ್ ಟಿ ತಗುಲುತ್ತದೆ. ಒಂದು ವೇಳೆ ಇಡೀ ತಿಂಗಳಲ್ಲಿ ಹತ್ತು ಸಾವಿರ ರುಪಾಯಿಯೊಳಗಿನ ಮೊತ್ತವಷ್ಟೇ ವರ್ಗಾವಣೆ ಮಾಡಿದರೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ.

English summary

If Money Transfer From Credit Card To Paytm; Here Is An Important Notice

There is a limit on money transfer from credit card to Paytm. Here is the complete details.
Story first published: Monday, December 30, 2019, 15:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X