For Quick Alerts
ALLOW NOTIFICATIONS  
For Daily Alerts

ಐಐಟಿ ಉದ್ಯೋಗ ಅಭಿಯಾನ: 1 ಕೋಟಿಗೂ ಅಧಿಕ ಪ್ಯಾಕೇಜ್‌, 2.15 ಕೋಟಿ ರೂ ಟಾಪ್ ಆಫರ್‌

|

ವಿವಿಧ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗಳಲ್ಲಿ ಪ್ಲೇಸ್‌ಮೆಂಟ್ ಡ್ರೈವ್‌ಗಳು (ಉದ್ಯೋಗ ಅಭಿಯಾನ) ಉನ್ನತ ಮಟ್ಟದಲ್ಲಿ ಪ್ರಾರಂಭವಾಗಿದ್ದು, ಬಹು ವಿದ್ಯಾರ್ಥಿಗಳು 1 ಕೋಟಿ ರೂ.ಗಿಂತ ಹೆಚ್ಚಿನ ಪ್ಯಾಕೇಜ್‌ಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.

 

ಐಐಟಿ ಸಂಸ್ಥೆಗಳು ಕೋವಿಡ್ ಪೂರ್ವದ ವರ್ಷಗಳಿಗಿಂತ ಹೆಚ್ಚಿನ ಒಟ್ಟಾರೆ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಐಐಟಿ ದೆಹಲಿಯಲ್ಲಿಯೇ ಕನಿಷ್ಠ 60 ಅಭ್ಯರ್ಥಿಗಳು 1 ಕೋಟಿ ರೂಪಾಯಿಗೂ ಅಧಿಕ ಪ್ಯಾಕೇಜ್‌ಗಳನ್ನು ಪಡೆದಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ.

ಖಾಸಗೀಕರಣದ ವಿರುದ್ಧ ಆಕ್ರೋಶ: ರಾಷ್ಟ್ರವ್ಯಾಪ್ತಿ ಎರಡು ದಿನ ಬ್ಯಾಂಕ್‌ಗಳ ಮುಷ್ಕರ

ಇನ್ನು ಐಐಟಿ ರೂರ್ಕಿಯ ವಿದ್ಯಾರ್ಥಿಯೊಬ್ಬ ಅಂತಾರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಿಂದ ವಾರ್ಷಿಕ 2.15 ಕೋಟಿ ರೂಪಾಯಿಯ ಆಫರ್‌ ಅನ್ನು ಪಡೆದಿಕೊಂಡಿದ್ದಾರೆ ಎಂದು ಕೂಡಾ ವರದಿಯು ವಿವರಿಸಿದೆ. ಅದೇ ರೀತಿ, ಐಐಟಿ ಬಾಂಬೆಯ ವಿದ್ಯಾರ್ಥಿಗೆ ಉಬರ್ ವಾರ್ಷಿಕ ಯುಎಸ್‌ಡಿ 2.74 ಲಕ್ಷ (ಸುಮಾರು 2.05 ಕೋಟಿ ರೂ.) ಆಫರ್‌ ಬಂದಿದ್ದು, , ಐಐಟಿ ಗುವಾಹಟಿ ವಿದ್ಯಾರ್ಥಿಗೆ ವಾರ್ಷಿಕ 2 ಕೋಟಿ ರೂ. ಆಫರ್‌ ಬಂದಿದೆ ಎಂದು ಮಾಹಿತಿ ಲಭಿಸಿದೆ.

ಐಐಟಿ ಉದ್ಯೋಗ ಅಭಿಯಾನ: 2.15 ಕೋಟಿ ರೂ ಟಾಪ್ ಆಫರ್‌

ಈ ಬಾರಿ ಕ್ಯಾಂಪಸ್‌ ಆಫರ್‌ ಶೇಕಡ 45 ರಷ್ಟು ಹೆಚ್ಚಳ

ಐಐಟಿ ವಾರಣಾಸಿಯ ಐದು ವಿದ್ಯಾರ್ಥಿಗಳಿಗೆ ಯುಎಸ್‌ನ ಉನ್ನತ ಸಂಸ್ಥೆಗಳಲ್ಲಿ ಒಂದಾದ ಉಬರ್‌ನಲ್ಲಿ ಉದ್ಯೋಗವು ದೊರಕಿದೆ. ಐವರಲ್ಲಿ ಓರ್ವ ವಿದ್ಯಾರ್ಥಿಗೆ ಸಂಸ್ಥೆಯ ಯುಎಸ್ ಕಚೇರಿಯಲ್ಲಿ ಕೆಲಸ ಮಾಡುವ ಆಫರ್‌ ಅನ್ನು ನೀಡಿದೆ. ಇನ್ನೊಬ್ಬರಿಗೆ 2 ಕೋಟಿ ರೂಪಾಯಿಯ ಆಫರ್‌ ಅನ್ನು ನೀಡಿದೆ. ಒಟ್ಟು 55 ಕಂಪನಿಗಳು ಐಐಟಿ ಬಿಎಚ್‌ಯು ವಿದ್ಯಾರ್ಥಿಗಳಿಗೆ ವಾರ್ಷಿಕ ಸರಾಸರಿ 32.89 ಲಕ್ಷ ಮತ್ತು ಕನಿಷ್ಠ 12 ಲಕ್ಷ ಪ್ಯಾಕೇಜ್‌ನೊಂದಿಗೆ 232 ಆಫರ್‌ ಲೆಟರ್‌ಗಳು ಲಭಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ಬಾರಿ ಕ್ಯಾಂಪಸ್‌ನಲ್ಲಿ ಬಂದ ಆಫರ್‌ಗಳು ಶೇಕಡ 45 ರಷ್ಟು ಹೆಚ್ಚಳವಾಗಿದೆ. ಡಿಸೆಂಬರ್ 1, 2021 ರಂದು ಭೇಟಿ ನೀಡಿದ ಕಂಪನಿಗಳು ನೀಡಿದ ಆಫರ್‌ಗಳು ಶೇಕಡ 35 ರಷ್ಟು ಹೆಚ್ಚಳವಾಗಿದೆ" ಎಂದು ಐಐಟಿ ದೆಹಲಿಯ ವೃತ್ತಿ ಸೇವೆಗಳ ಕಛೇರಿಯ ಮುಖ್ಯಸ್ಥರು ಅನಿಶ್ಯಾ ಒಬ್ರೈ ಮದನ್ ತಿಳಿಸಿದರು.

