For Quick Alerts
ALLOW NOTIFICATIONS  
For Daily Alerts

ರಾಜಸ್ಥಾನದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಸಿಕ್ಕಿದ್ದೇನು?

|

ಜೈಪುರ, ನವೆಂಬರ್ 05: ರಾಜಸ್ಥಾನದ 33ಕ್ಕೂ ಅಧಿಕ ಪ್ರದೇಶಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.

 

ಶೋಧ ಸಂದರ್ಭದಲ್ಲಿ ಲೆಕ್ಕಕ್ಕೆ ಸಿಗದ ಹಣದ ರಶೀತಿ ಹಾಗೂ ಜಾಮೀನು ಖರೀದಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಇದಲ್ಲದೆ ಮರಳನ್ನು ನಗದು ಮೂಲಕ ಮಾರಾಟ ಮಾಡಿರುವುದಕ್ಕೂ ಸಾಕ್ಷ್ಯಗಳು ದೊರೆತಿವೆ.

ಯಾವುದೇ ದಾಖಲೆ ಇಲ್ಲದ 2.31 ಕೋಟಿ ರೂ ಹಾಗೂ ದಾಖಲೆಗಳಿಲ್ಲದ 2.48 ಕೋಟಿ ರೂ. ಬೆಲೆ ಬಾಳುವ ಆಭರಗಳು ದೊರೆತಿವೆ. ಒಟ್ಟಿನಲ್ಲಿ ಈ ಶೋಧದಲ್ಲಿ 50 ಕೋಟಿ ಗೂ ಅಧಿಕ ಲೆಕ್ಕಕ್ಕೆ ಸಿಗದ ಆದಾಯವನ್ನು ಪತ್ತೆ ಮಾಡಲಾಗಿದೆ.

ರಾಜಸ್ಥಾನ: ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಸಿಕ್ಕಿದ್ದೇನು?

ಕೆಲವು ದಿನಗಳ ಹಿಂದಷ್ಟೇ ಆದಾಯ ತೆರಿಗೆ ಇಲಾಖೆಯು ಮಹಾರಾಷ್ಟ್ರ ಮಾಜಿ ಸಚಿವ ಅಜಿತ್ ಪವಾರ್ ಅವರ ಮನೆ ಮೇಲೂ ಐಟಿ ದಾಳಿ ನಡೆದಿತ್ತು.

ವಶಕ್ಕೆ ಪಡೆಯಳಾಗಿರುವ ಆಸ್ತಿಗಳಲ್ಲಿ ದಕ್ಷಿಣ ದೆಹಲಿಯಲ್ಲಿರುವ ಸುಮಾರು 20 ಕೋಟಿ ಮೌಲ್ಯದ ಫ್ಲಾಟ್ ಸೇರಿದೆ. ನಿರ್ಮಲ್ ಹೌಸ್‌ನಲ್ಲಿರುವ ಪಾರ್ಥ್ ಪವಾರ್ ಅವರ ಕಚೇರಿಯ ವೆಚ್ಚ ಸುಮಾರು 25 ಕೋಟಿ. ಜಾರಂದೇಶ್ವರ ಸಕ್ಕರೆ ಕಾರ್ಖಾನೆ ಸುಮಾರು 600 ಕೋಟಿ ರೂ.

ಇದಲ್ಲದೇ ಗೋವಾದಲ್ಲಿ ನಿಲಯ ಎಂಬ ರೆಸಾರ್ಟ್ 250 ಕೋಟಿ ರೂ. ಶಾಮೀಲಾಗಿವೆ. ಜಪ್ತಿ ಮಾಡಿರುವ ಆಸ್ತಿ ಬೇನಾಮಿ ಹಣದಿಂದ ಖರೀದಿಸಿಲ್ಲ ಎಂದು ಸಾಬೀತುಪಡಿಸಲು ಅಜಿತ್ ಪವಾರ್ ಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ.

ಆದಾಯ ತೆರಿಗೆ ಇಲಾಖೆಯು ಕಳೆದ ತಿಂಗಳು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರರಿಗೆ ಸಂಬಂಧಿಸಿದ ಕನಿಷ್ಠ 70 ನಿವೇಶನಗಳ ಮೇಲೆ ದಾಳಿ ನಡೆಸಿತ್ತು.

ದಾಳಿ ವೇಳೆ ಸುಮಾರು 184 ಕೋಟಿ ರೂ.ಗಳ ಲೆಕ್ಕಕ್ಕೆ ಸಿಗದ ಆದಾಯದ ಪುರಾವೆಗಳು ಪತ್ತೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು. ದಾಳಿಯಲ್ಲಿ ಲೆಕ್ಕಕ್ಕೆ ಸಿಗದ 2.13 ಕೋಟಿ ರೂಪಾಯಿ ನಗದು ಮತ್ತು 4.32 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.

 

12 ಗಂಟೆಗಳ ವಿಚಾರಣೆಯ ನಂತರ ಅನಿಲ್ ದೇಶಮುಖ್ ಅವರನ್ನು ಇಡಿ ಬಂಧಿಸಿದೆ: ಇದಕ್ಕೂ ಮುನ್ನ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು 12 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ತಡರಾತ್ರಿ ಅವರನ್ನು ಬಂಧಿಸಿದೆ. ಈ ಮನಿ ಲಾಂಡರಿಂಗ್ ಪ್ರಕರಣವು ಮಹಾರಾಷ್ಟ್ರ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್‌ನಲ್ಲಿರುವ ಸುಲಿಗೆ ಗ್ಯಾಂಗ್‌ಗೆ ಸಂಬಂಧಿಸಿದೆ.

ದೇಶಮುಖ್ (71) ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದೇಶಮುಖ್ ಅವರು ತಮ್ಮ ವಿಚಾರಣೆಯ ಸಮಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary

Income Tax Department Conducts Searches In Rajasthan

The search operation has resulted in the seizure of unaccounted cash of Rs. 2.31 crore and unexplained jewellery of Rs. 2.48 crore.
Story first published: Friday, November 5, 2021, 15:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X