For Quick Alerts
ALLOW NOTIFICATIONS  
For Daily Alerts

ಸ್ಪೈಸ್ ಜೆಟ್ ವಿಮಾನಗಳ ಮೇಲೆ ಪ್ರಧಾನಿ ಮೋದಿ, ಆರೋಗ್ಯ ಕಾರ್ಯಕರ್ತರ ಫೋಟೋ!

|

ನವದೆಹಲಿ, ಅಕ್ಟೋಬರ್ 22: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟದಲ್ಲಿ ದಾಖಲೆ ಬರೆದಿರುವ ಭಾರತ 100 ಕೋಟಿ ಡೋಸ್ ಲಸಿಕೆ ವಿತರಣೆಯಲ್ಲಿ ಯಶಸ್ವಿಯಾಗಿದೆ. ದೇಶದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವುದಕ್ಕೆ ಶ್ರಮಿಸಿದವರಿಗೆ ಸ್ಪೈಸ್ ಜೆಟ್ ವಿಶೇಷ ಗೌರವ ಸಲ್ಲಿಸಿದೆ.

 

ಕೊವಿಡ್-19 ಲಸಿಕೆ ವಿತರಣೆಗೆ ಶ್ರಮಿಸಿದವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಗುರುವಾರ ಸ್ಪೈಸ್ ಜೆಟ್ ವಿಶೇಷ ಲಿವರಿಯನ್ನು ಪರಿಚಯಿಸಿದೆ. ಸ್ಪೈಸ್ ಜೆಟ್ ಮೂರು ಬೋಯಿಂಗ್ 737 ವಿಮಾನಗಳನ್ನು ಲಿವರಿಯಲ್ಲಿ ಅಲಂಕರಿಸಲಾಗಿದೆ, ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆರೋಗ್ಯ ಕಾರ್ಯಕರ್ತರ ಫೋಟೋವನ್ನು ಹಾಕಲಾಗಿದೆ.

ಯುದ್ಧ ಮುಗಿಯುವವರೆಗೂ ಶಸ್ತ್ರಾಸ್ತ್ರ ಕೆಳಗಿಳಿಸಬೇಡಿ: ನರೇಂದ್ರ ಮೋದಿ

ಸ್ಪೈಸ್ ಜೆಟ್ ಪ್ರಕಾರ, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಸ್ಪೈಸ್ ಜೆಟ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಭಾಗವಹಿಸಿದ ಕಾರ್ಯಕ್ರಮದಲ್ಲಿ ವಿಶೇಷ ಲಿವರಿಯನ್ನು ಪರಿಚಯಿಸಲಾಯಿತು.

ಸ್ಪೈಸ್ ಜೆಟ್ ವಿಮಾನಗಳ ಮೇಲೆ ಮೋದಿ, ಆರೋಗ್ಯ ಕಾರ್ಯಕರ್ತರ ಫೋಟೋ!

ಕೇಂದ್ರ ಸರ್ಕಾರಕ್ಕೆ ಅಭಿನಂದನೆ:

"ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ 100 ಕೋಟಿ ಡೋಸ್ ಕೋವಿಡ್ -19 ಲಸಿಕೆ ನೀಡುವ ಈ ಅದ್ಭುತ ಕಾರ್ಯವನ್ನು ಸಾಧಿಸಿದ್ದಕ್ಕಾಗಿ ಭಾರತ ಸರ್ಕಾರವನ್ನು ಅಭಿನಂದಿಸುತ್ತೇನೆ. ಕೇವಲ 279 ದಿನಗಳಲ್ಲಿ 1 ಶತಕೋಟಿ ಡೋಸ್ ಅನ್ನು ನೀಡಲಾಗಿದೆ. ಇದು ನಮ್ಮ ಆರೋಗ್ಯ ಕಾರ್ಯಕರ್ತರ ಪರಿಶ್ರಮ ಹಾಗೂ ಸಾರ್ವಜನಿಕರ ಸಹಕಾರಕ್ಕೆ ಸಾಕ್ಷಿಯಾಗುತ್ತದೆ," ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದ್ದಾರೆ.

