For Quick Alerts
ALLOW NOTIFICATIONS  
For Daily Alerts

2021-22ರ ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ. 9.5ಕ್ಕೆ ತಗ್ಗಿಸಿದ IMF

|

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2022-22ರ ಹಣಕಾಸು ವರ್ಷದ ಭಾರತದ ಆರ್ಥಿಕ ಬೆಳವಣಿಗೆಯ ದರವನ್ನು ಈ ಹಿಂದಿನ ಶೇಕಡಾ 12.5ರಿಂದ ಶೇಕಡಾ 9.5ಕ್ಕೆ ಇಳಿಸಿದೆ.

 

ದೇಶದ ಜನತೆಗೆ ಲಸಿಕೆಯ ಕೊರತೆ ಮತ್ತು ಕೊರೊನಾವೈರಸ್ ಹೊಸ ಅಲೆಗಳ ಸಾಧ್ಯತೆಯ ಕಾರಣದಿಂದ ಭಾರತದ ಆರ್ಥಿಕ ಬೆಳವಣಿಗೆ ದರ ಮುನ್ಸೂಚನೆಯನ್ನ ಪರಿಷ್ಕರಿಸಿದೆ ಎಂದು ಐಎಂಎಫ್ ಹೇಳಿದೆ.

'' ಮಾರ್ಚ್-ಮೇ ಅವಧಿಯಲ್ಲಿ ತೀವ್ರವಾದ ಎರಡನೇ ಕೋವಿಡ್ ತರಂಗದ ಅಲೆ ನಂತರ ಭಾರತದಲ್ಲಿ ಬೆಳವಣಿಗೆಯ ಭವಿಷ್ಯವನ್ನು ಇಳಿಸಲಾಗಿದೆ ಮತ್ತು ಆ ಹಿನ್ನಡೆಯಿಂದ ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳಲಿದೆ" ಎಂದು ಐಎಂಎಫ್ ಮಂಗಳವಾರ ಬಿಡುಗಡೆ ಮಾಡಿದ ತನ್ನ ವರ್ಲ್ಡ್‌ ಎಕನಾಮಿಕ್ ಔಟ್‌ಲುಕ್ (WEO) ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

2021-22ರ ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ. 9.5ಕ್ಕೆ ತಗ್ಗಿಸಿದ IMF

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರದ ಕುರಿತು ಐಎಂಎಫ್‌ ಮುನ್ಸೂಚನೆ ದರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಅನ್ನು ಹೋಲುತ್ತವೆ.

ಕೋವಿಡ್-19 ರ ಅಭೂತಪೂರ್ವ ಎರಡನೇ ತರಂಗದಿಂದ ಅದರ ಚೇತರಿಕೆಗೆ ಅಡ್ಡಿಯಾಗುತ್ತಿದ್ದರೂ ಸಹ, ಭಾರತದ ಆರ್ಥಿಕತೆಯು 2021 ರಲ್ಲಿ ಶೇಕಡಾ 8.3 ಮತ್ತು 2022 ರಲ್ಲಿ ಶೇಕಡಾ 7.5 ರಷ್ಟಾಗುತ್ತದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.

ಆದಾಗ್ಯೂ ಐಎಂಎಫ್ ಮುಂದಿನ ಹಣಕಾಸು ವರ್ಷದಲ್ಲಿ (FY 23) ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 8.5 ರಷ್ಟು, ಅದರ ಹಿಂದಿನ ದರಕ್ಕಿಂತ 160 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಿದೆ.

English summary

IMF Slashes India's Economic Growth Forecast For FY22 To 9.5%

The IMF has sharply scaled down India’s Economic growth projection by 300 basis points to 9.5 per cent for the current financial year from 12.5 per cent estimated earlier in April.
Story first published: Wednesday, July 28, 2021, 9:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X