For Quick Alerts
ALLOW NOTIFICATIONS  
For Daily Alerts

Breaking News: ತೆರಿಗೆದಾರರಿಗೆ ಸಿಹಿಸುದ್ದಿ: ಐಟಿಆರ್‌ ಗಡುವು ಮತ್ತೆ ವಿಸ್ತರಣೆ

|

2020-2021 ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಕೇಂದ್ರ ಸರ್ಕಾರವು 2020-2021ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (ITR) ಫೈಲಿಂಗ್‌ ಕೊನೆಯ ದಿನಾಂಕವನ್ನು ಮಾರ್ಚ್‌ 15ಕ್ಕೆ ವಿಸ್ತರಣೆ ಮಾಡಿದೆ.

 

2020-2021 ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಕೊನೆಯ ದಿನಾಂಕ ಡಿಸೆಂಬರ್ 31, 2021 ಆಗಿತ್ತು. ಆದರೆ ಈ ಕೊನೆಯ ದಿನಾಂಕ ಕಳೆದರೂ ಹಲವಾರು ಮಂದಿ ಐಟಿ ರಿಟರ್ನ್ ಅನ್ನು ಹಲವಾರು ತಾಂತ್ರಿಕ ಕಾರಣದಿಂದಾಗಿ ಸಲ್ಲಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಈ ನಡುವೆ ಐಟಿ ರಿಟರ್ನ್ ಸಲ್ಲಿಕೆ ಕೊನೆಯ ದಿನ ವಿಸ್ತರಣೆಯ ಆಗ್ರಹವೂ ಕೇಳಿ ಬಂದಿತ್ತು. ಈಗ ಸರ್ಕಾರ ಕೊನೆಯ ದಿನಾಂಕವನ್ನು ಡಿಸೆಂಬರ್ 31 ರಿಂದ ಮಾರ್ಚ್ 15ಕ್ಕೆ ವಿಸ್ತರಿಸಿದೆ.

ಈ ಬಗ್ಗೆ ಆದಾಯ ತೆರಿಗೆ ಇಲಾಖೆಯು ಟ್ಟಿಟ್ಟರ್‌ ಮೂಲಕ ಮಾಹಿತಿ ನೀಡಿದೆ. "ಐಟಿ ಕಾಯಿದೆ 1961 ರ ಅಡಿಯಲ್ಲಿ ಹಣಕಾಸು ವರ್ಷ 2021-22ರ ಐಟಿ ರಿಟರ್ನ್ ಫೈಲಿಂಗ್‌ ಮಾಡುವುದರಲ್ಲಿ ಕೋವಿಡ್‌ ಕಾರಣದಿಂದಾಗಿ ತೆರಿಗೆದಾರರಿಗೆ ತೊಂದರೆ ಉಂಟಾಗಿದೆ. ಈ ನಿಟ್ಟಿನಲ್ಲಿ ಐಟಿಆರ್‌ ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಲಾಗುತ್ತದೆ," ಎಂದು ಹೇಳಿದೆ. ಹಾಗೆಯೇ ಸುತ್ತೋಲೆಯನ್ನು ಕೂಡಾ ಹೊರಡಿಸಿದೆ.

ತೆರಿಗೆದಾರರಿಗೆ ಸಿಹಿಸುದ್ದಿ: ಐಟಿಆರ್‌ ಗಡುವು ಮತ್ತೆ ವಿಸ್ತರಣೆ

ಕೊನೆಯ ದಿನಾಂಕ ವಿಸ್ತರಣೆಗೆ ಆಗ್ರಹಿಸಿ ನಡೆದಿದ್ದ ಆನ್‌ಲೈನ್‌ ಅಭಿಯಾನ

ಹಲವಾರು ತಾಂತ್ರಿಕ ದೋಷಗಳು ಇರುವ ಕಾರಣದಿಂದಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಬೇಕು ಎಂದು ಹಲವಾರು ತೆರಿಗೆದಾರರು ಆಗ್ರಹ ಮಾಡಿ ಆನ್‌ಲೈನ್‌ ಮೂಲಕ ಅಭಿಯಾನವನ್ನು ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ #Extend_Due_Date_Immediately ಎಂಬ ಹ್ಯಾಷ್‌ಟ್ಯಾಗ್‌ ಭಾರೀ ಟ್ರೆಂಡ್‌ ಆಗಿತ್ತು. ಆದಾಯ ತೆರಿಗೆ ರಿಟರ್ನ್ ಪಾವತಿಗೆ ನೀಡಲಾದ ಗಡುವನ್ನು ಕೂಡಲೇ ವಿಸ್ತರಣೆ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಆದಾಯ ತೆರಿಗೆ ರಿಟರ್ನ್ಸ್ ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಹಿನ್ನೆಲೆಯಿಂದಾಗಿ ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಭಾರೀ ಅಡೆತಡೆ ಉಂಟಾಗುತ್ತಿದೆ. ಈ ಹಿನ್ನೆಲೆ ದಿನಾಂಕ ವಿಸ್ತರಣೆ ಮಾಡಬೇಕು ಎಂದು ಆಗ್ರಹ ಮಾಡಿದ್ದರು.

English summary

Income Tax Returns deadline extended to March 15

Income Tax Returns deadline extended to March 15.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X