ಲಸಿಕೆ ವಿತರಣೆ ಕಾರ್ಯಾಚರಣೆ ಯಶಸ್ಸಿಗೆ ಗೌರವ:

ಭಾರತದಲ್ಲಿ ಮೊದಲ ಶ್ರೇಣಿ ಕಾರ್ಮಿಕರು ಮತ್ತು ಕೊರೊನಾವಾರಿಯರ್ಸ್ ಪರಿಶ್ರಮದ ಮೂಲಕ ನೀಡಿದ ಕೊಡುಗೆಯು ಸ್ಪೈಸ್ ಜೆಟ್ ಮತ್ತು ಸ್ಪೈಸ್ ಹೆಲ್ತ್ ಗೌರವಕ್ಕೆ ಅರ್ಹವಾಗಿದ್ದು ಅದನ್ನು ಶ್ಲಾಘಿಸಬೇಕಿದೆ. ನಮ್ಮ ವಿಮಾನ ಲಿವರಿಯು ಭಾರತದಲ್ಲಿ ಲಸಿಕೆ ವಿತರಣೆಯ ಕಾರ್ಯಾಚರಣೆ ಯಶಸ್ಸಿಗೆ ಸಲ್ಲಿಸಿದ ಒಂದು ಸಣ್ಣ ಗೌರವವಷ್ಟೇ. ಈ ಸಂಭ್ರಮ ಮತ್ತು ಉತ್ಸಾಹಕ್ಕೆ ಎಂದಿಗೂ ಸಾವಿಲ್ಲ. ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನವು ಜಗತ್ತಿನಲ್ಲೇ ಅತಿದೊಡ್ಡ ಮತ್ತು ವೇಗವಾದ ಕಾರ್ಯಾಚರಣೆಯಾಗಿದೆ. ಸ್ವದೇಶಿ ಲಸಿಕೆಗಳನ್ನು ವಿತರಿಸುತ್ತಿರುವ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಒಂದಾಗಿದೆ," ಎಂದು ಸಿಂಗ್ ಹೇಳಿದ್ದಾರೆ.

 

ಕೊವಿಡ್-19 ವಿರುದ್ಧದ ಹೋರಾಟದಲ್ಲಿ ಸ್ಪೈಸ್ ಜೆಟ್ ಪಾತ್ರ:

ಭಾರತದಲ್ಲಿ ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಸ್ಪೈಸ್ ಜೆಟ್ ಮಹತ್ವದ ಪಾತ್ರ ವಹಿಸಿದೆ. ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಅಗತ್ಯ ಔಷಧಿ, ವೈದ್ಯಕೀಯ ಉಪಕರಣ ಹಾಗೂ ಪರಿಹಾರ ಸಾಮಗ್ರಿಗಳನ್ನು ದಾಖಲೆ ಪ್ರಮಾಣದಲ್ಲಿ ಹೊತ್ತುಕೊಂಡು ಹಲವು ಪ್ರದೇಶಗಳಿಗೆ ತಲುಪಿಸಿದ ಖ್ಯಾತಿ ಸ್ಪೈಸ್ ಜೆಟ್ ಗೆ ಸಲ್ಲುತ್ತದೆ. "ಕಳೆದ 2020ರ ಮಾರ್ಚ್ ತಿಂಗಳಿನಿಂದ ಸುಮಾರು 26,300 ಸರಕು ವಿಮಾನಗಳು ಕಾರ್ಯ ನಿರ್ವಹಿಸಿದ್ದು, ಸುಮಾರು 200,000 ಟನ್‌ಗಳಷ್ಟು ಸರಕುಗಳನ್ನು ಸಾಗಿಸಿದೆ. ಅದಲ್ಲದೆ, ಏರ್‌ಲೈನ್ 90,000 ಆಕ್ಸಿಜನ್ ಸಾಂದ್ರತೆಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಸಹ ಏರ್‌ಲಿಫ್ಟ್ ಮಾಡಿದೆ.

100 ಕೋಟಿ ಡೋಸ್ ಲಸಿಕೆ ವಿತರಣೆ:

ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಿ 9 ತಿಂಗಳಿನಲ್ಲಿ 100 ಕೋಟಿ ಡೋಸ್ ಲಸಿಕೆಯನ್ನು ವಿತರಿಸುವ ಮೂಲಕ ಜಗತ್ತಿನಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿದ ಎರಡನೇ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಅಕ್ಟೋಬರ್ 21ರ ರಾತ್ರಿ 7 ಗಂಟೆ ವೇಳೆಗೆ 1,00,53,63,691 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 70,91,10,871 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ವಿತರಿಸಿದ್ದರೆ, 29,62,52,820 ಮಂದಿಗೆ ಎರಡನೂ ಡೋಸ್ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ.

ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದರ ನಂತರ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಅತಿಹೆಚ್ಚು ಲಸಿಕೆ ವಿತರಿಸಿದ ದೇಶದ ಟಾಪ್-5 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

English summary

India 100 crore vaccination; SpiceJet puts picture of Modi and health workers on Boeing 737 aircraft

India 100 crore vaccination milestone; SpiceJet puts picture of PM Modi and healthcare workers on Boeing 737 aircraft.
Story first published: Friday, October 22, 2021, 14:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X