For Quick Alerts
ALLOW NOTIFICATIONS  
For Daily Alerts

UKಗೆ ಆಶ್ರಯ ಕೋರಿದ ಮಲ್ಯ; ಮನವಿ ತಿರಸ್ಕರಿಸಲು ಕೇಳಿದ ಭಾರತ

|

ಭಾರತೀಯ ಉದ್ಯಮಿ ವಿಜಯ್ ಮಲ್ಯ ಮನವಿ ಮಾಡಿರುವಂತೆ ಆತನಿಗೆ ಆಶ್ರಯ ನೀಡಬಾರದು ಎಂದು ಭಾರತವು ಯು.ಕೆ. ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ. ಭಾರತದಲ್ಲಿ ಕಿರುಕುಳ ಆಗುತ್ತದೆ ಎಂಬ ಮಲ್ಯ ಆರೋಪಕ್ಕೆ ಯಾವುದೇ ಆಧಾರ ಇಲ್ಲ ಎಂದು ತಿಳಿಸಲಾಗಿದೆ.

 

ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ ಮಾತನಾಡಿ, ಮಲ್ಯ ಅತಿ ಶೀಘ್ರದಲ್ಲಿ ಹಸ್ತಾಂತರ ಆಗುವಂತೆ ಯು.ಕೆ. ಜತೆಗೆ ಭಾರತ ಸಂಪರ್ಕದಲ್ಲಿ ಇದೆ. ಮಲ್ಯ ಆರೋಪಿಸಿರುವಂತೆ ಭಾರತದಲ್ಲಿ ಕಿರುಕುಳ ಆಗುತ್ತದೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಆದ್ದರಿಂದ ಆಶ್ರಯದ ಮನವಿಯನ್ನು ಪರಿಗಣಿಸಬಾರದು ಎಂದು ಕೇಳಿಕೊಳ್ಳಲಾಗಿದೆ ಎಂದು ಮಾಧ್ಯಮದವರಿಗೆ ಅವರು ತಿಳಿಸಿದ್ದಾರೆ.

9,000 ಕೋಟಿ ರುಪಾಯಿಗೂ ಹೆಚ್ಚು ಬಾಕಿ

9,000 ಕೋಟಿ ರುಪಾಯಿಗೂ ಹೆಚ್ಚು ಬಾಕಿ

ಭಾರತೀಯ ಬ್ಯಾಂಕ್ ಗಳಿಗೆ ಮಲ್ಯ 9,000 ಕೋಟಿ ರುಪಾಯಿಗೂ ಹೆಚ್ಚು ಬಾಕಿ ಉಳಿಸಿಕೊಂಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪಿತೂರಿ ಹಾಗೂ ವಂಚನೆ ಆರೋಪಗಳಿವೆ. ಭಾರತಕ್ಕೆ ಹಸ್ತಾಂತರ ಆಗುವುದರ ವಿರುದ್ಧ ಮಲ್ಯ ಸಲ್ಲಿಸಿದ್ದ ಮನವಿಯನ್ನು ಲಂಡನ್ ಹೈಕೋರ್ಟ್ ತಳ್ಳಿಹಾಕಿತ್ತು. ಆ ನಂತರ ಯು.ಕೆ. ಸುಪ್ರೀಂ ಕೋರ್ಟ್ ನಲ್ಲೂ ಮಲ್ಯ ಅರ್ಜಿ ತಿರಸ್ಕೃತವಾಗಿದೆ. ಯುನೈಟೆಡ್ ಕಿಂಗ್ ಡಮ್ ನಲ್ಲಿ ಇನ್ನೂ ಕಾನೂನು ತೊಡಕುಗಳಿವೆ. ಆದ್ದರಿಂದ ಅವು ನಿವಾರಣೆ ಆಗುವ ತನಕ ಹಸ್ತಾಂತರ ಸಾಧ್ಯವಿಲ್ಲ. ಇದು ಗೋಪ್ಯ ವಿಚಾರ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಗಲ್ಲ ಎಂದು ಭಾರತದಲ್ಲಿರುಬ ಬ್ರಿಟಿಷ್ ಹೈಕಮಿಷನ್ ತಿಳಿಸಿದೆ.