 

"ಡಿಸೆಂಬರ್ 1 ರಂದು ಪ್ಲೇಸ್‌ಮೆಂಟ್ ಸೀಸನ್‌ನ ಮೊದಲ ದಿನದ ಅಂತ್ಯದ ವೇಳೆಗೆ ಐಐಟಿ ದೆಹಲಿ ವಿದ್ಯಾರ್ಥಿಗಳು ಐದು ವರ್ಷಗಳಲ್ಲಿ ಅದರ ಅತ್ಯಧಿಕ ಪ್ರಿ-ಪ್ಲೇಸ್‌ಮೆಂಟ್ ಪಡೆದುಕೊಂಡಿದ್ದಾರೆ, ಅದರೊಂದಿಗೆ 400 ಕ್ಕೂ ಹೆಚ್ಚು ಪ್ಲೇಸ್‌ಮೆಂಟ್ ಆಫರ್‌ಗಳನ್ನು ಪಡೆದುಕೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳು ಹಲವಾರು ಪ್ಲೇಸ್‌ಮೆಂಟ್ ಆಫರ್‌ಗಳನ್ನು ಸಹ ಪಡೆದುಕೊಂಡಿದ್ದಾರೆ" ಎಂದು ಅನಿಶ್ಯಾ ಒಬ್ರೈ ಮದನ್ ವಿವರಿಸಿದರು.

ಇನ್ನು ಐಐಟಿ ಮದ್ರಾಸ್ ಕಳೆದ ವರ್ಷಕ್ಕಿಂತ ಮೊದಲ ದಿನದಲ್ಲಿ ಶೇಕಡ 43 ಅಧಿಕ ಆಫರ್‌ಗಳನ್ನು ಪಡೆದುಕೊಂಡಿದೆ ಎಂದು ಹೇಳಿದರೆ, ಇದೇ ಸಂದರ್ಭದಲ್ಲೊ ಐಐಟಿ ಮಂಡಿಯ ಸರಾಸರಿ ವೇತನ ಪ್ಯಾಕೇಜ್‌ಗಳಲ್ಲಿ 16 ಪ್ರತಿಶತ ಏರಿಕೆಯಾಗಿದೆ ಎಂದು ವರದಿ ಮಾಡಿದೆ. ಇನ್ನು ಐಐಟಿ ಮದ್ರಾಸ್‌ನಲ್ಲಿ ಮೊದಲ ದಿನದಲ್ಲಿ 34 ಕಂಪನಿಗಳು ಒಟ್ಟು 176 ಆಫರ್‌ಗಳನ್ನು ನೀಡಿದೆ. ಇದು ಈವರೆಗಿನ ಅತ್ಯಧಿಕವಾಗಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಇನ್ನು ಐಐಟಿ ಮದ್ರಾಸ್‌ನ 11 ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಆಫರ್‌ಗಳು ಬಂದಿದೆ.

"ದೇಶೀಯ ಮತ್ತು ಜಾಗತಿಕ ಸಂಸ್ಥೆಗಳು ಐಐಟಿ ವಿದ್ಯಾರ್ಥಿಗಳಿಗೆ ಆಫರ್‌ಗಳನ್ನು ನೀಡಿದೆ. ತಾಂತ್ರಿಕವಾಗಿ ಉತ್ತಮ, ನವೀನವಾಗಿರುವ ವ್ಯಕ್ತಿಗಳಿಗೆ ಹೆಚ್ಚಾಗಿ ಸಂಸ್ಥೆಗಳು ಆಫರ್‌ ನೀಡಿದೆ. ಹಲವು ವರ್ಷಗಳಿಂದ, ಉನ್ನತ ಸಂಸ್ಥೆಗಳು ನಮ್ಮ ಪದವೀಧರರಿಗೆ ಉತ್ತಮ ವೇತನ ಪ್ಯಾಕೇಜ್‌ಗಳನ್ನು ನೀಡುತ್ತಿವೆ. ಈ ವರ್ಷವೇ ಮೊದಲೇನಲ್ಲ. ಅಂತಹ ಉನ್ನತ ಮಟ್ಟದ ಕಂಪನಿಗಳು ನಮ್ಮ ಕ್ಯಾಂಪಸ್‌ನಲ್ಲಿರುವ ಪ್ರತಿಭೆಯನ್ನು ಗುರುತಿಸುತ್ತಿವೆ," ಎಂದು ಐಐಟಿ (ಬಿಎಚ್‌ಯು) ವಾರಣಾಸಿಯ ನಿರ್ದೇಶಕ ಪ್ರಮೋದ್ ಕುಮಾರ್ ಜೈನ್ ಹೇಳಿದರು.

English summary

IIT students bag over Rs 1cr packages in placement drives; Rs 2.15cr top offer on Day 1

IIT students bag over Rs 1cr packages in placement drives; Rs 2.15cr top offer on Day 1
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X