ಮಾನವೀಯ ನೆಲೆ ಮೇಲೆ ಆಶ್ರಯ ಕೋರಿರುವ ಮಲ್ಯ

ಮಾನವೀಯ ನೆಲೆ ಮೇಲೆ ಆಶ್ರಯ ಕೋರಿರುವ ಮಲ್ಯ

ಯು.ಕೆ. ಹಸ್ತಾಂತರ ಕಾಯ್ದೆ ಪ್ರಕಾರ, ಹೈ ಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಆದೇಶ ಬಂದ 28 ದಿನದೊಳಗೆ ಹಸ್ತಾಂತರ ಆಗಬೇಕು. ಆದರೂ ಯಾವುದೇ ವ್ಯಕ್ತಿ ನಿರಾಶ್ರಿತ ಆಗಿ ಯು.ಕೆ.ನಲ್ಲಿ ಉಳಿಯುವುದಕ್ಕೆ ಮನವಿ ಸಲ್ಲಿಸಿದರೆ, ಆ ಪ್ರಕರಣ ಇತ್ಯರ್ಥ ಆಗುವ ತನಕ ಹಸ್ತಾಂತರ ಸಾಧ್ಯವಿಲ್ಲ. ಸಿಎನ್ ಬಿಸಿ- ಟಿವಿ 18 ಮಂಗಳವಾರ ವರದಿ ಮಾಡಿರುವಂತೆ, ಮಾನವೀಯ ನೆಲೆಯ ಮೇಲೆ ವಿಜಯ್ ಮಲ್ಯ ಆಶ್ರಯ ಕೇಳಿದ್ದಾರೆ. ಅದರಲ್ಲೂ ಮಾನವ ಹಕ್ಕುಗಳ ಯುರೋಪಿಯನ್ ಒಪ್ಪಂದ (ECHR) ಪರಿಚ್ಛೇದ 3ರ ಅಡಿಯಲ್ಲಿ ಆಶ್ರಯವನ್ನು ಕೇಳಿದ್ದಾರೆ. ಇದರಲ್ಲಿ ಹಿಂಸೆಗೆ ನಿರ್ಬಂಧ ಕೂಡ ಒಳಗೊಂಡಿದೆ. ಅದಕ್ಕೆ ವ್ಯಾಖ್ಯಾನ ನೀಡುತ್ತಾ "ಕೆಟ್ಟ ವೈದ್ಯಕೀಯ ಸ್ಥಿತಿ" ಎಂದು ಕೂಡ ಹೇಳಲಾಗಿದೆ.

ಸಾಮಾನ್ಯವಾಗಿ ಆರು ತಿಂಗಳು ಸಮಯ ತೆಗೆದುಕೊಳ್ಳುತ್ತದೆ
 

ಸಾಮಾನ್ಯವಾಗಿ ಆರು ತಿಂಗಳು ಸಮಯ ತೆಗೆದುಕೊಳ್ಳುತ್ತದೆ

ಮಲ್ಯ ಪರ ವಾದ ಮಂಡಿಸುತ್ತಿರುವ ಕಾನೂನು ತಂಡ ಈ ಹಿಂದೆ ಕೂಡ ಭಾರತದಲ್ಲಿನ ಜೈಲುಗಳ ಸ್ಥಿತಿ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಇದೀಗ ಯುನೈಟೆಡ್ ಕಿಂಗ್ ಡಮ್ ನಲ್ಲಿ ಆಶ್ರಯ ಕೋರಿ ವಿಜಯ್ ಮಲ್ಯ ಅರ್ಜಿ ಸಲ್ಲಿಸಿರುವುದರಿಂದ ಇನ್ನಷ್ಟು ಸಮಯ ದೊರೆತಂತಾಗುತ್ತದೆ. ಇಂಥ ಪ್ರಕರಣಗಳಲ್ಲಿ ತೀರ್ಮಾನ ಕೈಗೊಳ್ಳಲು ಯು.ಕೆ. ಗೃಹ ಕಚೇರಿ ಸಾಮಾನ್ಯವಾಗಿ ಆರು ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆ ಪ್ರಕರಣದ ಸಂಕೀರ್ಣತೆ ಆಧಾರದಲ್ಲಿ ಈ ಸಮಯ ಹೆಚ್ಚು- ಕಡಿಮೆ ಕೂಡ ಆಗಬಹುದು.

English summary

India Asked UK To Reject Vijay Mallya's Asylum Request

India government asked UK to reject businessman Vijay Mallya's asylum request.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X